ಮಹಾವೀರ ಮಂದಿರ

WDWD
ಭಾರತದ ಅತ್ಯಂತ ಜನಪ್ರಿಯ ಜೈನ ತೀರ್ಥ ಕ್ಷೇತ್ರಗಳಲ್ಲಿ ಶ್ರೀಮಹಾವೀರ್‌ಜಿ ಕ್ಷೇತ್ರವೂ ಒಂದು. 24ನೇ ಜೈನ ತೀರ್ಥಂಕರ ಮಹಾವೀರನ ಈ ಮಂದಿರವನ್ನು ಗಂಭೀರ್ ನದಿ ತಟದಲ್ಲಿ ನಿರ್ಮಿಸಲಾಗಿದೆ. ಅಮೃತಶಿಲೆಯಲ್ಲಿ ಆಕರ್ಷಕವಾಗಿರುವ ಈ ಮಂದಿರಕ್ಕೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯೂ ಇದೆ.

ಸುಮಾರು ಎರಡು ಶತಮಾನಗಳ ಹಿಂದೆ, ಹಸುವೊಂದಿತ್ತು. ಅದು ಬೆಳಿಗ್ಗೆ ಮನೆ ಬಿಟ್ಟರೆ ಸಾಯಂಕಾಲ ಹಿಂದಿರುಗಿ ಬರುತ್ತಿತ್ತು. ಇದರಲ್ಲೇನೂ ಹೊಸ ವಿಷಯ ಇರಲಿಲ್ಲ. ಆದರೆ ಅದು ಹಿಂತಿರುಗಿ ಬರುವಾಗ ಅದರ ಕೆಚ್ಚಲು ಖಾಲಿ ಖಾಲಿ. ಈ ನಿಗೂಢವನ್ನು ಭೇದಿಸಲು, ಒಂದು ದಿನ ಆಕಳಿನ ಮಾಲೀಕರ ಮಗ ಅದನ್ನೇ ಅನುಸರಿಸಿದ.

ಹಸು ಒಂದು ನಿರ್ದಿಷ್ಟ ಜಾಗದಲ್ಲಿ ನಿಲ್ಲುತ್ತಿತ್ತು, ಮತ್ತು ತನ್ನ ಕೆಚ್ಚಲಿನಿಂದ ಹಾಲನ್ನೆಲ್ಲಾ ಖಾಲಿ ಮಾಡಿಸುತ್ತಿತ್ತು ಎಂಬುದನ್ನು ಕಂಡುಕೊಂಡನಾತ. ತೀವ್ರ ಕುತೂಹಲಗೊಂಡ
WDWD
ದನಗಾಹಿಗಳು, ಆ ಸ್ಥಳವನ್ನು ಅಗೆದರು. ಅಗೆದಾಗ ಶ್ರೀ ಮಹಾವೀರನ ವಿಗ್ರಹವೊಂದು ದೊರೆಯಿತು. ಇದು ಮಹಾವೀರನ ಮೂರ್ತಿಯ ಹಿನ್ನೆಲೆ.


ಅಮೃತ ಶಿಲೆಯ ಮೇಲೆ ಕಟ್ಟಿರುವ ಈ ಸುಂದರ ಮಂದಿರವು ಪುರಾತನ ಮತ್ತು ಆಧುನಿಕ ಜೈನ ಶಿಲ್ಪಕಲೆಯ ಪ್ರತೀಕ. ಪ್ರಾಚೀನ ಜೈನ ಮಂದಿರಗಳು ಅದ್ಭುತ ಅಲಂಕಾರ ಮತ್ತು ಕೆತ್ತನೆ ಕೆಲಸದಿಂದ ರಾರಾಜಿಸುತ್ತಿದ್ದರೆ, ಮಹಾವೀರ ಮಂದಿರವು ಸಮಕಾಲೀನ ವಿನ್ಯಾಸವನ್ನು ಹೊಂದಿದೆ. ಹೆಚ್ಚಿನ ಜೈನ ಮಂದಿರಗಳಂತೆಯೇ, ಇದು ಕೂಡ ಸಣ್ಣ ಗುಡಿಗಳ ಸಂಕೀರ್ಣ. ಮುಖ್ಯ ಮಂದಿರದ ಒಳಗೆ ಜೈನ ತೀರ್ಥಂಕರರ ವಿಗ್ರಹಗಳು ಸೂಕ್ಷ್ಮವಾಗಿ ಕೆತ್ತಲಾದ ಕಂಬಗಳಿಂದ ಆವೃತವಾಗಿವೆ.

WDWD
ಶಾಂತಿನಾಥ ಸ್ವಾಮಿಯ ಬೃಹದಾಕಾರದ ವಿಗ್ರಹವೂ ಇಲ್ಲಿದೆ. ಇದರ ಎತ್ತರ 32 ಅಡಿ. ಅತ ತನ್ನ ಭಕ್ತರನ್ನೇ ದಿಟ್ಟಿಸಿ ನೋಡುತ್ತಿರುವಂತಿದೆ. ಈ ಮಂದಿರದ ಅತ್ಯಂತ ಆಕರ್ಷಕ ನೋಟವು ಅನಾವರಣಗೊಳ್ಳುವುದು ಸಂಜೆಗತ್ತಲಾದ ಬಳಿಕ. ಇಡೀ ಸಂಕೀರ್ಣವೇ ವಿದ್ಯುದ್ದೀಪಗಳಿಂದ ಅಲಂಕೃತವಾಗಿ, ದೀಪಗಳ ಹಬ್ಬವೋ ಎಂಬಂತೆ ಕಂಗೊಳಿಸುತ್ತದೆ.

ಶ್ರೀ ಮಹಾವೀರ ಮಂದಿರವನ್ನು ಸಂದರ್ಶಿಸಲು ಸೂಕ್ತ ಸಮಯ ಎಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳು. ಅದು ಆ ಮಂದಿರದಲ್ಲಿ ಹಬ್ಬದ ಕಾಲ. ಶ್ರೀ ಮಹಾವೀರ ಹಬ್ಬ ನಡೆಯುವುದು ಚೈತ್ರ ಶುಕ್ಲ ಏಕಾದಶಿಯಿಂದ ವೈಶಾಖ ಕೃಷ್ಣ ದ್ವಿತೀಯ (ಅಂದರೆ ಮಾರ್ಚ್-ಏಪ್ರಿಲ್ ಅವಧಿ) ನಡೆಯುತ್ತದೆ.

ಇಲ್ಲಿಗೆ ಹೋಗುವುದು ಹೇಗೆ?

ರೈಲುಮಾರ್ಗ: ಈ ದಿಗಂಬರ ಜೈನ ತೀರ್ಥಯಾತ್ರಾ ಸ್ಥಳವು ದೆಹಲಿ-ಮುಂಬಯಿ ಬ್ರಾಡ್‌ಗೇಜ್ ಮಾರ್ಗದಲ್ಲಿರುವ ಸವಾಯ್ ಮಾಧೋಪುರದಿಂದ ರೈಲಿನಲ್ಲಿ 90 ಕಿ.ಮೀ. ದೂರದಲ್ಲಿದೆ.

ರಸ್ತೆ ಮಾರ್ಗ: ಮಹಾವೀರ ಮಂದಿರವು ಜೈಪುರದಿಂದ 176 ಕಿ.ಮೀ. ದೂರದಲ್ಲಿದೆ.

ವಾಯುಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಜೈಪುರ. (176 ಕಿ.ಮೀ. ದೂರ).

ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜೈನ ಧರ್ಮ

ತಲಕಾಡು

ಇದು ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ಲ, ಪ್ರವಾಸಿ ತಾಣವೂ ಹೌದು. ಕಾವೇರಿಯ ಮಡಿಲಲ್ಲಿರುವ ಈ ಸ್ಥಳ ಟಿ ...

ಧರ್ಮಸ್ಥಳ

ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಇದೂ ಕೂಡ ಒಂದು. ಮಂಗಳೂರು ಜಿಲ್ಲೆಯಲ್ಲಿರುವ ಧರ್ಮಸ್ಥಳ, ಅಲ್ಲಿಂದ ...

ಜೈನ ಧರ್ಮದ ಉಗಮ

ಜೈನ ಧರ್ಮವು ಬೌದ್ಧ ಧರ್ಮಕ್ಕಿಂತಲೂ ಹಿಂದಿನದು. ಜೈನ ಧರ್ಮದ ಪ್ರಮುಖ ಪ್ರವಾದಿ ವರ್ಧಮಾನ ಮಹಾವೀರನು ಜೈನ ...

ಜೈನ ಧರ್ಮದ ತ್ರಿರತ್ನಗಳು

ಪ್ರತಿ ಧರ್ಮದಲ್ಲೂ ಮೋಕ್ಷ ಸಾಧನೆಗೆ ಕೆಲವು ಮಾರ್ಗಗಳನ್ನು ಸೂಚಿಸಿರುವಂತೆ ಜೈನ ಧರ್ಮದಲ್ಲೂ ಮೂರು ...

Widgets Magazine
Widgets Magazine