ಬೆಂಗಳೂರು : ಹಿಂದೂಗಳು ಪಠಿಸುವ ಮಂತ್ರಗಳಲ್ಲಿ ‘ ಓಂ’ ಬೀಜಾಕ್ಷರಕ್ಕೆ ಬಹಳ ಪ್ರಾಮುಖ್ಯತೆಯಿದೆ. ಇದನ್ನು ‘ಓಮ್’ ಎಂತಲೂ ಕರೆಯುತ್ತಾರೆ. ಇದನ್ನು ತ್ರಿಮೂರ್ತಿ ಸ್ವರೂಪವೆಂದೂ ಹೇಳುತ್ತಾರೆ. ಅ,ಉ,ಮ ಕಾರಗಳಿಂದ ‘ ಓಂ’ ಹುಟ್ಟಿಕೊಂಡಿದೆ. ಇದನ್ನು ಪಠಿಸುವುದರಿಂದ ಕುಂಡಲಿನೀ ಶಕ್ತಿ ಜಾಗೃತಗೊಳ್ಳುತ್ತದೆ.