ಬೆಂಗಳೂರು : ಎಷ್ಟೇ ಕೆಲಸಗಳಿದ್ದರೂ, ಯಾವಾಗಲೇ ಆಗಲಿ,ಎಲ್ಲೇ ಇರಲಿ . ನಾವು ಪ್ರತಿ ನಿತ್ಯ ಸ್ನಾನ ಮಾಡಲೇಬೇಕು. ಇದರಿಂದ ಶರೀರ ಶುದ್ಧವಾಗುವುದರ ಜೊತೆಗೆ ಅನೇಕ ರೀತಿಯ ರೋಗಗಳು ಹತ್ತಿರ ಸುಳಿಯದೆ ಇರುತ್ತವೆ. ಶರೀರದ ಆರೋಗ್ಯದ ಜೊತೆಗೆ ಮನಸ್ಸು ಸಹ ಉಲ್ಲಾಸದಿಂದಿದ್ದು ನೆಮ್ಮದಿ ದೊರೆಯುತ್ತದೆ. ನಾವು ದಿನವೂ ಸ್ನಾನ ಮಾಡುತ್ತೇವಾದರೂ ಕೆಲವು ಸಂದರ್ಭಗಳಲ್ಲಿ ತಪ್ಪದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆ ಸಂದರ್ಭಗಳು ಯಾವುವೆಂದು ತಿಳಿದುಕೊಳ್ಳೋಣ.