ಮನೆಯ ಗೋಡೆಗೆ ಈ ಫೋಟೊಗಳನ್ನು ಅಪ್ಪಿತಪ್ಪಿಯೂ ಹಾಕಬೇಡಿ

ಬೆಂಗಳೂರು, ಗುರುವಾರ, 20 ಸೆಪ್ಟಂಬರ್ 2018 (14:36 IST)

ಬೆಂಗಳೂರು : ನಾವು ವಾಸ್ತು ಶಾಸ್ತ್ರದ ಪ್ರಕಾರ ಮನೆಗಳನ್ನು ಕಟ್ಟುತ್ತೇವೆ. ಆದರೆ ನಂತರ ನಾವು ಮನೆಯೊಳಗೆ ಉಪಯೋಗಿಸುವ ಕೆಲವು ವಸ್ತುಗಳ ಬಗ್ಗೆ ತಿಳಿದಿರಬೇಕು. ಉದಾಹರಣೆ ಮನೆಯ ಗೋಡೆಗೆ ಹಾಕುವ ಕೆಲ ಫೋಟೋಗಳು ಕೂಡ ತಂದೊಡ್ಡುತ್ತವೆ. ನಿಮ್ಮ ಮನೆಯಲ್ಲಿಯೂ ಇಂತಹ ಫೋಟೋಗಳಿದ್ದರೆ ಮೊದಲು ತೆಗೆದು ಹಾಕಿದರೆ ಉತ್ತಮ.


ಹರಿಯುವ ನೀರು ಅಥವಾ ಜಲಪಾತ: ಮನೆಯ ಗೋಡೆ ಮೇಲೆ ಹರಿಯುವ ನೀರಿನ ಅಥವಾ ಜಲಪಾತದ ಫೋಟೋವನ್ನು ಹಾಕಬೇಡಿ. ಇದು ಆರ್ಥಿಕ ಹಾನಿಗೆ ಕಾರಣವಾಗುತ್ತದೆ. ವಾಸ್ತು ಪ್ರಕಾರ ಯಾರ ಮನೆಯಲ್ಲಿ ಹರಿಯುವ ನೀರಿನ ಫೋಟೋ ಇರುತ್ತದೆಯೋ ಆ ಮನೆಯಲ್ಲಿ ಹಣ ನಿಲ್ಲುವುದಿಲ್ಲ.


ಅಳುತ್ತಿರುವ ಮಗುವಿನ ಫೋಟೋ: ಮನೆಯಲ್ಲಿ ಚಿತ್ರವಿಚಿತ್ರ ಫೋಟೋಗಳನ್ನು ಹಾಕುತ್ತಾರೆ. ಅದ್ರಲ್ಲಿ ಅಳುತ್ತಿರುವ ಮಗುವಿನ ಫೋಟೋ ಕೂಡ ಒಂದು. ಮಕ್ಕಳು ಅದೃಷ್ಟದ ಸಂಕೇತ. ಹಾಗಾಗಿ ಮನೆಯಲ್ಲಿ ಅಳುತ್ತಿರುವ ಮಕ್ಕಳ ಫೋಟೋ ಹಾಕಬಾರದು.


ಮುಳುಗುತ್ತಿರುವ ದೋಣಿ: ಮುಳುಗುತ್ತಿರುವ ದೋಣಿಯ ಫೋಟೋ ಮನೆಯಲ್ಲಿದ್ದರೆ ನಿಮ್ಮ ಅದೃಷ್ಟ ಕೂಡ ಮುಳುಗುತ್ತದೆ. ಹಾಗಾಗಿ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮುಳುಗುತ್ತಿರುವ ದೋಣಿಯ ಫೋಟೋ ಹಾಕಬೇಡಿ. ಅದು ಅಶುಭ.


ನರಭಕ್ಷಕ ಪ್ರಾಣಿಗಳ ಫೋಟೋ: ಇತ್ತೀಚೆಗೆ ಮನೆಗಳಲ್ಲಿ ಕಾಡು ಪ್ರಾಣಿಗಳ ಫೋಟೋವನ್ನು ಇಡುವುದು ಫ್ಯಾಷನ್ ಆಗಿಬಿಟ್ಟಿದೆ. ನೋಡಲು ಆ ಫೋಟೋಗಳು ಸುಂದರವಾಗಿ ಕಾಣುತ್ತವೆ. ಆದ್ರೆ ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಯಾರ ಮನೆಯಲ್ಲಿ ಕಾಡು ಪ್ರಾಣಿಗಳ ಫೋಟೋ ಗೋಡೆಯ ಮೇಲೆ ಅಥವಾ ಶೋಕೇಸ್ ನಲ್ಲಿರುವುದೋ ಆ ಮನೆಯಲ್ಲಿ ಹಿಂಸೆ, ಕಿರುಕುಳ ಜಾಸ್ತಿಯಾಗುತ್ತದೆ.


ಮಹಾಭಾರತದ ಫೋಟೋ: ಮಹಾಭಾರತ ಹಿಂದು ಧರ್ಮದ ಮಹಾಕಾವ್ಯ ಎಂದು ಪರಿಗಣಿಸಲಾಗುತ್ತದೆ. ಆದರೂ ಇದು ಮನೆಯಲ್ಲಿರುವುದು ಅಶುಭ. ಮಹಾಭಾರತದ ಯುದ್ಧದ ಫೋಟೋಗಳು ಮನೆಯಲ್ಲಿದ್ದರೆ ಮನೆಯಲ್ಲಿ ಒತ್ತಡ ಜಾಸ್ತಿಯಾಗುವುದಲ್ಲದೆ, ಗಲಾಟೆ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

ಮನೆಗೆ ಲಕ್ಷ್ಮೀದೇವಿಯ ಸಹೋದರಿ ದರಿದ್ರ ಲಕ್ಷ್ಮೀ ಪ್ರವೇಶಿಬಾರದೆಂದರೆ ಈ ರೀತಿ ಮಾಡಿ

ಬೆಂಗಳೂರು : ಸಂಪತ್ತಿಗೆ ಒಡತಿಯಾದ ಲಕ್ಷ್ಮೀದೇವಿ ಮನೆ ಪ್ರವೇಶಿಸಿದರೆ ಆ ಮನೆಯಲ್ಲಿ ಸಂಪತ್ತು ತುಂಬಿ ...

news

ನೀವು ಮಲಗುವಾಗ ಈ ನಿಯಮ ಪಾಲಿಸಿದರೆ ಸುಖ ನಿದ್ದೆ ನಿಮ್ಮದಾಗುತ್ತದೆಯಂತೆ

ಬೆಂಗಳೂರು : ಹಾಸಿಗೆಯಲ್ಲಿ ಬಿದ್ದ ತಕ್ಷಣ ನಿದ್ದೆಗೆ ಜಾರುವವರನ್ನು ಪುಣ್ಯಾತ್ಮರು ಎನ್ನುತ್ತಾರೆ. ಯಾಕೆಂದರೆ ...

news

ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತದೆಯಂತೆ

ಬೆಂಗಳೂರು : ಕೆಲವರು ಅನೇಕ ಪಾಪ ಕರ್ಮಗಳನ್ನು ಮಾಡಿರುತ್ತಾರೆ. ನಂತರ ಅದರ ಪರಿಹಾರಕ್ಕಾಗಿ ದೇವರಿಗೆ ವ್ರತ, ...

news

ಇಂದಿನ ನಿಮ್ಮ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

Widgets Magazine