Widgets Magazine

ಗುರು ಸ್ಥಾನಪಲ್ಲಟ: ಕುಂಭರಾಶಿ ಫಲಾಫಲಗಳು

WD
ಮರೆತುಬಿಡೋಣ, ಕ್ಷಮಿಸಿಬಿಡೋಣ ಎಂಬ ಉದಾರ ಮನಸ್ಸಿನಿಂದ ಇರುವ ನೀವು ಸದಾ ಹೃದಯದಾಳದಿಂದಲೇ ಮಾತನಾಡುತ್ತೀರಿ. ಪರಂಪರಾಗತವಾಗಿ ಬಂದಿರುವ ಕೆಲಸಗಳನ್ನು ನಂಬಿಕೆಗಳನ್ನೂ ರಕ್ಷಣೆ ಮಾಡುವುದರಲ್ಲಿ ಆದರ ತೋರಿಸುತ್ತೀರಿ. ತನ್ನದೇ ಬೇರಿ ದಾರಿಯೆಂದು ಎಂದಿಂದಿಗೂ ಸ್ವಂತ ಯೋಚಿಸಿದವರಲ್ಲ ನೀವು. ಜೀವನದಲ್ಲಿ ಹಲವಾರು ಏರುತಗ್ಗುಗಳನ್ನು ಎದುರಿಸಿರುವ ನೀವು ತಾಳ್ಮೆಯಿಂದಲೇ ಎಲ್ಲವನ್ನೂ ನಿಭಾಯಿಸಿದ್ದೀರಿ. ಹಣಕ್ಕಿಂತ ಹೆಚ್ಚಿನ ಮಹತ್ವ ಗುಣಕ್ಕೆ ನೀಡಿದ್ದೀರಿ. ಭೂಮಿಯಂತೆ ಸಹನೆಯುಳ್ಳ ನೀವು ಕಾರ್ಯಕಾರಣವಿಲ್ಲದೆ ಯಾವುದನ್ನೂ ಮಾಡುವುದಿಲ್ಲ. ಕೊಡುವುದರಲ್ಲಿಯೇ ತೃಪ್ತಿಪಡುವ ನೀವು ಬೇರೆಯವರ ಹಂಗಿನಲ್ಲಿ ಜೀವನ ನಡೆಸಲು ಇಷ್ಟಪಡುವುದಿಲ್ಲ.

ಇದುವರೆಗೆ ನಿಮ್ಮ ರಾಶಿಯ 10ನೇ ಮನೆಯಲ್ಲಿ ಕುಳಿತು ಚೆಂಡಾಟವಾಡಿದ ಗುರುಭಗವಾನ್ ಈಗ ಧಾರಾಳವಾಗಿ ದಯಪಾಲಿಸುವ 11ನೇ ಮನೆಗೆ ಕಾಲಿಡುತ್ತಾನೆ. ಕಳೆದುಕೊಂಡ ಗೌರವವನ್ನು ಮತ್ತೆ ಪಡೆಯುತ್ತೀರಿ. ನಿಮಗಿಂತ ಕಿರಿಯರಿಂದಲೂ ಅವಮಾನ ಪಡೆದಿರಿ. ಸಾಕ್ಷಿ ಹಾಕಿ ಸಂಕಟಕ್ಕೆ ಸಿಲುಕಿದಿರಿ. ಇನ್ನು ಮುಂದೆ ಯಾವ ದುಗುಡವೂ ಇರುವುದಿಲ್ಲ. ಮಾತಿನಂತೆ ನಡೆಯಲಾರದೆ ವ್ಯಸನಪಟ್ಟಿದ್ದೀರಿ. ನಿರೀಕ್ಷಿಸಿದ ಹಣ ಸಮಯಕ್ಕೆ ದೊರೆಯಲಿಲ್ಲವೆಂದು ಕಂಗಾಲಾದಿರಿ. ಈಗ ಇಂತಹ ಪರಿಸ್ಥಿತಿಯಿಂದ ಪಾರಾಗುತ್ತೀರಿ.

ಗಂಡಹೆಂಡಿರ ಮಧ್ಯೆ ಮನಸ್ತಾಪವಿರುತ್ತಿತ್ತು. ನೆಂಟರು ಸಹ ಇದರಲ್ಲಿ ಪಾಲ್ಗೊಂಡು ತೊಂದರೆ ನೀಡಿದರು. ಈಗ ಅವರನ್ನು ನೀವು ಗೌರವಿಸುವುದೇ ಇಲ್ಲವಾಗುವುದು. ಕುಟುಂಬದಲ್ಲಿ ನೆಮ್ಮದಿಯುಂಟಾಗುತ್ತದೆ. ವರಮಾನ ಹೆಚ್ಚುವಂತಹ ಅವಕಾಶಗಳು ದೊರೆಯುತ್ತವೆ. ಮಕ್ಕಳ ಬಗೆಗೆ ಒಳ್ಳೆಯ ಅಭಿಪ್ರಾಯವುಂಟಾಗುತ್ತದೆ. ಅವರೆಲ್ಲಾ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.

ನಿಮ್ಮ ಮಗಳಿಗೆ ನಿರೀಕ್ಷೆಯಂತೆಯೇ ಒಳ್ಳೆಯ ವರ ಸಿಗುತ್ತಾನೆ. ಸಾಲದ ಬಗೆಗೆ ಇನ್ನು ಮುಂದೆ ಹೆದರಬೇಕಾಗಿಲ್ಲ. ಎಲ್ಲವೂ ತೀರುತ್ತದೆ. ತಡವಾಗಿರುವ ಎಲ್ಲಾ ಕೆಲಸಗಳು ಸುಗಮವಾಗಿ ನೆರವೇರುತ್ತವೆ.

ಸಹೋದರ ಸಹೋದರಿಯರಿಗೆ ಎಷ್ಟೇ ಸಹಾಯ ಮಾಡಿದರೂ ಅರ್ಥಮಾಡಿಕೊಳ್ಳಲಿಲ್ಲವೆಂದು ನೀವು ಇನ್ನುಮುಂದೆ ವ್ಯಥೆ ಪಡಬೇಕಾಗಿಲ್ಲ.ಅವರು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಂಡು ನಿಮಗೆ ಸಹಾಯ ಮಾಡುತ್ತಾರೆ. ಪ್ರಮುಖರ ಸಂಪರ್ಕವೇರ್ಪಡುತ್ತದೆ. ಮನಸ್ಸಿಗೆ ನೆಮ್ಮದಿ ಇದೆ. ಸಂತಾನವಿಲ್ಲದವರಿಗೆ ಆ ಭಾಗ್ಯವೂ,ವಾಹನ,ಮನೆಯನ್ನೂ ಖರೀದಿಸುತ್ತೀರಿ.

ಅರ್ಧಮರ್ಧ ನಡೆದಿದ್ದ ಕಟ್ಟಡ ಕೆಲಸ ಪೂರ್ತಿಯಾಗುತ್ತದೆ. ಪಿತ್ರಾರ್ಜಿತ ಸ್ವತ್ತಿನ ಬಗೆಗೆ ಸಮಸ್ಯೆ ಪರಿಹಾರವಾಗುತ್ತದೆ. ತಂದೆ ತಾಯಿಯ ಆಶೆಯನ್ನು ಈಡೇರಿಸುತ್ತೀರಿ.ತಾಯಿಯ ಕಡೆ ಬಂಧುವರ್ಗದವರಿಂದ ಸಹಾಯವಿದೆ. ನಿಮ್ಮ ಕನಸು ನನಸಾಗುತ್ತದೆ. ಎಲ್ಲಾ ಆಸೆಗಳೂ ನೆರವೇರುತ್ತವೆ. ರಾಜಕೀಯ ವಿಷಯಗಳಿಂದ ತಲೆದೋರಿದ ದೂರುಗಳು ದೂರುವಾಗುತ್ತವೆ. ರಾಜಕೀಯ ಮತ್ತು ವಿದ್ಯಾವಂತರ ಸಖ್ಯವುಂಟಾಗುತ್ತದೆ. ಗೌರವ ಪದವಿಗಳು ದೊರೆಯುತ್ತವೆ. ನಿಮ್ಮನ್ನು ನಿರ್ಲಕ್ಷ ಮಾಡಿದವರೆಲ್ಲರೂ ನಿಮಗೆ ಗೌರವ ನೀಡಲು ಪ್ರಾರಂಭಿಸುತ್ತಾರೆ. ತಡವಾದರೂ ಪುಣ್ಯಕ್ಷೇತ್ರಗಳಿಗೆ ಸಂದರ್ಶನ ನೀಡುತ್ತೀರಿ. ನೆರೆಹೊರೆಯವರು ಆದರಿಸುತ್ತಾರೆ.

ವ್ಯಾಪಾರದಲ್ಲಿ ಎಷ್ಟೇ ಹೋರಾಡಿದರೂ ನಷ್ಟವಾಗುತ್ತಿತ್ತು. ಅದು ಇನ್ನು ಮುಂದೆ ಲಾಭದಾಯಕವಾಗಿರುತ್ತದೆ. ಮೊಂಡುಬಿದ್ದ ಬಾಕಿಗಳೆಲ್ಲವೂ ವಸೂಲಾಗುತ್ತವೆ. ವ್ಯಾಪಾರದ ಸ್ಪರ್ಧೆಯಲ್ಲಿ ನೀವು ಗೆಲ್ಲುವಿರಿ. ಹೊಸ ಕೆಲಸಗಾರರನ್ನು ನೇಮಿಸಿಕೊಳ್ಳುತ್ತೀರಿ. ಪಾಲುದಾರರು ಪೂರ್ಣ ಸಹಕಾರ ನೀಡುತ್ತಾರೆ. ಹೊಸ ಒಪ್ಪಂದಗಳು ಸಿದ್ದವಾಗುತ್ತವೆ. ಆಮದು ರಫ್ತು, ಎಲೆಕ್ಟ್ರಾನಿಕ್ಸ್, ಆಹಾರವಸ್ತು ಇವುಗಳಿಂದ ವ್ಯಾಪಾರ ಅಭಿವೃದ್ದಿಯಾಗುತ್ತದೆ. ಗಿರಾಕಿಗಳು ಹೆಚ್ಚಾಗುತ್ತಾರೆ.

ಉದ್ಯೋಗದಲ್ಲಿ ಕಂಡುಬಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಮೇಲಧಿಕಾರಿಗಳ ಆದರ ಪಡೆಯುತ್ತೀರಿ.ಅನಿರೀಕ್ಷಿತವಾಗಿ ಉದ್ಯೋಗದಲ್ಲಿ ಮೇಲ್ದರ್ಜೆ ಪಡೆಯುತ್ತೀರಿ. ವಿದೇಶಿ ವರ್ತಕ ಸಂಸ್ಥೆಗಳ ಮೂಲಕ ಹೊಸ ಅವಕಾಶಗಳು ದೊರೆಯುತ್ತವೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿದೆ.

ಕನ್ಯಾಮಣಿಗಳಿಗೆ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಪ್ರೇಮವಿಚಾರದಲ್ಲಿ ಗೆಲುವಾಗುತ್ತದೆ.ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ದೊರೆಯುತ್ತದೆ. ಉದರಶೂಲೆ, ನಿದ್ರಾಭಂಗ ಇವು ವಾಸಿಯಾಗುತ್ತದೆ.

ವಿವಾಹದ ವಿಘ್ನ ನಿವಾರಣೆಯಾಗುತ್ತದೆ.ವಿದ್ಯಾರ್ಥಿಗಳು ಆಶೆ ಈಡೇರುತ್ತದೆ. ಕಷ್ಟಕರವಾದ ಪಾಠಗಳಲ್ಲಿ ಗಮನನೀಡಿ ಒಳ್ಳೆಯ ಹೆಸರು ಪಡೆಯುತ್ತೀರಿ. ಉಪಾಧ್ಯಾಯರ ಮೆಚ್ಚುಗೆ ಪಡೆಯುತ್ತೀರಿ. ಕಲಾವಿದರಿಗೆ ಮನ್ನಣೆ ದೊರೆಯುತ್ತದೆ. ಅಪಾರ್ಥದಿಂದ ಮುಕ್ತರಾಗುತ್ತಾರೆ.

ಈ ಗುರು ಸ್ಥಾನಪಲ್ಲಟವು ಮಡಕೆಯಲ್ಲಿದ್ದ ದೀಪವನ್ನು ಗೋಪುರದ ಮೇಲಿಟ್ಟಂತೆ ಪ್ರಕಾಶಮಾನವಾಗುತ್ತದೆ. ಧನಲಾಭ ಮತ್ತು ಗೌರವ ಹೆಚ್ಚಾಗುವಂತೆ ಮಾಡುತ್ತದೆ.

ಪರಿಹಾರ: ತಂಜಾವೂರು ಬೃಹದೀಶ್ವರ ಮತ್ತು ದಕ್ಷಿಣಾಮೂರ್ತಿಯನ್ನು ಅನೂರಾಧಾ ನಕ್ಷತ್ರ ನಡೆಯುವ ದಿನಗಳಲ್ಲಿ ತುಪ್ಪದ ದೀಪ ಹಚ್ಚಿ ಪೂಜಿಸಿ ಹಳೆಯ ಶಿವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯಮಾಡಿ. ಅಪಘಾತದಲ್ಲಿ ತೊಂದರೆಯಲ್ಲಿರುವವರಿಗೆ ಸಹಾಯಮಾಡಿ. ಸಂತೋಷವುಂಟಾಗುತ್ತದೆ.

ಇಳಯರಾಜ|ಇದರಲ್ಲಿ ಇನ್ನಷ್ಟು ಓದಿ :