Widgets Magazine

ಕುಂಭ ರಾಶಿ ಪ್ರವೇಶಿಸಿದ ಗುರು, 2010ರ ರಾಶಿ ಫಲ!

ಇಳಯರಾಜ|
IFM
ಗುರು ತನ್ನ ಸ್ಥಾನ ಬದಲಾವಣೆ ಮಾಡಿಕೊಂಡಿದ್ದಾನೆ. ಗುರುವಿನ ಈ ರಾಶಿ ಬದಲಾವಣೆಯಿಂದ ಆಯಾ ರಾಶಿಗನುಗುಣವಾಗಿ ವ್ಯಕ್ತಿಗಳ ಮೇಲೂ ಪ್ರಭಾವ ಬೀರುತ್ತದೆ. ಗುರು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷವಿರುತ್ತಾನೆ. ಗುರುವಿನ ರಾಶಿ ಬದಲಾವಣೆಗೂ ಹಣಕಾಸಿಗೂ ಸಾಕಷ್ಟು ಸಂಬಂಧವಿದೆ.

ಗುರು ಇದೇ ಡಿಸೆಂಬರ್ 15ರಂದು ಮಧ್ಯರಾತ್ರಿ 12-15ಕ್ಕೆ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಈವರೆಗೆ ಗುರು ನೀಚರಾಶಿ ಮಕರದಲ್ಲಿದ್ದುದರಿಂದ ದೇಶದ ಹಣಕಾಸಿನ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳಾಗಿದ್ದು ಗೊತ್ತೇ ಇದೆ. ಇನ್ನು ಗುರು ಸ್ಥಾನಪಲ್ಲಟವಾಗುತ್ತಿರುವುದರಿಂದ ಶುಭಸೂಚಕವಿದೆ. ಗುರು ಜನ್ಮರಾಶಿಗೆ ಹೋದರೆ ಆಗ ಕನ್ಯಾ ರಾಶಿಯ ಶನಿ ಹಾಗೂ ಗುರು ಪರಸ್ಪರ ದೃಷ್ಟಿ ಪಡೆಯವುದರಿಂದ ರಾಜಕೀಯ ಬದಲಾವಣೆಗಳನ್ನು ನಿರೀಕ್ಷಿಸಬಹುದು. ರಾಶಿಗೆ ಅನುಗುಣವಾಗಿ ಗುರುವಿನ ಸ್ಥಾನಪಲ್ಲಟದ ಪರಿಣಾಮಗಳು ಹೀಗಿವೆ.

ಮೇಷ: 2010ರ ಮೊದಲರ್ಧದಲ್ಲಿ ನಿರೀಕ್ಷೆಗೂ ಮೀರಿ, ಆಶ್ಚರ್ಯಕರ ರೀತಿಯಲ್ಲಿ ಹಣದ ಹರಿವು, ಆದಾಯ, ಲಾಭ ದೊರಕಬಹುದು. ಹಳೆಸಾಲಗಳ ಮರುಪಾವತಿಯಾಗಬಹುದು. ಮಕ್ಕಳು ಉತ್ತಮ ಸಾಧನೆ ತೋರಿ ನಿಮಗೆ ಹೆಸರು ತರಬಹುದು. 2010ರ ಉತ್ತರಾರ್ಧದಲ್ಲಿ ಹಲವು ಉತ್ತಮ ಕಾರ್ಯಗಳಿಗೆ ಹಣ ಧಾರಾಳವಾಗಿ ಖರ್ಚಾಗಬಹುದು. ತಾಯಿ ಹಾಗೂ ಗೆಳೆಯ ಗೆಳತಿಯರ ಸಹಕಾರ ನಿಮ್ಮ ಬೆನ್ನಿಗಿದೆ.

ವೃಷಭ: 2010ರ ಮೊದಲರ್ಧದಲ್ಲಿ ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವುಂಟಾಗುವುದರಿಂದ ಸಂತಸದ ದಿನಗಳು ನಿಮ್ಮದಾಗಲಿವೆ. ನಿಮ್ಮ ಮಾತಿಗೆ ಬೆಲೆ ಬರಲಿದೆ. ಹಣದ ಕೊರತೆಯುಂಟಾಗದೆ, ಆದಾಯ ಹೆಚ್ಚಲಿದೆ. ಜೂನ್ ನಂತರ ದೊಡ್ಡ ಸಾಧನೆ, ಅಥವಾ ಯಶಸ್ಸು ಕಾದಿದೆ. ವಿದ್ಯಾಭ್ಯಾಸದಲ್ಲೋ, ಕೆಲಸದಲ್ಲೋ ಸಾಧನೆ ಮಾಡುವ ಮೂಲಕ ಹೆಸರು ಪಡೆಯುವಿರಿ. ಇಲ್ಲವಾದರೆ ಹಣಕಾಸಿನ ವಿಚಾರದಲ್ಲಿ ಭಾರೀ ಪ್ರಗತಿಯಿದೆ.

ಮಿಥುನ: 2010ರ ಮೊದಲರ್ಧದಲ್ಲಿ ಕೌಟುಂಬಿಕವಾಗಿ ಅತ್ಯುತ್ತಮ ಸಮಾಧಾನ, ಸಂತೋಷ ನಿಮ್ಮದಾಗಲಿದೆ. ಶಾಲೆ, ಕಾಲೇಜು ಅಥವಾ ನೀವು ಕೆವಲಸ ಮಾಡುವ ಸ್ಥಳದಲ್ಲಿ ನೀವು ನಾಯಕತ್ವ ವಹಿಸುವಿರಿ. ಮಕ್ಕಳಿಗೆ ಯಶಸ್ಸು ಕಾದಿದೆ. 2010ರ ಮಧ್ಯದ ನಂತರ, ನಿಮ್ಮ ಮನೆಯಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ. ಖುಷಿಯ ಸಮಾಚಾರ ಕೇಳಿಬರಬಹುದು. ಆರೋಗ್ಯದ ಬಗ್ಗೆ ಕೊಂಚ ಜಾಗರೂಕತೆ ಅವಶ್ಯಕ. ಉದರ ಸಂಬಂಧೀ ರೋಗಗಳು ಬರುವ ಸಾಧ್ಯತೆಗಳಿವೆ.

ಕರ್ಕಾಟಕ: 2010ರ ಆರಂಭದಲ್ಲಿ ನಿಮ್ಮ ಸಹೋದರ ಸಹೋದರಿಯರಿಗೆ ನಿಮ್ಮಿಂದ ಉಪಕಾರವಾಗಬಹುದು. ಆಸ್ತಿ ಖರೀದಿ ಅಥವಾ ಮಾರುವ ಪ್ರಕ್ರಿಯೆಯಿಂದ ನಿಮ್ಮ ಸಹೋದರ/ ಸಹೋದರಿಯರಿಗೆ ಲಾಭವಾಗುವ ಸೂಚನೆಯಿದೆ. 2010ರ ಉತ್ತರಾರ್ಧದಲ್ಲಿ ಮಕ್ಕಳು ಹಣಕಾಸಿನಲ್ಲಿ ಅಥವಾ ವಿಧ್ಯಾಭ್ಯಾಸದಲ್ಲಿ ಔನತ್ಯ ಸಾಧಿಸುತ್ತಾರೆ. ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಅಥವಾ ನಿಮ್ಮ ಸಹೋದರ ಸಹೋದರಿಯರಿಗೆ ಮದುವೆ ನಿಶ್ಚಯವಾಗುವ ಸಂಭವವಿದೆ.

ಸಿಂಹ: 2010ರ ಆರಂಭದ ದಿನಗಳಲ್ಲಿ ಕೊನೆಗೂ ನಿಮ್ಮ ಟೆನ್‌ಶನ್, ಒತ್ತಡ ಕಡಿಮೆಯಾಗಲಿದೆ. ಹಣಕಾಸಿನ ಒತ್ತಡದಿಂದಲೂ ನಿಮಗೆ ಮುಕ್ತಿ ದೊರೆತು ನಿರಾಳವಾಗಿ ಉಸಿರಾಡುವಂತಾಗಬಹುದು. ಹೊಸ ವಾಹನಗಳ ಖರೀದಿ, ಅಥವಾ ಹೊಸ ಅಥವಾ ಹಳೆಯ ವಾಹನ ಖರೀದಿ/ ಮಾರಾಟದಿಂದ ನಿಮಗೆ ಲಾಭವಾಗುವ ಸೂಚನೆಗಳಿವೆ. 2010ರ ದ್ವಿತೀಯಾರ್ಧದಲ್ಲಿ ಆರೋಗ್ಯ ಸಮಸ್ಯೆಗಳು ಕೊಂಚ ಕಡಿಮೆಯಾಗಬಹುದು. ನಿಮ್ಮ ಸ್ನೇಹಿತರ ಸಹಾಯದಿಂದ ನಿಮಗೆ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರಕಬಹುದು. ಅನಾಥಾಶ್ರಮಕ್ಕೋ, ದೇವಸ್ಥಾನಕ್ಕೋ ಅಥವಾ ದೀನದಲಿತರಿಗೆ ನೀವು ಸಹಾಯ ಮಾಡುವ ದಿನಗಳೂ ಬರಬಹುದು.

ಕನ್ಯಾ: 2010 ಆರಂಭದಲ್ಲಿ ನೀವು ವಿವಾಹಾಪೇಕ್ಷಿಗಳಾಗಿದ್ದರೆ ಖಂಡಿತವಾಗಿ ನಿಮಗೆ ವಿವಾಹ ನಿಶ್ಚಯವಾಗುವ ಸಾಧ್ಯತೆಗಳು ಹೆಚ್ಚು. ನಿರೀಕ್ಷೆಗೂ ಮೀರಿ, ಆಶ್ಚರ್ಯಕರ ರೀತಿಯಲ್ಲಿ ಸಡನ್ ಆಗಿ ಹಣಕಾಸಿನ ಲಾಭವಾಗುವ ಸಾಧ್ಯತೆಗಳಿವೆ. 2010ರ ಉತ್ತರಾರ್ಧದಲ್ಲಿ ನಿಮಗೆ ಕೆಲಸದಲ್ಲಿ ಭಡ್ತಿ, ಸಂಬಳ ಹೆಚ್ಚಳ ಅಥವಾ ವ್ಯಾಪಾರದಲ್ಲಿ ಲಾಭಗಳಾಗುವ ಸಾಧ್ಯತೆಗಳಿವೆ. ಚಿನ್ನ ಮಾರಾಟ ಅಥವಾ ಕೊಳ್ಳುವಿಕೆಯಿಂದ ಲಾಭವಾಗಬಹುದು.

ತುಲಾ: 2010ರ ಪೂರ್ವಾರ್ಧದಲ್ಲಿ ಉತ್ತಮ ಕಾರ್ಯಗಳಿಗೆ ಹಣಕಾಸಿನ ಖರ್ಚಾಗಬಹುದು. ಸಂತಾನ ಸಾಧ್ಯತೆಗಳೂ ಹೆಚ್ಚಿವೆ. 2010ರ ಉತ್ತರಾರ್ಧದಲ್ಲಿ ನಿಮ್ಮ ಜಾಗ ಬದಲಾವಣೆಯಾಗಬಹುದು. ಉದ್ಯೋಗದಲ್ಲಿ ಸ್ಥಾನಪಲ್ಲಟದ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ.

ವೃಶ್ಚಿಕ: 2010ರ ಆರಂಭದ ತಿಂಗಳುಗಳಲ್ಲಿ ಆಫೀಸು ಅಥವಾ ಕಚೇರಿಯ ವಿಷಯದಲ್ಲಿ ತುಂಬ ಚಾಗರೂಕರಾಗಿರುವ ಅವಶ್ಯಕತೆಯಿದೆ. ಅದರಲ್ಲೂ ಹಣಕಾಸಿನ ವಿಚಾರಗಳು ನಿಮ್ಮಲ್ಲಿದ್ದರೆ ಅಥವಾ ಹಣಕಾಸಿನ ಕೆಲಸ ನೀವು ವಹಿಸಿದ್ದರೆ, ಖಂಡಿತವಾಗಿಯೂ ಇನ್ನೂ ಹೆಚ್ಚಿನ ಕಾಳಜಿ, ಜಾಗ್ರತೆ ಅಗತ್ಯ. ತಾಯಿಯಿಂದ ಲಾಭಗಳಾಗುವ ಸಾಧ್ಯತೆಗಳಿವೆ. ವಾಹನ ಹಾಗೂ ಆಸ್ತಿ ಖರೀದಿ ಸಂಭವವಿದೆ. 2010ರ ಕೊನೆಯ ದಿನಗಳಲ್ಲಿ ಮಕ್ಕಳಿಂದ ಸಂತೋಷ, ಸುಖ, ನೆಮ್ಮದಿ ಉಂಟಾಗುತ್ತದೆ. ಎಷ್ಟೋ ವರ್ಷಗಳಿಂದ ಹೋಗಬೇಕೆಂದುಕೊಂಡಿದ್ದ ಜಾಗಗಳಿಗೆ, ಪ್ರದೇಶಗಳಿಗೆ ಪ್ರಯಾಣಿಸುವ ಅವಕಾಶ ನಿಮ್ಮದಾಗಲಿದೆ.

ಧನು: 2010ರ ಪೂರ್ವಾರ್ಧದಲ್ಲಿ ಕುಟುಂಬದಲ್ಲಿ ಈವರೆಗಿದ್ದ ಕ್ಲೇಶ, ಗೊಂದಲಗಳೆಲ್ಲ ದೂರವಾಗುತ್ತದೆ. ನೀವು ವಧು ಅಥವಾ ವರಾನ್ವೇಶಿಗಳಾಗಿದ್ದರೆ ಖಂಡಿತಾ ನೀವು ಬಯಸಿದಂತಹ ಸಂಗಾತಿಯನ್ನು ಪಡೆಯುವ ಯೋಗವಿದೆ. ಜೂನ್ 2010ರ ನಂತರ ನೀವು ತಿನ್ನುವ ಆಹಾರದ ಬಗ್ಗೆ ತುಂಬ ಜಾಗರೂಕರಾಗಿರಬೇಕು. ಗ್ಯಾಸ್ಟ್ರಿಕ್ ತೊಂದರೆ, ಉದರ ಸಂಬಂಧೀ ರೋಗಗಳ ಸಾಧ್ಯತೆಗಳಿವೆ. ಕಚೇರಿ ಬದಲಾವಣೆ ಅಥವಾ ನಿಮ್ಮ ಉದ್ಯೋಗದಲ್ಲಿ ಬದಲಾವಣೆಯಾಗುವ ಸಾದ್ಯತೆಗಳೂ ಇವೆ.

ಮಕರ: 2010ರ ಮೊದಲರ್ಧದಲ್ಲಿ ಮಕ್ಕಳನ್ನು ಮದುವೆ ಮಾಡಿಸಲು ಯೋಚಿಸಿದವರು ಅಥವಾ ತಾವೇ ಮದುವೆಯಾಗಬಯಸಿದವರಿಗೆಲ್ಲ ತನ್ನ ಅಂದುಕೊಂಡ ಕಾರ್ಯ ಕೈಗೂಡಿ ಬರಬಹುದು. ಸಾಧ್ಯವಾಗಲಾರದ ಲಾಭಗಳು, ಯಶಸ್ಸುಗಳು ದೊರಕಿ ಸುಖ, ಸಂತೋಷ, ಸಮೃದ್ಧಿಯ ಬಾಳ್ವೆ ನಿಮ್ಮದಾಗುತ್ತದೆ. ಅದೃಷ್ಟ ಹೆಚ್ಚಿದೆ. 2010ರ ಉತ್ತರಾರ್ಧದಲ್ಲಿ ಶುಭಸುದ್ದಿಗಳು ಬರಬಹುದು. ಮನೆಯಲ್ಲಿ ಶಾಂತಿ, ಸಮಾಧಾನವಿರುತ್ತದೆ. ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧವೂ ತುಂಬ ಸಂತೋಷದಾಯಕವಾಗಿರುತ್ತದೆ.

ಕುಂಭ: 2010ರ ಆರಂಭದಲ್ಲಿ ಮಕ್ಕಳ ಜೊತೆಗೆ ಸಂಬಂಧ ಮುರಿದಿದ್ದರೆ ಅದು ಮತ್ತೆ ಒಂದುಗೂಡುವ ಸಾಧ್ಯತೆಗಳಿವೆ. ಅಥವಾ ಕುಟುಂಬದಲ್ಲಿ ಒಡಕಿದ್ದರೆ ಅದು ಸರಿಯಾಗುತ್ತದೆ. ಧಾರ್ಮಿಕತೆಯ ಬಗ್ಗೆ ಒಲವು ಹೆಚ್ಚುತ್ತದೆ. 2010ರ ಮಧ್ಯಂತರದ ನಂತರ ಆದಾಯ ಹೆಚ್ಚುತ್ತದೆ. ಹಣಕಾಸಿನ ಸಮಸ್ಯೆ ನೀಗುತ್ತದೆ. ಶುಭಸುದ್ದಿ ಬರುವ ಸಾಧ್ಯತೆಗಳಿವೆ.

ಮೀನ: 2010ರ ಆರಂಭದ ದಿನಗಳಲ್ಲಿ ಚಿನ್ನ, ಆಭರಣ ಅಥವಾ ಆಸ್ತಿಯಿಂದಾಗಿ ಲಾಭವಾಗುವ ಸಾಧ್ಯತೆಗಳಿವೆ. ವಾಹನದಿಂದಾಗಿ ಹಿಂದಿದ್ದ ಒತ್ತಡಗಳೆಲ್ಲ ನಿಂತು ಹೋಗುತ್ತದೆ. ಉತ್ತರಾರ್ಧದಲ್ಲಿ ನಿಮ್ಮ ಕುಟುಂಬದ ಹತ್ತಿರದ ಬಂಧುಗಳಿಗೆ ಅಥವಾ ಕುಟುಂಬದಲ್ಲಿ ಮದುವೆಯಾಗುತ್ತದೆ. ಈ ದಿನಗಳಲ್ಲಿ ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯ, ಆದಾಯ, ಕಚೇರಿಯ ಸಮಸ್ಯೆಗಳು ಇಲ್ಲವಾಗಿ, ಉತ್ತ ಲಾಭವಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :