ಬೆಂಗಳೂರು: ಕೆಲವರಿಗೆ ಬೇರೆಯವರ ವಸ್ತುಗಳನ್ನು ತೊಡುವ ಅಭ್ಯಾಸವಿರುತ್ತದೆ. ಅವರಿಗೆ ತಮ್ಮ ಬಳಿ ಇರುವ ವಸ್ತುಗಳು ಹಿಡಿಸೋದೆ ಇಲ್ಲ. ಆದರೆ ಬೇರೆಯವರ ವಸ್ತುಗಳನ್ನು ನೋಡಿ ಆಸೆಯಾಗಿ ಅದನ್ನು ಒಂದು ಬಾರಿಯಾದರೂ ಉಪಯೋಗಿಸಬೇಕು ಅಂತ ಅನಿಸುತ್ತದೆ. ಬೇರೆಯವರ ವಸ್ತುಗಳನ್ನು ಬಳಸಿದರೆ ನಕರಾತ್ಮಕ ಪರಿಣಾಮ ಬೀರುತ್ತದೆ ಹಾಗೆ ಅನೇಕ ತೊಂದರೆ, ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.