ಮಕ್ಕಳ ಮರೆವಿನ ಸಮಸ್ಯೆ ಪರಿಹಾರವಾಗಲು ಇದನ್ನು ಧರಿಸಿ

ಬೆಂಗಳೂರು, ಭಾನುವಾರ, 11 ನವೆಂಬರ್ 2018 (07:33 IST)

ಬೆಂಗಳೂರು : ಕೆಲವು ಮಕ್ಕಳಿಗೆ ಮರೆವಿನ ಸಮಸ್ಯೆ ಇರುತ್ತದೆ. ಇದರಿಂದ ಅವರಿಗೆ ಏನೇ ಕಲಿತರು ಅದು ನೆನಪಲ್ಲಿ ಉಳಿಯೋದಿಲ್ಲ. ಪರೀಕ್ಷೆಯಲ್ಲಿಯೂ ಕೂಡ  ಗಳಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಉತ್ತಮ ಪರಿಹಾರವೆಂದರೆ ಅದು ಗಣೇಶ ರುದ್ರಾಕ್ಷಿ ಧರಿಸುವುದು.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳ ಜಾತಕದಲ್ಲಿ ಬುಧಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆಯಂತೆ. ಆದ್ದರಿಂದ ಮಕ್ಕಳ ಮೇಲೆ ಬುಧಗ್ರಹ ಅನುಗ್ರಹವಿರಬೇಕು. ಗಣೇಶ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ರೆ ಬುಧಗ್ರಹ ಅನುಗ್ರಹ ದೊರೆಯುತ್ತದೆ.


ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲು ಅಥವಾ ಗೋ ಮೂತ್ರದಿಂದ ರುದ್ರಾಕ್ಷಿಯನ್ನು ಸ್ವಚ್ಛಗೊಳಿಸಬೇಕು. ನಂತ್ರ ಪೂಜೆ ಮಾಡಬೇಕು. ಗಣೇಶ ರುದ್ರಾಕ್ಷಿಯನ್ನು ಹಸಿರು ಬಣ್ಣದ ದಾರದಲ್ಲಿ ಪೊಣಿಸಿ ಹಾಕಿಕೊಳ್ಳಬೇಕು. ಯಾವ ತಿಂಗಳಲ್ಲಿಯಾದ್ರೂ ಸರಿ ಶುಕ್ಷ ಪಕ್ಷದಲ್ಲಿ ಸರಸ್ವತಿ ಯೋಗ ಬಂದ ಬುಧವಾರ ರುದ್ರಾಕ್ಷಿ ಧರಿಸಬೇಕು. ಇದರಿಂದಾಗಿ ಸಾಮಾನ್ಯ ಬುದ್ಧಿವಂತ ವಿದ್ಯಾರ್ಥಿ ಕೂಡ ಪರೀಕ್ಷೆಯಲ್ಲಿ  ಹೆಚ್ಚಿನ ಅಂಕ ಪಡೆಯುತ್ತಾನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಇಂದಿನ ದಿನ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲು ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ

ಬೆಂಗಳೂರು : ಮನೆಯಲ್ಲಿ ಯಾವಾಗಲೂ ಸುಖ-ಶಾಂತಿ ನೆಲೆಸಿರಲು ಲಕ್ಷ್ಮೀಯ ಅನುಗ್ರಹ ಸದಾ ಇರಬೇಕು. ಅದಕ್ಕಾಗಿ ...

news

ಫೆಂಗ್ ಶೂಯಿ ಪ್ರಕಾರ ಮನೆಯ ಸ್ನಾನದ ಕೋಣೆಯ ವಾಸ್ತು ಹೀಗಿರಲಿ

ಅನ್ವಯವಾಗುತ್ತದೆ. ಸ್ನಾನದ ಕೋಣೆಯನ್ನು ನಮಗಿಷ್ಟ ಬಂದ ಹಾಗೆ ಇಡುವಂತಿಲ್ಲ. ಅದಕ್ಕೂ ಕೂಡ ಕೆಲವು ವಾಸ್ತು ...

news

ದೀಪಾವಳಿಯಂದು ಲಕ್ಷ್ಮೀ ಪೂಜೆಯ ಜೊತೆಗೆ ಈ ಕೆಲಸಗಳನ್ನು ಮಾಡಿದರೆ ಎಂದೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲವಂತೆ

ಬೆಂಗಳೂರು : ದೀಪಾವಳಿಯ ದಿನ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ...

Widgets Magazine