ನಮ್ಮ ಹಿರಿಯರು ಪ್ರಕಾರ ಈ ಎಲ್ಲಾ ರೀತಿಯಲ್ಲಿ ಮಗುವಿಗೆ ತಾಕಿದ ದೃಷ್ಟಿಯನ್ನು ನಿವಾರಣೆ ಮಾಡಬಹುದಂತೆ

ಬೆಂಗಳೂರು, ಗುರುವಾರ, 24 ಮೇ 2018 (06:27 IST)

ಬೆಂಗಳೂರು : ಚಿಕ್ಕಮಕ್ಕಳುನ್ನು ನೋಡಿ ಆ ಮಗು ಎಷ್ಟು ಚೆನ್ನಾಗಿದೆ, ಆ ಮಗು ಎಷ್ಟು ಮುದ್ದಾಗಿದೆ ಎಂದು ಯಾರೇ ಹೇಳಿದರೂ ಕೂಡ ಆ ಮಗುವಿಗೆ ದೃಷ್ಟಿ ತಾಕಿದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಈ ರೀತಿ ಮಗುವಿಗೆ ದೃಷ್ಟಿ ತಗಲದೆ ಹಾಗೂ ತಾಕಿದ ದೃಷ್ಟಿಗಳನ್ನು ತೆಗೆಯಲು ಹಲವು ವಿಧಗಳಿವೆ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ.


ಮಕ್ಕಳಿಗೆ ಕಪ್ಪಗಿನ ದೃಷ್ಟಿ ಬೊಟ್ಟು ಇಡುವುದರಿಂದ ಅವರಿಗೆ ದೃಷ್ಟಿ ತಾಕಲ್ಲವಂತೆ. ಅಷ್ಟೇ ಅಲ್ಲ, ಯಾರಾದರೂ ಅಂತಹ ಮಕ್ಕಳನ್ನು ನೋಡಿದ ಕೂಡಲೆ ಅವರ ದೃಷ್ಟಿ ಮೊದಲು ಆ ಬೊಟ್ಟಿನ ಮೇಲೆ ಬೀಳುತ್ತದೆ. ಇದರಿಂದ ಮಕ್ಕಳಿಗೆ ದೃಷ್ಟಿ ತಾಕುವುದಿಲ್ಲ ಎನ್ನುತ್ತಾರೆ ಹಿರಿಯರು.

ಹಾಗೇ ಕೆಂಪು, ಕಪ್ಪು, ಬಿಳಿ ಅನ್ನವನ್ನು ಮೂರು ಮುದ್ದೆ ಮಾಡಿಕೊಂಡು ಅವುಗಳಿಂದ ದೃಷ್ಟಿ ತೆಗೆದು ನಿವಾಳಿಸಿ ಎಸೆದರೆ ದೃಷ್ಟಿ ನಿವಾರಣೆಯಾಗುತ್ತದೆ. ಮೆಣಸಿನಕಾಯಿಯನ್ನು ಸುತ್ತಲೂ ಮೂರು ಬಾರಿ ನಿವಾಳಿಸಿ ಥೂ…ಥೂ…ಥೂ…ಎಂದು ಅವುಗಳಲ್ಲಿ ಉಗಿದರೂ ದೃಷ್ಟಿ ಹೋಗುತ್ತದೆ. ಪೊರಕೆ, ಚಪ್ಪಲಿಯನ್ನು ಅದೇ ರೀತಿ ಬಳಸಿ ದೃಷ್ಟಿ ತೆಗೆದರೂ ದೃಷ್ಟಿ ಹೋಗುತ್ತದೆ. ಕೊರಳಿಗೆ ಕಪ್ಪುದಾರ ಹಾಕಿದರೂ, ಕೈಗೆ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೂ ದೃಷ್ಟಿ ನಿವಾರಣೆಯಾಗುತ್ತದೆ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಕೆಂಪು ಕಪ್ಪು ಬಿಳಿ ಅನ್ನ ಭಾನುವಾರ ವಿಧ ಮಕ್ಕಳು Bangalore Red Black White Rice Sunday Type Children

ಜ್ಯೋತಿಷ್ಯಶಾಸ್ತ್ರ

news

ಶಿವಪೂಜೆಗೆ ಈ ಹೂವನ್ನು ಬಳಸಬಾರದಂತೆ. ಅದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ

ಬೆಂಗಳೂರು : ಶಿವನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲ ನೇರವೇರುವುದರ ಜತೆಗೆ ...

news

ವಿಷ್ಣು ಪುರಾಣದ ಪ್ರಕಾರ ಹುಡುಗರು ಎಂತಹ ಗುಣಗಳಿರುವ ಹುಡುಗಿಯನ್ನು ಮದುವೆಯಾಗಬೇಕಂತೆ ಗೊತ್ತಾ?

ಬೆಂಗಳೂರು : ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗಿ ಭೂಮಿಯ ಮೇಲೆ ನಡೆಯುತ್ತವೆ ಎಂದು ಹೇಳುತ್ತಾರೆ. ಅಷ್ಟೇ ...

news

ಸಕಲ ಸಿದ್ಧಿಗಾಗಿ ಲಕ್ಷ್ಮೀದೇವಿಗೆ ತುಪ್ಪದ ದೀಪವನ್ನು ಹಚ್ಚುವಾಗ ಈ ನಿಯಮದ ಪ್ರಕಾರ ದೀಪ ಹಚ್ಚಿದರೆ ಉತ್ತಮ

ಬೆಂಗಳೂರು : ಹಿಂದೂಗಳ ಸಂಪ್ರದಾಯದಲ್ಲಿ ಅತೀ ಮುಖ್ಯವಾದುದು, ದೀಪಾರಾಧನೆ. ದೀಪ ಇಲ್ಲದ ಮನೆಯನ್ನು ಹಿಂದೂ ...

news

ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾ ಅಚರಣೆ ಮಾಡಬೇಕಂತೆ

ಬೆಂಗಳೂರು : ಶಿಷ್ಟರಕ್ಷಕನಾದ ಶ್ರೀ ಮಹಾವಿಷ್ಣು ಅನುಗ್ರಹವನ್ನು ಪಡೆಯಬೇಕೆಂದು ಕೊಳ್ಳುವವರು ಬುಧ ಗ್ರಹ ...

Widgets Magazine
Widgets Magazine