ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:51 IST)
PR
ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು.

ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ. ಹಾಗಾಗಿ ಕಾಳಸರ್ಪ ಯೋಗದ ಬಗ್ಗೆ ಹಾಗೂ ಪರಿಹಾರ ಉಪಾಯಗಳ ಬಗ್ಗೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ.

ಒಂದೇ ಪರಿವಾರದಲ್ಲಿ ಅಣ್ಣತಮ್ಮಂದಿರು ಅಕ್ಕತಮ್ಮಂದಿರು ಇರುತ್ತಾರೆ. ನಾವು ಒಂದೇ ಕುಟುಂಬದವರೆಂದು ಅಣ್ಣ ತಮ್ಮ ಅಕ್ಕ ತಂಗಿಯರೆಂದು ಹೇಳಿಕೊಂಡರೂ ಅವರೆಲ್ಲರಲ್ಲೂ ವ್ಯತ್ಯಾಸಗಳಿದ್ದೇ ಇರುತ್ತದೆ. ಅಭಿರುಚಿ, ರೀತಿ ನೀತಿ, ಭಾವನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಕರ್ಮವನ್ನವಲಂಬಿಸಿಕೊಂಡು ಅವರವರ ಜೀವನಕ್ರಮ, ಆಸಕ್ತಿ ಭಿನ್ನವಾಗಿರುತ್ತದೆ. ಹಾಗಾಗಿಯೇ ಅವರವರ ಕರ್ಮಕ್ಕನುಗುಣವಾಗಿ ಫಲವಾದ ಭೋಗವೂ ಕೂಡಾ ಭಿನ್ನಭಿನ್ನವೇ.


ಇದರಲ್ಲಿ ಇನ್ನಷ್ಟು ಓದಿ :