ಹಿಂದೂ ಶಾಸ್ತ್ರದ ಪ್ರಕಾರ ಹೆಣ್ಣು ಋತುಚಕ್ರದ ಸಮಯದಲ್ಲಿ ಈ ಆಚರಣೆಗಳನ್ನು ಪಾಲಿಸಬೇಕು

ಬೆಂಗಳೂರು, ಶನಿವಾರ, 14 ಏಪ್ರಿಲ್ 2018 (08:36 IST)

ಬೆಂಗಳೂರು : ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಮುಟ್ಟಿನ ಅಥವಾ ಋತುಚಕ್ರದ ಅವಧಿಯಲ್ಲಿ ಹಿಂದೂ ಹುಡುಗಿಯರು ಅನೇಕ ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ. ಅದು ಹಿಂದೆ ಮಾತ್ರವಲ್ಲ ಇಂದಿಗೂ ಕೂಡ ಜಾರಿಯಲ್ಲಿವೆ. ಆ ಆಚರಣೆಗಳು ಯಾವುದೆಂದು ಇಲ್ಲಿದೆ ನೋಡಿ.


*ಹಿ೦ದೂ ಸ೦ಪ್ರದಾಯದ ಕೆಲವೊ೦ದು ಕಲ್ಪನೆಗಳ ಪ್ರಕಾರ, ಋತುಚಕ್ರದ ಅವಧಿಯಲ್ಲಿ ಹುಡುಗಿಯು ಅಪವಿತ್ರಳಾಗಿರುವುದರಿಂದ ಮುಟ್ಟಾಗಿರುವ ಹೆಣ್ಣು ದೇವಾಲಯಕ್ಕೆ ಭೇಟಿ ಕೊಡುವ೦ತಿಲ್ಲ ಅಥವಾ ಆ ಸ೦ದರ್ಭದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವ೦ತಿಲ್ಲ.

*ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಅಡುಗೆ ಮಾಡುವ ಹಾಗೇ ಇಲ್ಲ ಹಾಗೇ ಅಡುಗೆ ಕೋಣೆಯನ್ನು ಕೂಡ ಪ್ರವೇಶಿಸುವಂತಿಲ್ಲ.

*ಆ ಸಂದರ್ಭದಲ್ಲಿ ಉಪ್ಪಿನಕಾಯಿಯನ್ನು ಮುಟ್ಟುವಂತಿಲ್ಲ. ಒಂದುವೇಳೆ ಮುಟ್ಟಿದರೆ ಅದು ಹಾಳಾಗುತ್ತದೆ ಎಂಬ ನಂಬಿಕೆ ಇದೆ.

*ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಅದ್ದರಿಂದ ಹುಡುಗಿಯರು ಮುಟ್ಟಿನ ದಿನಗಳಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸುವಂತಿಲ್ಲ. ಈ ಅವಧಿಯಲ್ಲಿ ಅಂತಹ ಹುಡುಗಿಯರು ತಮ್ಮ ನೆರಳೂ ಸಹ ತುಳಸಿ ಗಿಡದ ಮೇಲೆ ಬೀಳದಂತೆ ಎಚ್ಚರವಹಿಸಬೇಕಾಗುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ, ಋತುಚಕ್ರದ ಅವಧಿಯು ಮುಗಿದ ತರುವಾಯ ಮೂರನೆಯ ದಿನದಂದು ಆಕೆಯು ತನ್ನೆಲ್ಲಾ ಬಟ್ಟೆಗಳು ಹಾಗೂ ಹೊದಿಕೆ, ಬೆಡ್ ಶೀಟ್ ಗಳನ್ನು ಸ್ವಚ್ಛವಾಗಿ ಒಗೆಯಬೇಕು. ಹಾಗೂ ಸ್ನಾನ ಮಾಡಿ ಒಳಗೆ ಬರಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಅಡುಗೆ ಮಾಡುವಾಗ ಯಾವ ದಿಕ್ಕಿಗೆ ಮುಖ ಮಾಡಿ ಮಾಡಿದರೆ ಉತ್ತಮ ಗೊತ್ತಾ..?

ಬೆಂಗಳೂರು : ಕೆಲವರು ತಮಗೆ ಅನುಕೂಲವಾದ ಕಡೆ ಅಡುಗೆ ಮನೆಯನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ ಇದರಿಂದ ...

news

ಕನಸಿನಲ್ಲಿ ಶಿವನಿಗೆ ಸಂಬಂದಪಟ್ಟ ಈ ವಸ್ತುಗಳು ಕಂಡರೆ ಏನಾಗುತ್ತೆ ಗೊತ್ತಾ…?

ಬೆಂಗಳೂರು : ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ...

news

ಎಲ್ಲರ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಇದ್ದೇ ಇರುತ್ತದೆ. ಯಾಕೆ ಗೊತ್ತಾ..?

ಬೆಂಗಳೂರು : ಎಲ್ಲರ ಮನೆಯ ದೇವರ ಕೋಣೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಇರುತ್ತದೆ. ಯಾವ ದೇವರ ...

news

ಹಸುವಿನ ಕೊಟ್ಟಿಗೆ ಯಾವ ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮ …?

ಬೆಂಗಳೂರು : ಹಳ್ಳಿಕಡೆ ಹೆಚ್ಚಿನವರು ತಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಾರೆ. ಅದರ ಹಾಲಿನಿಂದಲ್ಲೇ ಜೀವನ ...

Widgets Magazine
Widgets Magazine