Widgets Magazine

ಒಂದೇ ತಿಂಗಳಲ್ಲಿ ತ್ರಿವಳಿ ಗ್ರಹಣ

ರಾಜೇಶ್ ಪಾಟೀಲ್|

PR
ಇದೇ ಜೂನ್ 1 ರಂದು ಭಾಗಷಃ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 118 ನೇಯದಾಗಿದ್ದು, 68 ಬಾಗಷಃ ಸೂರ್ಯ ಗ್ರಹಣವಾಗಿರುತ್ತದೆ. ಈ ಗ್ರಹಣವು ಜಿ.ಎಂ.ಟಿ. 7 ಗಂಟೆ 25 ನಿಮಿಷ 18 ಸೆಕೆಂಡ್‌ಗೆ ಪ್ರಾರಂಭವಾಗುತ್ತದೆ. ಸೈಬೀರಿಯ ಮತ್ತು ಉತ್ತರ ಚೀನಾದಲ್ಲಿ ಗೋಚರಿಸುತ್ತದೆ. ಗ್ರಾಸ ಪ್ರಮಾಣ 0.601 ರಷ್ಟಿರುತ್ತದೆ. ಈ ಗ್ರಹಣವು ಅಲಾಸ್ಕ, ಕೆನಾಡದ ಉತ್ತರ ಭಾಗ, ಐಸ್ಲ್ಯಾಂಡ್, ನಾರ್ವೆ, ಸ್ವೀಡನ್, ಪಿನ್‌ಲೆಂಡ್ ಮೂಲಕ ಹಾಯ್ದು ಫೇರ್ ಬ್ಯಾಂಕ್ಸ್ ದಕ್ಷಿಣ ಭಾಗ ಮೂಲಕ ಹಾಯ್ದು ಅಂಟ್ಲಾಂಟಿಕ್ ಸಾಗರದಲ್ಲಿ ಜಿ.ಎಂ.ಟಿ. ರಾತ್ರಿ 11 ಗಂಟೆ 6 ನಿಮಿಷ 56 ಸೆಕೆಂಡ್‌ಗೆ ಮುಕ್ತಾಯವಾಗುತ್ತದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣಾಚಾರಣೆ ಇರುವುದಿಲ್ಲ.

ಇದೇ ಜೂನ್ 15 ರಂದು ಪೂರ್ಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 130 ನೇಯದಾಗಿದ್ದು, 71 ಗ್ರಹಣಗಳಲ್ಲಿ ಇದು 34ನೇಯದಾಗಿರುತ್ತದೆ. ಈ ಗ್ರಹಣದ ಎಲ್ಲಾ ಹಂತಗಳು ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಆಫ್ರೀಕದ ಪೂರ್ವ ಭಾಗ ಮಿಡ್ಲ್ಈಸ್ಟ್, ಏಷ್ಯಾಖಂಡದ ಮಧ್ಯಭಾಗ, ಆಸ್ಟ್ತ್ರೇಲಿಯಾದ ದಕ್ಷಿಣ ಭಾಗದಲ್ಲಿ ಗೋಚರಿಸುತ್ತದೆ. ಭಾರತದಲ್ಲಿಯೂ ಗ್ರಹಣದ ಎಲ್ಲಾ ಹಂತಗಳು ಗೋಚರಿಸುತ್ತದೆ. ಯುರೋಪ್‌ನಲ್ಲಿ ಗ್ರಹಣದ ಸ್ಪರ್ಶ ಕಾಲ ಗೋಚರಿಸುವುದಿಲ್ಲ. ಅಲ್ಲಿ ಗ್ರಹಣದೊಂದಿಗೆ ಚಂದ್ರ ಉದಯವಾಗುತ್ತದೆ. ಪೂರ್ವ ಏಷ್ಯಾ, ಆಸ್ಟ್ತ್ರೇಲಿಯಾದ ಪೂರ್ವ ಭಾಗ, ನ್ಯೂಜಿಲೆಂಡ್‌ಗಳಲ್ಲಿ ಗ್ರಹಣದ ಮೋಕ್ಷ ಕಾಲ ಗೋಚರಿಸುವುದಿಲ್ಲ ಅಂದರೆ ಗ್ರಹಣದೊಂದಿಗೆ ಚಂದ್ರ ಮುಳುಗುತ್ತಾನೆ. ಬ್ರೆಜಿಲ್ ಪೂರ್ವಭಾಗ, ಉರುಗ್ವೆ, ಅರ್ಜೆಂಟಿನಾದಲ್ಲಿ ಪೂರ್ಣ ಚಂದ್ರಗ್ರಹಣವನ್ನು ನೋಡಬಹುದು. ಉತ್ತರ ಅಮೇರಿಕಾದಲ್ಲಿ ಗ್ರಹಣ ಗೋಚರಿಸುವುದಿಲ್ಲ.

ಈ ಗ್ರಹಣ ಭಾರತದಲ್ಲಿ ಭಾರತೀಯ ಕಾಲಮಾನ ರಾತ್ರಿ 10 ಗಂಟೆ 55 ನಿಮಿಷಕ್ಕೆ ಗ್ರಹಣ ಗೋಚರಿಸುತ್ತದೆ. ಗ್ರಹಣದ ಪರಿಪೂರ್ಣತೆ 12 ಗಂಟೆ 52 ನಿಮಿಷದಿಂದ ರಾತ್ರಿ 2 ಗಂಟೆ 33 ನಿಮಿಷದವರೆಗೆ ಕಂಡುಬರುತ್ತದೆ. ಗ್ರಹಣದ ಮಧ್ಯಕಾಲದ ಪರಿಪೂರ್ಣತೆ ರಾತ್ರಿ 1 ಗಂಟೆ 42 ನಿಮಿಷ. ಮಾರನೇ ದಿನ ಬೆಳಗಿನ ಜಾವ 4 ಗಂಟೆ 31 ನಿಮಿಷಕ್ಕೆ ಗ್ರಹಣದ ಮೋಕ್ಷ ಕಾಲವಾಗಿರುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿ 1 ಗಂಟೆ 40 ನಿಮಿಷ 13 ಸೆಕೆಂಡ್ ಗ್ರಹಣದ ಗ್ರಾಸ ಪ್ರಮಾಣ 2.6868 ರಷ್ಟಿರುತ್ತದೆ. ಭಾರತದಲ್ಲಿ ಗ್ರಹಣಾಚರಣೆ ಆಚರಿಸುತ್ತಾರೆ.

ಈ ಗ್ರಹಣದ ವಿಶೇಷವೇನೆಂದರೆ ಗ್ರಹಣದ ಪ್ರಾರಂಭದಲ್ಲಿ ಚಂದ್ರ ಬೂದು ಬಣ್ಣಕ್ಕಿರುತ್ತದೆ. ಕ್ರಮೇಣ ಕಪ್ಪಾಗುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿಯಲ್ಲಿ ತಾಮ್ರ ಬಣ್ಣವಾಗುತ್ತದೆ. ಚಂದ್ರ ಗ್ರಹಣದಲ್ಲಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ಭೂಮಿ ತಡೆಯುತ್ತದೆ. ಸೂರ್ಯನ ಬೆಳಕನ್ನು ಭೂಮಿಯ ವಾತಾವರಣ ಚದುರಿಸಿದಾಗ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪಿ ಪೂರ್ಣ ಗ್ರಹಣದಲ್ಲೂ ಚಂದ್ರ ಕೆಂಪಗೆ ಕಾಣಿಸುತ್ತಾನೆ.

ಜುಲೈ 1 ರಂದು ಭಾಗಷಃ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 156 ನೇಯದಾಗಿದ್ದು, 69 ಗ್ರಹಣಗಳಲ್ಲಿ ಇದು ಮೊದಲನೇಯದಾಗಿರುತ್ತದೆ. ಈ ಗ್ರಹಣವು ದಕ್ಷಿಣ ಆಫ್ರೀಕಾದ ಅಂಟಾರ್ಟಿಕ್ ಸಮುದ್ರದಲ್ಲಿ ಮಾತ್ರ ಗೋಚರಿಸುತ್ತದೆ. ಉಳಿದ ಭೂ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಇದು ಜಿ.ಎಂ.ಟಿ. ವೇಳೆ ಬೆಳಿಗ್ಗೆ 7 ಗಂಟೆ 53 ನಿಮಿಷ 41 ಸೆಕೆಂಡ್‌ಗೆ ಗ್ರಹಣ ಸ್ಪರ್ಶವಾಗಿ 9 ಗಂಟೆ 22 ನಿಮಿಷ 47 ಸೆಕೆಂಡ್‌ಗೆ ಮೋಕ್ಷವಾಗುತ್ತದೆ. ಗ್ರಹಣಾಚರಣೆ ಇರುವುದಿಲ್ಲ.

ಈ ತ್ರಿವಳಿ ಗ್ರಹಣಗಳು ಒಂದೇ ತಿಂಗಳಲ್ಲಿ ಸಂಭವಿಸುತ್ತವೆ. ಕೇವಲ ಒಂದು ತಿಂಗಳಲ್ಲಿ ತ್ರಿವಳಿ ಗ್ರಹಣಗಳು ಸಂಭವಿಸುವುದರಿಂದ ಯಾವುದೇ ವ್ಯಕ್ತಿಗೂ ವೈಯುಕ್ತಿಕ ತೊಂದರೆಗಳು ಉಂಟಾಗುವುದಿಲ್ಲ ಆದ್ದರಿಂದ ಯಾರು ಭಯ ಪಡುವ ಅವಶ್ಯಕತೆ ಇರುವುದಿಲ್ಲ ಗ್ರಹಣಗಳಿಂದ ಇದುವರೆವಿಗೂ ಸಾವು - ನೋವಿನ ವರದಿಯಾಗಿಲ್ಲ. ನಮಗೆ ಕಂಡುಬರುವ ಚಂದ್ರಗ್ರಹಣವನ್ನು ನೋಡಿ ಸಂತೋಷ ಪಡಬಹುದು. ಇದು ಸೌರವ್ಯಹದಲ್ಲಿ ನಡೆಯುವ ಒಂದು ನೈಸರ್ಗಿಕ ಕ್ರಿಯೆ. ಪ್ರಚಾರ ಮಾದ್ಯಮಗಳಲ್ಲಿ ಗ್ರಹಣಗಳ ಬಗ್ಗೆ ಹೆದರಿಕೆ ಹುಟ್ಟಿಸುವವರಿದ್ದಾರೆ ಮತ್ತು ಶಾಂತಿ ಹೋಮ ಮಾಡಿಸಬೇಕೆನ್ನುವವರೂ ಇದ್ದಾರೆ. ಇದೆಲ್ಲ ಬರೀ ಸುಳ್ಳು. ಗ್ರಹಣಗಳಿಂದ ಯಾರಿಗೂ ಯಾವ ತೊಂದರೆ ಉಂಟಾಗುವುದಿಲ್ಲವದ್ದಾರಿಂದ ಶಾಂತಿ, ಹೋಮ ಅವಶ್ಯಕತೆ ಇರುವುದರಿಲ್ಲ. ಚಂದ್ರ ಗ್ರಹಣವನ್ನು ಬರೀಗಣ್ಣಿನಿಂದ ನೋಡಬಹುದು. ಪೂರ್ಣ ಚಂದ್ರಗ್ರಹಣದಲ್ಲಿ ವಿಶೇಷವಾಗಿ ಬಣ್ಣ ಬದಲಾವಣೆಯಾಗುವ ಸುಸಂದರ್ಭವನ್ನು ನೋಡಿ ಆನಂದಿಸಬಹುದು.

ಗ್ರಹಣಗಳ ವಿಸ್ಮಯ

1.ಸಾಮಾನ್ಯವಾಗಿ ಗ್ರಹಣದ ಅವಧಿಯಲ್ಲಿ ಚಂದ್ರನ ನೆರಳಿನ ವೇಗವು 1700 ಕಿ.ಮೀ./ಗಂಟೆ.
2.ಗ್ರಹಣದ ಪರಿಪೂರ್ಣತೆಯ ಗರಿಷ್ಠ ಅವಧಿ 7 ನಿಮಿಷ 30 ಸೆಕೆಂಡುಗಳು.
3.ಭೂಮಿಯ ಎಲ್ಲಾ ಪ್ರದೇಶಗಳಲ್ಲೂ ಪೂರ್ಣ ಸೂರ್ಯ ಗ್ರಹಣವನ್ನು ನೋಡಲು 400 ವರ್ಷಗಳು ಬೇಕು.
4.ಒಂದು ವರ್ಷದಲ್ಲಿ ಸೂರ್ಯ ಗ್ರಹಣವು, ಚಂದ್ರ ಗ್ರಹಣಕ್ಕಿಂತ ಹೆಚ್ಚಾಗಿ ಸಂಭವಿಸುತ್ತದೆ. (5:3)
5.ಒಂದು ವರ್ಷದಲ್ಲಿ ಕಡಿಮೆ ಎಂದರೆ 2 ಸೂರ್ಯ ಗ್ರಹಣಗಳು ಸಂಭವಿಸುತ್ತದೆ.
6.ಒಂದು ತಿಂಗಳ ಅವಧಿಯಲ್ಲಿ ಎರಡು ಸೂರ್ಯ ಗ್ರಹಣಗಳು ಸಂಭವಿಸಿದರೆ. ಈ ಎರಡು ಸೂರ್ಯ ಗ್ರಹಣಗಳ ಮಧ್ಯದಲ್ಲಿ ಒಂದು ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.
7.ಒಂದು ವರ್ಷದಲ್ಲಿ ತ್ರಿವಳಿ ಗ್ರಹಣಗಳು ಎರಡು ಸಲ ಸಂಭವಿಸುತ್ತದೆ. ಈ ಪ್ರಕ್ರಿಯೆ ಈ ಹಿಂದೆ 1935 ರಲ್ಲಿ ಸಂಭವಿಸಿತ್ತು. ಮುಂದೆ 2160 ರಲ್ಲಿ ಪುನಃ ಈ ಪ್ರಕ್ರಿಯೆ ಸಂಭವಿಸುತ್ತದೆ.
8.ಒಂದು ವರ್ಷದಲ್ಲಿ ಅತೀ ಹೆಚ್ಚು ಗ್ರಹಣಗಳು-7, ಸೂರ್ಯಗ್ರಹಣ -4, ಮತ್ತು ಚಂದ್ರಗ್ರಹಣ-3. ಈ ಹಿಂದೆ 1982 ರಲ್ಲಿ ಸಂಭವಿಸಿತ್ತು. ಪುನಃ 2485 ರಲ್ಲಿ ಸಂಭವಿಸುತ್ತದೆ.

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344


ಇದರಲ್ಲಿ ಇನ್ನಷ್ಟು ಓದಿ :