ಶಾಸ್ತ್ರದ ಪ್ರಕಾರ ಮದುವೆಯಾಗಲೇ ಬೇಕು ಎಂಬುದಕ್ಕೆ ಮುಖ್ಯ ಕಾರಣವೇನು ಗೊತ್ತಾ?

ಬೆಂಗಳೂರು, ಶನಿವಾರ, 2 ಜೂನ್ 2018 (06:21 IST)

ಬೆಂಗಳೂರು : ಮದುವೆ ಎಂಬುವುದು ಒಂದು ಪವಿತ್ರ ಬಂಧನ. ಗಂಡು ಹಾಗೂ ಹೆಣ್ಣಿನ ಲೈಂಗಿಕ ಜೀವನವನ್ನು ಹತೋಟಿಯಲ್ಲಿಡಲು ನಮ್ಮ ಹಿರಿಯರು ಮದುವೆ ಎಂಬ ಈ ಪವಿತ್ರ ಬಂಧನ ಮಾಡುತ್ತಾರೆ. ಆದರೆ ಇಂದಿನ ಬದಲಾದ ಜೀವನಶೈಲಿಯಲ್ಲಿ ಮದುವೆ ಯಾಕೆ ಆಗಬೇಕು ಅದು ಅಗತ್ಯವೇ ಎಂಬ ಆಲೋಚನೆ ಇಂದಿನ ಯುವಪೀಳಿಗೆಗೆ ಶುರುವಾಗಿದೆ. ಆದರೆ ನಮ್ಮ ಶಾಸ್ತ್ರದ ಪ್ರಕಾರ ಮದುವೆಯಾಗಲೇ ಬೇಕು ಎಂಬುದಕ್ಕೆ ಪ್ರಮುಖ ಕಾರಣ ಇಲ್ಲಿದೆ.


ಪ್ರತಿ ಮನುಷ್ಯನೂ ಮೂರು ಋಣಗಳಿಂದ ಅಂದರೆ ಋಷಿಋಣ, ದೇವಋಣ ಹಾಗೂ ಪಿತೃಋಣ ಕಾರಣಕ್ಕಾಗಿ  ಹುಟ್ಟುತ್ತಾನೆ. ಬ್ರಹ್ಮಚರ್ಯೆಯಲ್ಲಿ ಮಾಡಬೇಕಾದ ವೇದಾಧ್ಯಯನ ಮಾಡಿ ಬ್ರಹ್ಮಚರ್ಯೆ ಮೂಲಕ ಋಷಿ ಋಣ ತೀರಿಸಿದರೆ, ನೀರು, ಗಾಳಿ, ಬೆಳಕು, ಆಹಾರವನ್ನು ನೀಡುತ್ತಿರುವ ದೇವತೆಗಳಿಗೆ ಯಜ್ಞ, ಯಾಗಾದಿ ಕೆಲಸಗಳನ್ನು ಮಾಡುವುದು, ಮಾಡಿಸುವ ಮೂಲಕ ಈ ದೇವಋಣವನ್ನು ತೀರಿಸಬಹುದು.


 ಹಾಗೇ ನಮಗೆ ಜನ್ಮ ನೀಡಿ ಸಾಕಿ ಸಲುಹಿದ ತಂದೆತಾಯಿಯ ಋಣ ತೀರಿಸಲು ಪಿತೃ ದೇವತೆಗಳಿಗೆ ತರ್ಪಣಾದಿ ಕ್ರಿಯೆಗಳನ್ನು ನಿರ್ವಹಿಸುವ ಯೋಗ್ಯರಾದ ಸಂತಾನವನ್ನು ಪಡೆಯುವ ಮೂಲಕ ಪಿತೃಋಣವನ್ನು ತೀರಿಸಬೇಕು. ಈ ಯೋಗ್ಯವಾದ ಸಂತನ ಪಡೆಯಬೇಕಾದರೆ ಮದುವೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಆದ್ದರಿಂದಲೇ “ಪ್ರಜಾತಂತುಂ ಮಾವ್ಯವತ್ಸೆತ್ಸಿಃ”( ವಂಶಪರಂಪರೆಯನ್ನು ಮುರಿಯಬೇಡ) ಎನ್ನುತ್ತದೆ ವೇದ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 
           
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಆಷಾಢದಲ್ಲಿ ಹೆಣ್ಣುಮಕ್ಕಳು ಗೋರಂಟಿ ಹಚ್ಚಿಕೊಂಡರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಗೋರಂಟಿ ಹೆಸರು ಕೇಳಿದರೆ ಸಾಕು ಹೆಣ್ಣುಮಕ್ಕಳ ಮನಸ್ಸು ಉಬ್ಬಿಕೊಳ್ಳುತ್ತದೆ. ತಮಗೆ ಸಮಯ ...

news

ಯಾವ ತಿಂಗಳಲ್ಲಿ ಹುಟ್ಟಿದವರು ಯಾವ ಉದ್ಯೋಗ ಮಾಡುತ್ತಾರೆ ಎಂಬುದನ್ನು ತಿಳಿಬೇಕಾ...?

ಬೆಂಗಳೂರು : ಮನುಷ್ಯನಾಗಿ ಹುಟ್ಟಿದ ನಂತರ ಜೀವನ ನಿರ್ವಹಣೆಗಾಗಿ ಯಾವುದಾದರೂ ಒಂದು ಕೆಲಸ ಮಾಡಲೇಬೇಕು. ...

news

ಎಷ್ಟೇ ಯಜ್ಞ-ಯಾಗ, ದಾನ-ಧರ್ಮ ಮಾಡಿದರೂ ಈ ಪಾಪ ಪರಿಹಾರವಾಗುದಿಲ್ಲವಂತೆ!

ಬೆಂಗಳೂರು : ಭೂಮಿಗಿಂತಲೂ ಭಾರವಾದದ್ದು ತಾಯಿ, ಅಕಾಶಕ್ಕಿಂತ ಎತ್ತರವಾದವನು ತಂದೆ. ಹತ್ತು ಉಪಾಧ್ಯಾಯರಿಗಿಂತ ...

news

ಮುಟ್ಟಾದ ಮಹಿಳೆಯ ಈ ದೇವಸ್ಥಾನಕ್ಕೆ ಬಂದರೆ ಜೇನು ದಾಳಿ ಮಾಡುತ್ತದಂತೆ!

ಬೆಂಗಳೂರು : ಈಗಲೂ ನಮ್ಮ ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು ಇವೆ. ...

Widgets Magazine