Widgets Magazine

ಗುರು ಸ್ಥಾನಪಲ್ಲಟ : ತುಲಾ ರಾಶಿ ಫಲಾಫಲಗಳು

WD
ಆಗಾಗ್ಗೆ ತೊಂದರೆಗಳು ತಲೆದೋರಿದರೂ ಅವುಗಳನ್ನು ಧೈರ್ಯದಿಂದ ಎದುರಿಸಿ ಗೆಲುವು ಪಡೆಯುವ ಸ್ವಭಾವದವರು ನೀವು. ಅಚಲ ಆತ್ಮವಿಶ್ವಾಸವಿರುವ ನೀವು ತಡೆಯುವ ಕಲ್ಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸುಗಮವಾಗಿ ಏರುತ್ತೀರಿ. ಸ್ವತಂತ್ರ ಮನೋಭಾವದ ನೀವು ಸದಾ ಇತರರಿಗೆ ಮಾದರಿಯಾಗಿ ಕಾಣಿಸುತ್ತೀರಿ. ಮಲ್ಲಿಗೆ ಹೂವಿನಂತೆ ಇತರರ ಮನಸ್ಸನ್ನು ಆಕರ್ಷಿಸುತ್ತೀರಿ. ಮನಃಸಾಕ್ಷಿಗೆ ವಿರುದ್ದವಾಗಿ ನೀವು ಎಂದೆಂದಿಗೂ ಮುನ್ನಡೆಯುವುದಿಲ್ಲ.

ನಿಮ್ಮ ಧನಸ್ಥಾನದಲ್ಲಿ ನಿಂತಿದ್ದ ಗುರುಭಗವಾನ್ 16-11-2007ರಿಂದ 30-11-2007 ರವರೆಗೆ ಮೂರನೇ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾನೆ.ಇದುವರೆಗೂ ನಿಮಗೆ ಧನಲಾಭವನ್ನು ಕುಟುಂಬ ಸಂತೋಷವನ್ನು ದಯಪಾಲಿಸಿದವನು. ಇದೀಗ ಮೂರನೇ ಸ್ಥಾನಕ್ಕೆ ಬರುವುದರಿಂದ ಒಳ್ಳೆಯದೇ ನಡೆಯುತ್ತದೆ. ಗುರು ನಿಮ್ಮ ಮಡದಿಯ ಸ್ಥಾನ,ಭಾಗ್ಯಸ್ಥಾನ,ಲಾಭಸ್ಥಾನ ಮುಂತಾದವುಗಳನ್ನು ಕರುಣಾಪೂರ್ವಕವಾಗಿ ವೀಕ್ಷಿಸುವುದರಿಂದ ಗೆಲುವು ಮುಂದುವರೆಯುತ್ತದೆ. ಅರ್ಥವಾಗುವಂತೆ,ನೀಳವಾಗಿ ನೀವು ಮಾತನಾಡುತ್ತೀರಿ. ಕುಟುಂಬದಲ್ಲಿ ನೆಮ್ಮದಿಯುಂಟಾಗುತ್ತದೆ.ಬಂಧುವರ್ಗದವರ ಮೂಲಕ ಗಂಡಹೆಂಡಿರ ಮಧ್ಯೆ ಆಗಾಗ್ಗೆ ಭಿನ್ನಾಭಿಪ್ರಾಯವುಂಟಾಗುತ್ತದೆ. ಅವಸರದ ನಿರ್ಧಾರ ತೆಗೆದುಕೊಳ್ಳಬಾರದು. ತಾಯಿಯೊಂದಿಗೆ ಮನಸ್ತಾಪವುಂಟಾಗುತ್ತದೆ. ಆಸ್ತಿ ವ್ಯವಹಾರದಲ್ಲಿ ಜಾಗರೂಕತೆಯಿಂದ ಇರಬೇಕು.

ಮಕ್ಕಳು ಒಲವಿನಿಂದ ಇರುತ್ತಾರೆ. ಅವರ ದೇಹಾರೋಗ್ಯ ಉತ್ತಮಗೊಳ್ಳುತ್ತದೆ. ಉದ್ಯೋಗ ದೊರೆತು ಸಂಪಾದನೆ ಮಾಡುತ್ತಾರೆ. ವಿದೇಶಕ್ಕೆ ತೆರಳಿ ಅಧ್ಯಯನ ಮಾಡುವ ಅವಕಾಶಗಳು ಅವರಿಗೆ ದೊರೆಯುತ್ತವೆ. ಬೆಲೆಬಾಳುವ ಆಭರಣಗಳು ಹಾಗು ವಸ್ತುಗಳನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ.ವಿದ್ಯುಚ್ಛಕ್ಕಿ,ಎಲೆಕ್ಟ್ರಾನಿಕ್ಸ್ ಮುಂತಾದ ಸಾಧನಗಳಿಗೆ ಕೊರತೆಯುಂಟಾಗಬಹುದು.

ಕನ್ಯಾಮಣಿಗಳಿಗೆ ಹೊಸ ಪ್ರಯತ್ನಗಳಿಂದ ಜಯವಾಗುವುದು. ಹೊಸ ಸ್ನೇಹಿತರು ದೊರೆಯುತ್ತಾರೆ.ಇತರರ ವಿಷಯಗಳನ್ನು ಹಾಗೆಯೇ ನಂಬಬೇಡಿ. ಮದುವೆಗೆ ಬಂದಿರುವ ವಿಘ್ನಗಳು ನಿವಾರಣೆಯಾಗುತ್ತವೆ. ಪ್ರಭಾವಶಾಲಿಗಳ ಸಂಪರ್ಕ ದೊರೆಯುತ್ತದೆ.ಪದವಿಗಳು ನಿಮ್ಮನ್ನು ಹುಡುಕುತ್ತಾ ಬರುತ್ತವೆ. ಸವಾಲೆಸಗುವ ಸಮಸ್ಯೆಗಳಿಗೆ ನಿಮ್ಮ ಪದವಿಗಳೇ ಉತ್ತರ ಹೇಳುತ್ತವೆ. ಬುದ್ದಿವಂತಿಕೆ ಮತ್ತು ಆಡಳಿತ ಸಾಮರ್ಥ್ಯ ಅಧಿಕರಿಸುತ್ತವೆ. ಕಣ್ಣು ಮತ್ತು ಹೃದಯ ಬೇನೆ ನಿವಾರಣೆಯಾಗುತ್ತದೆ. ಪಿತ್ತ ಸಂಬಂಧವಾದ ಖಾಯಿಲೆ ತಲೆದೋರಬಹುದು. ಕನಸುಗಳು ಹಾಗು ನಿದ್ರಾ ಭಂಗದಿಂದ ಸೊರಗಿದಂತೆ ಕಾಣುತ್ತೀರಿ.ವಿದ್ಯಾರ್ಥಿ,ವಿದ್ಯಾರ್ಥಿನಿಯರ ಜ್ಞಾನದ ಮಟ್ಟ ಅಧಿಕವಾಗುತ್ತದೆ.ಉನ್ನತ ಅಧ್ಯಯನದತ್ತ ಗಮನ ಹರಿಸುತ್ತಾರೆ.ಸಹಪಾಠಿಗಳು ಸಹಾಯಕರಾಗುತ್ತಾರೆ, ಆಟೋಟಗಳಲ್ಲಿ ಬಹುಮಾನ ಮತ್ತು ಮೆಚ್ಚುಗೆಗಳಿಸುತ್ತಾರೆ.

ವ್ಯಾಪಾರವು ಬಿಸಿಯೇರುತ್ತದೆ. ಸ್ಪರ್ಧೆ ಹೆಚ್ಚಾಗುತ್ತದೆ.ಲಾಭವೂ ಹೆಚ್ಚು. ಕೆಲಸದಾಳುಗಳಿಂದ ಕೆಲವು ಸಮಸ್ಯೆಗಳುಂಟಾಗುತ್ತವೆ. ಉದ್ದಿಮೆಯ ರಹಸ್ಯಗಳನ್ನು ಇತರರೊಂದಿಗೆ ಚರ್ಚೆ ಮಾಡಬೇಡಿ.ಸಾಲಸೌಲಭ್ಯವಿರುತ್ತದೆ.ಅಂಗಡಿಯನ್ನು ಚೆನ್ನಾಗಿ ಸಜ್ಜುಗೊಳಿಸುತ್ತೀರಿ.ಹೊಸ ಪಾಲುದಾರರೊಂದಿಗೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಸಂಘ ಅಥವಾ ಉದ್ದಿಮೆದಾರರ ಸಂಘಗಳಿಂದ ದೂರವಿರುವುದು ಒಳ್ಳೆಯದು.ಬ್ರೋಕರೇಜ್,ಕಂಪ್ಯೂಟರ್,ಆಹಾರಪದಾರ್ಥಗಳು ಮುಂತಾದವುಗಳಿಂದ ಅಧಿಕಲಾಭ. ಉದ್ಯೋಗದಲ್ಲಿ ಅಧಿಕಾರಿಗಳು ಸಹಕರಿಸುತ್ತಾರೆ. ಸಹೋದ್ಯೋಗಿಗಳಿಂದ ಕೆಲವು ಸಮಸ್ಯೆಗಳು.ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ನಿಧಾನವಿರಲಿ. ಹೊಸ ಉದ್ಯೋಗ ಹುಡುಕಿಕೊಂಡು ಬರುತ್ತದೆ. ಕುಟುಂಬದಿಂದ ದೂರದ ಊರಿನಲ್ಲಿದ್ದು ಉದ್ಯೋಗ ಮಾಡುವ ಸಂಭವವಿದೆ.ಕಲಾವಿದರಿಗೆ ಹೊಸ ಉದ್ದಿಮೆಗಳಿಂದ ಅವಕಾಶಗಳಿವೆ.
ಗುರುವಿನ ಸ್ಥಾನಪಲ್ಲಟ ಖರ್ಚು ಹೆಚ್ಚಾಗಲು ಮತ್ತು ಕೆಲಸದಲ್ಲಿ ನಿಧಾನವುಂಟುಮಾಡಿದರೂ ಮತ್ತೊಂದು ದಿಕ್ಕಿನಲ್ಲಿ ಬೆಳವಣಿಗೆಯುಂಟುಮಾಡುತ್ತದೆ.

ಪರಿಹಾರ: ವೃದ್ದಾಚಲಂ ಬಳಿಯ ಲಿಂಗವಡಿಯಲ್ಲಿ ಮೂರ್ತಿವೆತ್ತಿರುವ ಮುರುಗಪೆರುಮಾಳ್ ಆಗಿರುವ ಶ್ರೀ ಕೊಳಂಜಿಯಪ್ಪರನ್ನು ಪುನರ್ವಸು ನಕ್ಷತ್ರದ ದಿನದಂದು ಪೂಜಿಸಿ.ಹಸುವಿಗೆ ಹಣ್ಣು ತಿನ್ನಿಸಿ.ಸಂತೋಷವುಂಟಾಗುತ್ತದೆ.
ಇಳಯರಾಜ|ಇದರಲ್ಲಿ ಇನ್ನಷ್ಟು ಓದಿ :