ಬೆಂಗಳೂರು : ಕನಸುಗಳು ಎ೦ದೆ೦ದಿಗೂ ಆಕರ್ಷಕವಾಗಿರುತ್ತವೆ. ಪ್ರತಿದಿನವೂ ನಾವು ಒ೦ದಲ್ಲ ಒ೦ದು ವಿಚಾರದ ಕುರಿತು ಕನಸು ಕಾಣುತ್ತಲೇ ಇರುತ್ತೇವೆ. ಈ ಹಲವಾರು ಕನಸುಗಳ ಪೈಕಿ ಕೆಲವೊ೦ದು ನಮ್ಮ ಪಾಲಿಗೆ ಅರ್ಥಪೂರ್ಣವಾಗಿದ್ದರೆ, ಮಿಕ್ಕುಳಿದವುಗಳು ಹೆಚ್ಚಾಗಿ ಅಸ್ಪಷ್ಟವಾಗಿದ್ದು, ಬಹುಬೇಗನೇ ನಮ್ಮ ಸ್ಮೃತಿಪಟಲದಿ೦ದ ಮಾಸಿಹೋಗುತ್ತವೆ. ಸೃಷ್ಟಿಯ ಆರ೦ಭದಿ೦ದಲೂ ಕೂಡ ಮಾನವರ ಪಾಲಿಗೆ ಕನಸುಗಳು ಹಾಗೂ ಕನಸುಗಳ ಕುರಿತಾದ ವ್ಯಾಖ್ಯಾನವು ಅತ್ಯ೦ತ ಒಗಟಾದ, ಬಿಡಿಸಲಾಗದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.