ಕಸವನ್ನು ಈ ರೀತಿಯಾಗಿ ಗುಡಿಸಿದರೆ ಆ ಮನೆಗೆ ಒಳಿತಾಗುತ್ತದೆ!

ಬೆಂಗಳೂರು, ಮಂಗಳವಾರ, 13 ಮಾರ್ಚ್ 2018 (07:23 IST)

ಬೆಂಗಳೂರು : ನಾವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳಿಂದ  ಮನೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳು ಬಾರಬಾರದು ಎಂದರೆ ಮನೆಯಲ್ಲಿ ಪೊರಕೆಯಿಂದ ಕಸ ಗುಡಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.


ಪೊರಕೆಯು ಲಕ್ಷ್ಮೀದೇವಿಗೆ ಸಮಾನ. ನಮ್ಮ ಮನೆಯಲ್ಲಿರುವ ದಾರಿದ್ರ್ಯವನ್ನ ಓಡಿಸುವುದು ಆ ಪೊರಕೆಯೇ. ಆದ್ದರಿಂದ ಆ ಜಾಗ್ರತೆಗಳನ್ನು ತಪ್ಪದೇ ಪಾಲಿಸಿ. ಸಾಮಾನ್ಯವಾಗಿ ಮಹಿಳೆಯರು ದಿನಕ್ಕೆ 2 ಅಥವಾ 3 ಬಾರಿ ಮನೆಯನ್ನು ಸ್ವಚ್ಚಗೊಳಿಸುತ್ತಿರುತ್ತಾರೆ. 2 ಹೊತ್ತು ಸ್ವಚ್ಚಗೊಳಿಸುವುದು ಒಳ್ಳೆಯದೆಂದು ಜ್ಯೋತಿಷ್ಯರು ಹೇಳುತ್ತಾರೆ.


ಸ್ವಚ್ಛಗೊಳಿಸುವ ಮೊದಲು ಈಶ್ವರನ ಸ್ಥಾನವಾದ ಈಶಾನ್ಯ ಭಾಗದಿಂದ ಪ್ರಾರಂಭಿಸಿ ಪೂರ್ವ, ಉತ್ತರ, ಪಶ್ಚಿಮ ಭಾಗದಿಂದ ಗುಡಿಸುತ್ತಾ ಆ ಕಸವನ್ನು ನೈಋತ್ಯ ಮೂಲೆಗೆ ಸಂಗ್ರಹಿಸಿಡಬೇಕು. ಮನೆಯಲ್ಲಿ ಎಷ್ಟು ಕೊಠಡಿಗಳಿದ್ದರೂ ಎಲ್ಲಾ ಕೊಠಡಿಗಳಲ್ಲೂ ಇದೇ ರೀತಿ ಮಾಡಬೇಕು. ಅಥವಾ ಮನೆಯ ಮೊದಲನೇ ಕೊಠಡಿಯಿಂದ ಈಶಾನ್ಯದಿಂದ ಆರಂಭಿಸಿ ಕೊನೆಗೆ ನೈಋತ್ಯ ಮೂಲೆಯಲ್ಲಿ ಸಂಗ್ರಹಿಸಿ ಕಸವನ್ನು ಹೊರಗೆ ಎಸೆಯಬೇಕು. ಹೀಗೆ ಒಂದು ಪದ್ಧತಿಯಂತೆ ಕಸ ಗುಡಿಸುವುದರಿಂದ ಶನೀಶ್ವರನು ಪ್ರಸನ್ನನಾಗುತ್ತಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ಸದಾ ಇರಬೇಕೆಂದರೆ ಹೀಗೆ ಮಾಡಿ!

ಬೆಂಗಳೂರು : ನಾವು ಮಾಡುವ ಹಲವು ಕೆಲಸಗಳನ್ನು ಹೇಗೆ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಶಾಸ್ತ್ರಗಳು ...

news

ನಿಮ್ಮ ಕೋರಿಕೆಗಳು ಈಡೇರಲು ದೇವರಿಗೆ ಈ ನೈವೇದ್ಯ ಅರ್ಪಿಸಿ

ಬೆಂಗಳೂರು : ಕೆಲವರು ದೇವರ ಮೇಲಿನ ನಂಬಿಕೆಯಿಂದ ಪ್ರತಿದಿನ ಪೂಜೆ ಮಾಡುತ್ತಾರೆ. ಹಾಗೆಯೇ ಪೂಜೆ ಮಾಡುವಾಗ ...

news

ಮಣ್ಣಿನಿಂದ ಹೇಗೆ ಸುಖ ಶಾಂತಿ ನೆಮ್ಮದಿಯನ್ನು ಪಡೆಯಬಹುದು ಗೊತ್ತಾ…?

ಬೆಂಗಳೂರು : ಪ್ರಕೃತಿಯ ನಮಗೆ ನೀಡಿರುವ ಅಮೂಲ್ಯ ಕೊಡುಗೆ ಎಂದರೆ ಮಣ್ಣು. ವಾಸ್ತುಶಾಸ್ತ್ರದ ಪ್ರಕಾರ ಮಣ್ಣಿನ ...

news

ಸಂಜೆ ಹೊತ್ತು ಈ ಕೆಲಸಗಳನ್ನು ಮಾಡಿದರೆ ಏನಾಗುತ್ತೆ ಗೊತ್ತಾ…?

ಬೆಂಗಳೂರು: ಹಿಂದಿನ ಕಾಲದಿಂದಲೂ ಕೆಲವೊಂದು ಆಚರಣೆಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಆದರೆ ಈಗಿನವರು ...

Widgets Magazine