ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು, ಏನನ್ನು ನೋಡಬಾರದು ಗೊತ್ತಾ…?

ಬೆಂಗಳೂರು, ಭಾನುವಾರ, 17 ಡಿಸೆಂಬರ್ 2017 (06:12 IST)

Widgets Magazine

ಬೆಂಗಳೂರು: ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೆರದಿದ್ದರೆ ಬೆಳಿಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗುತ್ತಾರೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ. ಪುರಾಣಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂದು ತಿಳಿಸಲಾಗಿದೆ.


ಬೆಳಿಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಬಿಟ್ಟುಕೊಂಡ ಹೆಂಡತಿಯನ್ನು ನೋಡಬಾರದು ಹಾಗೆ ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಪ್ರಾಣಿಗಳ ಅದರಲ್ಲೂ ಕ್ರೂರ ಪ್ರಾಣಿಗಳ ಪೋಟೋವನ್ನು ನೋಡಬಾರದು ಎಂದು ಹೇಳುತ್ತಾರೆ. ಆದರೆ ಗೋವಿನ ಮುಖ ನೋಡಬಹುದು. ಏಕೆಂದರೆ ಗೋವಿನಲ್ಲಿ ಅಷ್ಟದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿ ಬೆಳಿಗ್ಗೆ ಗೋವಿನ ದರ್ಶನ ಮಾಡಿದ್ದರೆ  ಅಷ್ಟದೇವತೆಗಳ ದರ್ಶನ ಮಾಡಿದ ಪುಣ್ಯ ದೊರಕುತ್ತದೆಯಂತೆ.


ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಭೂಮಿತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸಬೇಕು. ಹಾಗೆ ತುಳಸಿ ಗಿಡಕ್ಕೂ ಕೂಡ ನಮಸ್ಕರಿಸಬಹುದು.ಇದರಿಂದ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಹಾಗೇ ಅಗ್ನಿ, ಜಲವನ್ನು ನೋಡಿದರೆ ಆ ದಿನ ಒಳ್ಳೆದಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಏಕೆಂದರೆ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ಶನಿವಾರ ಈ 7 ವಸ್ತುಗಳನ್ನು ಖರೀದಿಸಿದರೆ ಅಶುಭವಂತೆ

ಬೆಂಗಳೂರು: ಭಾರತೀಯ ಹಸ್ತ ಶಾಸ್ತ್ರಜ್ಞರ ಪ್ರಕಾರ ಒಬ್ಬ ವ್ಯಕ್ತಿಯ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ...

news

ಧರಿಸುವ ಬಟ್ಟೆಯಿಂದಲೂ ಅದೃಷ್ಟ ಒಲಿಯಲಿದೆಯಂತೆ

ಬೆಂಗಳೂರು: ಪ್ರತಿಯೊಬ್ಬರ ಅಭಿರುಚಿಗಳು ಭಿನ್ನವಾಗಿರುತ್ತದೆ. ಈ ವಿಧವಾಗಿ ಅವರಿಗಿಷ್ಟವಾದ ಬಣ್ಣವನ್ನು ...

news

ನಿಮ್ಮ ಮನೆಯಲ್ಲಿ ಈ ವಸ್ತುಗಳು ಇದ್ದರೆ ದಾರಿದ್ರ್ಯ ಗ್ಯಾರಂಟಿ!

ಬೆಂಗಳೂರು: ಎಲ್ಲರಿಗೂ ತಾವು ಧನವಂತರಾಗಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಕಷ್ಟ ಪಟ್ಟರೆ ಮಾತ್ರ ಹಣ ...

news

ಈ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಮನೆಗೆ ಅಶುಭ

ಬೆಂಗಳೂರು: ನಮ್ಮ ಹಿಂದು ಶಾಸ್ತ್ರ ಪೂಜೆಗೆ ಬಳಸುವ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಅದು ಪೂಜೆಗೆ ...

Widgets Magazine