ಬೆಂಗಳೂರು : ಮಳೆಗಾಲದಲ್ಲಿ ಗುಡುಗು ಸಿಡಿಲು ಸಾಮಾನ್ಯ. ಸಿಡಿಲು ಹೆಚ್ಚಾಗಿ ಮರ ಗಿಡಗಳಿಗೆ ಬಡಿಯುವುದನ್ನು ನೋಡಿರುತ್ತೇವೆ. ಆಗಾಗ ಜನರಿಗೂ ಬಡಿದು ಸಾವು ನೋವು ಸಂಭವಿಸುತ್ತಿರುತ್ತದೆ. ಸಿಡಿಲು ಬೀಳುವಾಗ ದೊಡ್ದ ಸದ್ದು ಬರುತ್ತದೆ. ಮನೆಯಲ್ಲಿ ಮಕ್ಕಳು ಈ ಶಬ್ದಕ್ಕೆ ಬೆಚ್ಚಿಬೀಳುತ್ತಿರುತ್ತಾರೆ. ಆಗ ಮಕ್ಕಳ ಜತೆಗೆ ದೊಡ್ಡವರು ಭಯ ದೂರ ಮಾಡಿಕೊಳ್ಳಲು ಅರ್ಜುನಾ, ಫಲ್ಗುಣಾ ಎಂದು ಜಪಿಸುತ್ತಿರುತ್ತಾರೆ. ಈ ರೀತಿ ಯಾಕೆ ಜಪಿಸುತ್ತಾರೆ. ಇದರ ಹಿಂದಿನ ಮರ್ಮ ಏನು ಎಂಬುದನ್ನು ಇಲ್ಲಿದೆ ನೋಡಿ .