ಭೂತಪ್ರೇತಗಳನ್ನು ಆಹ್ವಾನಿಸುತ್ತದೆ ರೆಫ್ರಿಜಿರೇಟರ್‌ನಲ್ಲಿಟ್ಟ ಹಿಟ್ಟು

ಮಂಗಳವಾರ, 7 ಮಾರ್ಚ್ 2017 (14:39 IST)

Widgets Magazine

ನೀವು ರೆಫ್ರಿಜಿರೇಟರ್‌ನಲ್ಲಿ ಹಿಟ್ಟನ್ನು ಇಡುತ್ತೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಖಂಡಿತ ಓದಬೇಕು. ನಿಮಗೆ ಗೊತ್ತೇ? ರೆಫ್ರಿಜರೇಟರ್‌ನಲ್ಲಿ ಹಿಟ್ಟನ್ನು ಇಡುವುದರ ಮೂಲಕ ನೀವು ಭೂತಪ್ರೇತದಂತಹ ನಕಾರಾತ್ಮಕ ಶಕ್ತಿಗಳಿಗೆ ಆಮಂತ್ರಣ ನೀಡುತ್ತಿದ್ದೀರ.

 
ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ತಂಗಳು ಆಹಾರ ಭೂತಪ್ರೇತಗಳ ಆಹಾರವೆನಿಸುತ್ತದೆ. ಇದನ್ನು ಸೇವಿಸುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಸಮಸ್ಯೆಗಳಿಂದ ಜರ್ಜರಿತರಾಗಿರುತ್ತಾರೆ. ಇಂತಹ ಆಹಾರವನ್ನು ಸೇವಿಸುವವ ಕುಟುಂಬದವರು  ಕಾಯಿಲೆ, ಕ್ರೋಧ ಸ್ವಭಾವ ಮತ್ತು ಆಲಸ್ಯದ ವಶವಾಗಿರುತ್ತಾರೆ.
 
ರೆಫ್ರಿಜಿರೇಟರ್‌ನಲ್ಲಿಟ್ಟ ಹಿಟ್ಟು ನಿಮ್ಮ ಸಮಯವನ್ನು ಉಳಿಸುತ್ತದೆ, ಹೀಗಾಗಿ ಇತ್ತೀಚಿಗಂತೂ ಜನರು ಮಿಕ್ಕ ಆಹಾರ, ನಾದಿಟ್ಟ ಹಿಟ್ಟನ್ನೆಲ್ಲ ಕೆಡದಿರಲೆಂದು ರೆಫ್ರಿಜಿರೇಟರ್‌ನಲ್ಲಿಡುತ್ತಾರೆ. 
 
ಆದರೆ ಇದು ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸುತ್ತದೆ. ನಾದಿಟ್ಟಿರುವ ಹಿಟ್ಟು ವ್ಯಕ್ತಿಯ ಸಾವಿನ ನಂತರ ಆತ್ಮಕ್ಕೆ ಇಡಲಾಗುವ ಪಿಂಡಕ್ಕೆ ಸಮ ಎಂದು ಹೇಳಲಾಗುತ್ತದೆ. ಈ ಕಾರಣಕ್ಕೆ ಅದನ್ನು ತಿನ್ನಲು ಭೂತ-ಪ್ರೇತಗಳು ನಿಮ್ಮ ಅಡುಗೆಮನೆಗೆ ಧಾವಿಸಿ ಬರುತ್ತವೆ. ಸಾವಿನ ನಂತರ ಪಿಂಡ ಸಿಗದಿದ್ದ ಆತ್ಮಗಳಂತೂ ಈ ಹಿಟ್ಟನ್ನು ತಿಂದು ತೃಪ್ತಿ ಪಡೆಯಲು ಬರುತ್ತವೆ ಎನ್ನಲಾಗುತ್ತದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ರಾತ್ರಿ ವೇಳೆ ದುಷ್ಟ ಶಕ್ತಿ ಹಾವಳಿ ಹೆಚ್ಚಿರುತ್ತವೆ..!

ವೇದ ಸುಳ್ಳಾದರೂ, ಶಾಸ್ತ್ರ ಸುಳ್ಳಾಗದು ಎನ್ನುವ ಮಾತಿದೆ. ಅದರಂತೆ ಶಾಸ್ತ್ರದಲ್ಲಿ ರಾತ್ರಿ ವೇಳೆ ...

news

ರಾತ್ರಿ ವೇಳೆ ದುಷ್ಟ ಶಕ್ತಿ ಹಾವಳಿ ಹೆಚ್ಚಿರುತ್ತವೆ..!

ವೇದ ಸುಳ್ಳಾದರೂ, ಶಾಸ್ತ್ರ ಸುಳ್ಳಾಗದು ಎನ್ನುವ ಮಾತಿದೆ. ಅದರಂತೆ ಶಾಸ್ತ್ರದಲ್ಲಿ ರಾತ್ರಿ ವೇಳೆ ...

news

ಆರೋಗ್ಯಕರ ಜೀವನಕ್ಕಾಗಿ ಉತ್ತಮ ವಾಸ್ತುಶಾಸ್ತ್ರ ಮಾಹಿತಿಗಳು

ಭಾರತದ ವಾಸ್ತು ಶಾಸ್ತ್ರ ಬಹಳ ಪುರಾತನವಾದುದು. ಇದು ಅಪ್ಪಟ ವೈಜ್ಞಾನಿಕ ಶಾಸ್ತ್ರ ಎನ್ನುವ ಅಭಿಪ್ರಾಯಗಳಿವೆ. ...

Widgets Magazine Widgets Magazine