ಆರ್ಥಿಕ ಹಿಂಜರಿತ, ತತ್ಪರಿಣಾಮವಾಗಿ ಉದ್ಯೋಗ ಕಡಿತ ವೇತನ ಕಟ್ ಇತ್ಯಾದಿಗಳಿಂದಾಗಿ ಭವಿಷ್ಯದ ಬಗ್ಗೆ ಚಿಂತಿತರಾಗಿರುವವರ ಸಮುದಾಯ ಹೆಚ್ಚಾಗುತ್ತಿದೆ. ಆತಂಕ, ದುಗುಡ ಮನೆಮಾಡಿವೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷ ತಮ್ಮ ಪಾಲಿಗೆ ನವಚೇತನ ನೀಡಬಹುದೇ ಎಂಬ ಆತಂಕದಲ್ಲಿರುವವರು ಜ್ಯೋತಿಷಿಗಳು, ಭವಿಷ್ಯ ನುಡಿಯುವವರ ಮೊರೆ ಹೋಗುತ್ತಿದ್ದಾರೆ. ಇದರೊಂದಿಗೆ ವೆಬ್ಸೈಟುಗಳಲ್ಲಿಯೂ ಜ್ಯೋತಿಷ್ಯ ಸೇವೆ ನೀಡುವ ಸೈಟುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.