ಉಗುರು ಮತ್ತು ಕೂದಲು ಕಟ್ ಮಾಡಲು ಯಾವ ದಿನ ಪ್ರಶಸ್ತವಾದದ್ದು ಗೊತ್ತಾ…?

ಬೆಂಗಳೂರು, ಬುಧವಾರ, 10 ಜನವರಿ 2018 (07:24 IST)

ಬೆಂಗಳೂರು : ಉಗುರು ಮತ್ತು ಕೂದಲು ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿಬರುತ್ತವೆ. ಆರೋಗ್ಯದ ದೃಷ್ಟಿಯಿಂದ ಇವೆರಡನ್ನೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ಹಾಗಂತ ನಮಗೆ ಅನುಕೂಲವಾದ ಉಗುರು ತೆಗೆಯುವುದು, ಕೂದಲಿಗೆ ಕತ್ತರಿ ಹಾಕುವುದು ಒಳ್ಳೆಯದಲ್ಲ. ಮಹಾಭಾರತದಲ್ಲಿ ಉಗುರು ಮತ್ತು ಕೂದಲನ್ನು ಯಾವಾಗ ಕತ್ತರಿಸಿಕೊಂಡರೆ ಶುಭ ಎಂದು ಉಲ್ಲೇಖಿಸಲಾಗಿದೆ.

 
ಮಕ್ಕಳಿಗೆ ಸ್ಕೂಲ್ ಗೆ ಹೋಗುವಾಗ ಉಗುರು ತೆಗೆಯಬೇಕೆಂದು ಕೆಲವರು ಸೋಮವಾರ ಉಗುರು ಕಟ್ ಮಾಡುತ್ತಾರೆ. ಆದರೆ ಸೋಮವಾರ ಉಗುರು ಮತ್ತು ಕೂದಲು ಕಟ್ ಮಾಡಿದರೆ ಮಾನಸಿಕ ಹಾಗು ಸಂತಾನದ ಸಮಸ್ಯೆ ಎದುರಾಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಹಾಗೆ ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬುಧವಾರ  ಉಗುರು ಮತ್ತು ಕೂದಲು ಕಟ್ ಮಾಡಲು ಉತ್ತಮವಾದ ದಿನವಾಗಿದೆ. ಈ ದಿನ ಉಗುರು ಮತ್ತು ಕೂದಲು ತೆಗೆದರೆ ಸಂಪತ್ತು ಜಾಸ್ತಿಯಾಗುವುದರ ಜೊತೆಗೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.


 
ಹಾಗೆ ಗುರುವಾರ ಉಗುರು ಮತ್ತು ಕೂದಲುನ್ನು ತೆಗೆಯಬಾರದು ಎಂದು ಶಾಸ್ತ್ರ ಹೇಳುತ್ತದೆ. ಇದು ಗುರುವಿನ ದಿನವಾದ್ದರಿಂದ ಅಶುಭ ಮಾಡಿದ್ರೆ ಜ್ಞಾನ ವೃದ್ದಿಯಾಗುವುದಿಲ್ಲ. ಶುಕ್ರವಾರ ಈ ಕೆಲಸ ಮಾಡಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಶುಕ್ರದೇವಾ ಸೌಂದರ್ಯಕ್ಕೆ ಪ್ರತೀಕವಾದ್ದರಿಂದ ಅಂದು ದೈಹಿಕ ಸ್ವಚ್ಚತೆ ಮಾಡಿಕೊಂಡರೆ ಶುಕ್ರ ದೇವ ಪ್ರಸನ್ನನಾಗುತ್ತಾನೆ. ಹಾಗೆ  ಮನೆಯಲ್ಲಿ ಲಕ್ಷ್ಮೀ ಕೂಡ ನೆಲೆಸುತ್ತಾಳಂತೆ. ಇನ್ನು ಯಾವುದೇ ಕಾರಣಕ್ಕೂ ಶೌರ ಮಾಡಬಾರದು. ಒಂದುವೇಳೆ ಮಾಡಿದರೆ ಸಾವನ್ನು ಹತ್ತಿರ ಕರೆದಂತೆ. ಕೊನೆಯದಾಗಿ ಭಾನುವಾರ ಎಲ್ಲರಿಗೂ ರಜಾದ ದಿನವಾದ್ದರಿಂದ ಅಂದು ಎಲ್ಲರೂ ಈ ಕೆಲಸಗಳನ್ನು ಮಾಡುತ್ತಾರೆ. ಆದರೆ ಅಂದು ಈ ಕೆಲಸಮಾಡುವುದು ಶುಭಕರವಲ್ಲ ಎಂದು ಶಾಸ್ತ್ರಗಳು ಹೇಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನವಗ್ರಹಕ್ಕೆ ಈ ರೀತಿಯಲ್ಲಿ ಪ್ರದಕ್ಷಿಣೆ ಹಾಕಿದರೆ ಗ್ರಹದೋಷ ನಿವಾರಣೆಯಾಗುವುದಂತೆ!

ಬೆಂಗಳೂರು : ಗ್ರಹಗತಿಗಳಿಂದ ಎದುರಾಗುವ ತೊಂದರೆಗಳನ್ನು ಪರಿಹರಿಸಲು ಸುಲಭವಾದ ವಿಧಾನ ನವಗ್ರಹ ಪ್ರದಕ್ಷಿಣೆ ...

news

ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ ಸಿಗುತ್ತದೆ ಗೊತ್ತಾ...?

ಬೆಂಗಳೂರು : ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುತ್ತೇವೆ. ಆದರೆ ಈ ಪ್ರದಕ್ಷಿಣೆ ಯಾಕೆ ...

news

ಸಕಲ ಇಷ್ಟಾರ್ಥಗಳು ನೆರವೇರಬೇಕಾದರೆ ಶಿವಾಲಯಕ್ಕೆ ಹೋದಾಗ ಶಿವನನ್ನು ಈ ರೀತಿಯಾಗಿ ಪೂಜಿಸಿ

ಬೆಂಗಳೂರು : ಸಕಲ ಸೃಷ್ಟಿಗೆ ಆದಿದಂಪತಿಗಳು ಪಾವರ್ತಿ ಪರಮೇಶ್ವರರು. ಹಾಗೆ ಸಮತ್ತ ಸೃಷ್ಟಿಗೆ ಲಯಕಾರಕನು ...

news

ಸತ್ತವರ ಫೋಟೋವನ್ನು ಮನೆಯಲ್ಲಿ ಯಾವ ದಿಕ್ಕಿಗೆ ಹಾಕಬೇಕು ಗೊತ್ತಾ...?

ಬೆಂಗಳೂರು : ನಮ್ಮ ಪೂರ್ವಿಕರು, ಮನಸ್ಸಿಗೆ ಹತ್ತಿರವಾದವರು ಹಾಗು ಪ್ರೀತಿ ಪಾತ್ರರು ಮರಣ ಹೊಂದಿದರೆ ಅವರ ...

Widgets Magazine
Widgets Magazine