ಬೆಂಗಳೂರು : ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯು ಸನಾತನವಾಗಿದ್ದು, ನಮ್ಮ ಈ ಹಿಂದೂ ಸಂಸ್ಕೃತಿಯಲ್ಲಿ ತೆಂಗಿನ ಕಾಯಿಗೆ ವಿಶೇಷವಾದ ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ತೆಂಗಿನಕಾಯಿ ಅಥವಾ ಶ್ರೀಫಲವನ್ನು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲೇ ದೇವರಿಗೆ ಅರ್ಪಿಸುವುದಕ್ಕೆ ಮಹತ್ವದ ಕಾರಣವಿದೆ.