ಸಂಜೆ ಹೊತ್ತು ಈ ಕೆಲಸಗಳನ್ನು ಮಾಡಿದರೆ ಏನಾಗುತ್ತೆ ಗೊತ್ತಾ…?

ಬೆಂಗಳೂರು, ಶುಕ್ರವಾರ, 9 ಮಾರ್ಚ್ 2018 (08:01 IST)

ಬೆಂಗಳೂರು: ಹಿಂದಿನ ಕಾಲದಿಂದಲೂ ಕೆಲವೊಂದು ಆಚರಣೆಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಆದರೆ ಈಗಿನವರು ಆದನ್ನೆಲ್ಲ ಗಾಳಿಗೆ ತೂರಿ ತಮಗೆ ಅನಿಸಿದ್ದನ್ನು ಮಾಡುತ್ತಾರೆ. ಹಿರಿಯರು ಮಾಡಿರುವ ಕೆಲವೊಂದು ಸಂಪ್ರದಾಯ, ಆಚರಣೆಗಳು ನಮ್ಮ ಬದುಕಿನ ಸಮಸ್ಯೆಗಳನ್ನು ದೂರ ಮಾಡಲು ದಾರಿಯಾಗಿರುತ್ತದೆ. ಇವುಗಳನ್ನು ಪಾಲಿಸುವುದರಿಂದ ಸಮಸ್ಯೆಗಳಿಂದ ಮುಕ್ತಿ ಪಡೆದು ನೆಮ್ಮದಿಯಾಗಿರಬಹುದು. ಅವುಗಳು ಯಾವುವು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
 
 
ಮನೆಯ ಎದುರು ತುಳಸಿ ಕಟ್ಟೆ ಇದ್ದರೆ, ಮನೆಗೆ ಅದು ಶೋಭೆ. ಪ್ರತಿದಿನ ತುಳಸಿಯ ಬಳಿ ದೀಪ ಹಚ್ಚಿ ಇಡಬೇಕು. ಹೀಗೆ ಮಾಡಿದರೆ ಮನೆಯಲ್ಲಿ ಸುಖ ಸಮೃದ್ಧಿ ವೃದ್ಧಿಯಾಗುತ್ತದೆ. ತುಳಸಿಗೆ ಬೆಳಗ್ಗಿನ ವೇಳೆ ನೀರನ್ನು ಹಾಕಬೇಕು. ಜೊತೆಗೆ ಸಂಜೆಯ ಹೊತ್ತು ತುಳಸಿಯನ್ನು ಮುಟ್ಟಬಾರದು.


ಸಂಜೆ ಅಥವಾ ರಾತ್ರಿ ಉಗುರು ಕತ್ತರಿಸಬೇಡಿ. ರಾತ್ರಿ ಉಗುರು ಕತ್ತರಿಸಿದರೆ ಮನೆಯಿಂದ ಲಕ್ಷ್ಮೀ ದೇವಿ ಹೊರ ಹೋಗುತ್ತಾಳೆ ಅಲ್ಲದೆ ಬಡತನ ಆವರಿಸುತ್ತೆ ಎಂದು ಹೇಳಲಾಗುತ್ತದೆ.

ಸಂಜೆಯ ಹೊತ್ತು ಮನೆಯನ್ನು ಗುಡಿಸಬಾರದು. ಹೀಗೆ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಆವರಿಸುತ್ತದೆ. ಅಲ್ಲದೆ ಮನೆಯಲ್ಲಿ ದಾರಿದ್ರ್ಯತೆ ತಾಂಡವವಾಡುತ್ತದೆ.

ಕೆಲವರಿಗೆ ಸಂಜೆ ವೇಳೇ ಮಲಗುವ ಅಭ್ಯಾಸವಿರುತ್ತದೆ. ಇದು ಕೂಡ ಕೆಟ್ಟದ್ದು. ಇದರಿಂದ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ ಹಾಗೂ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಚಿನ್ನವನ್ನು ಖರೀದಿಸಲು ಸೂಕ್ತ ಸಮಯ ಯಾವುದು ಗೊತ್ತಾ...?

ಬೆಂಗಳೂರು : ನಾವು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿಸುತ್ತೇವೆ. ಆದರೆ ಆಭರಣ ...

news

ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಹೇಗೆಲ್ಲಾ ಪರಿಹಾರ ಸಿಗಲಿದೆ ಗೊತ್ತಾ...?

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಗೆ ಹೆಚ್ಚಿನ ಪ್ರಾಶಸ್ತ ನೀಡಲಾಗುತ್ತದೆ. ಯಾವುದೇ ಶುಭ ...

news

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!

ಬೆಂಗಳೂರು: ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ...

news

ಕಳಸಕ್ಕೆ ಸಿಂಗಾರ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳಂತೆ!

ಬೆಂಗಳೂರು: ದೀಪಾವಳಿ ಹಬ್ಬದಂದು ಕಳಸಕ್ಕೆ ವಿಶೇಷ ಪೂಜೆ ಮಾಡುತ್ತಾರೆ. ಲಕ್ಷ್ಮಿ ಪೂಜೆಯೇ ಹೆಚ್ಚು ...

Widgets Magazine