Widgets Magazine

ಗುರು ಸ್ಥಾನಪಲ್ಲಟ ಮಕರ ರಾಶಿ ಫಲಾಫಲಗಳು

WD
ಬೇರೆಯವರಿಗೆ ಆದರ ನೀಡುವವರೂ, ಯಾರಿಗೂ ಹೆದರದೆ ಮುಚ್ಚುಮರೆಯಿಲ್ಲದೆ ವಾಸ್ತವ ಸಂಗತಿಯನ್ನು ಮಾತನಾಡುವ ಗುಣವಂತರು ನೀವು. ಯಾರಲ್ಲಿಯೂ ಏನನ್ನೂ ತೆಗೆದುಕೊಳ್ಳಲು ಬಯಸದವರು, ಹೇಳಿದ ಮಾತಿಗೆ ತಪ್ಪದವರೂ, ಸಮಯ ಬಂದರೆ ನಿಮ್ಮದನ್ನೇ ಕಳೆದುಕೊಳ್ಳಲು ಸಿದ್ಧವಾಗಿರುವವರು ನೀವು. ಏನೇ ಬಂದರೂ ಧೈರ್ಯವಾಗಿ ಎದುರಿಸಲು ಸಮರ್ಥವಾಗಿರುವವರು ಮತ್ತು ಸಂಪ್ರದಾಯಗಳು ಅಡ್ಡಿಬಂದರೂ ನಿಲ್ಲದೆ ಹೊಸ ಮಾರ್ಗಗಳನ್ನು, ನಿಲುವನ್ನು ಕೈಗೊಳ್ಳುವವರು ನೀವು.

ಇದುವರೆಗೆ ನಿಮ್ಮ ರಾಶಿಗೆ ಲಾಭದ ಸ್ಥಾನದಲ್ಲಿದ್ದ ಗುರು ಹಣವನ್ನು ಕೊಟ್ಟಂತೆ ಕೊಡುವುದು ಅದನ್ನು ಹಾಗೆಯೇ ಬೇರೆ ಮಾರ್ಗಗಳಲ್ಲಿ ಖರ್ಚುಮಾಡಿಸುವುದು ನಡೆಯಿತು; ಇದರಿಂದಾಗಿ ನೀವು ಏನನ್ನೂ ಸಾಧಿಸಲಾಗಲಿಲ್ಲ. ಈಗ 12 ನೇ ವ್ಯಯಸ್ಥಾನದಲ್ಲಿ ಬಂದುಕುಳಿತುಕೊಳ್ಳುವುದರಿಂದ ನಿಮ್ಮನ್ನು ಹಲವು ಮಾರ್ಗಗಳಲ್ಲಿ ಮುನ್ನಡೆಸುತ್ತಾನೆ.

ಗುರು ತನ್ನ ಸ್ವಂತ ಮನೆಯಲ್ಲಿ ನಿಂತು ಅಧಿಕಾರ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಹೇಳಿದ ಮಾತಿನಂತೆ ನಡೆಯಲಾರದೆ ಮನಸ್ಸು ಬೇಸರವಾಯಿತಲ್ಲವೆ? ಹಣಲಾಭ ಬಂದರೂ ಕೈಯಲ್ಲಿ ನಿಲ್ಲಲಿಲ್ಲ; ಸಾಲ ಏರುತ್ತಲೇ ಹೋಯಿತು. ತಡೆಯಲಾಗದೆಂದು ವ್ಯಥೆಪಟ್ಟಿದ್ದೀರಿ. ಇನ್ನು ಮುಂದೆ ಕುಟುಂಬದ ವರಮಾನ ಹೆಚ್ಚಾಗುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ.

ಕುಟುಂಬದಲ್ಲಿ ಏನಾದರೂ ಸದಾ ಗೊಂದಲವಿರುತ್ತಿತ್ತು. ನೆಮ್ಮದಿ ಇರಲಿಲ್ಲ. ಇನ್ನು ಮುಂದೆ ಸಂತೋಷದಲ್ಲಿ ನಲಿದಾಡುತ್ತೀರಿ. ಎಲ್ಲರೊಂದಿಗೆ ಅನುಸರಣೆಯಿಂದ ನಡೆಯುತ್ತೀರಿ. ನಿಮ್ಮ ಮಾತನ್ನು ಎಲ್ಲರೂ ಗೌರವಿಸುತ್ತಾರೆ. ಒಳ್ಳೆಯ ಕೆಲಸ ದೊರೆಯುತ್ತದೆ. ಕೈತುಂಬಾ ಸಂಪಾದನೆ ಇರುತ್ತದೆ. ಬಡ್ಡಿಸಮೇತ ಸಾಲಗಳನ್ನು ತೀರಿಸುತ್ತೀರಿ. ಮಕ್ಕಳ ಹಠಮಾರಿ ಗುಣ ಬದಲಾಗುತ್ತದೆ. ನಿಮ್ಮ ಬಗ್ಗೆ ಹೆಚ್ಚು ಪ್ರೀತಿ ತೋರಿಸುತ್ತಾರೆ. ಕೆಟ್ಟ ಸಹವಾಸಗಳನ್ನು, ದುರ್ವಿದ್ಯೆಗಳನ್ನು ಬಿಟ್ಟುಬಿಡುತ್ತಾರೆ. ನಿಮ್ಮ ಮಕ್ಕಳಿಗೆ ಒಳ್ಳೆಯ ಕೆಲಸ ದೊರೆಯುತ್ತದೆ. ಮದುವೆಯಿಂದ ಬಂದ ಬಿಕ್ಕಟ್ಟು ಪರಿಹಾರವಾಗುತ್ತದೆ. ನಿಮ್ಮ ನಿರೀಕ್ಷೆಯಂತೆಯೇ ಒಳ್ಳೆಯ ಅಳಿಯ ಬರುತ್ತಾನೆ. ಮಗನಿಗೆ ಸರಿಯಾದ ಕೆಲಸವಿಲ್ಲವೆಂದು ಯೋಚನೆ ಮಾಡುತ್ತಿದ್ದಿರಲ್ಲವೆ? ಒಳ್ಳೆಯ ಕೆಲಸ ಸೇರುತ್ತಾನೆ. ದೂರವಾಗಿದ್ದ ನೆಂಟರು ಸ್ವೇಹಿತರು ನಿಮ್ಮ ಅಭಿವೃದ್ಧಿಯನ್ನು ಕಂಡು ತಾವಾಗಿಯೇ ಬಂದು ನಿಮ್ಮನ್ನು ಆದರಿಸುತ್ತಾರೆ.

ಸಹೋದರ, ಸಹೋದರಿಯರೊಂದಿಗೆ ಇದ್ದ ಮನಸ್ತಾಪ ಮರೆಯಾಗುತ್ತದೆ. ಹೊರಗಿನವರು ನಿಮ್ಮ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ. ಗೌರವಾನ್ವಿತ ಪದವಿಗಳು ಹುಡುಕಿಕೊಂಡು ಬರುತ್ತವೆ. ವಿಐಪಿಗಳ ಸಹಾಯ ಹೆಚ್ಚಾಗುತ್ತದೆ. ಬಂದದ್ದೆಲ್ಲಾ ಖರ್ಚಾಗುತ್ತಿತ್ತು. ಈಗ ಸಾಲಸೋಲವಿಲ್ಲದೆ ಇತರರಿಗೆ ಸಮಾನವಾಗಿ ಜೀವನ ನಡೆಸುತ್ತೀರಿ.

ಹಳೆಯ ಮುರುಕು ಗಾಡಿಯನ್ನು ಇಟ್ಟುಕೊಂಡು ಇಷ್ಟು ದಿನಗಳು ಕಷ್ಟಪಟ್ಟಿದ್ದೀರಿ. ಇನ್ನು ಹೊಸ ಬಗೆಯ ವಾಹನವನ್ನು ಪಡೆಯುತ್ತೀರಿ. ಸರಕಾರದ ಕೆಲಸ ಯಾವುದನ್ನು ಮುಟ್ಟಿದರೂ ಕಗ್ಗಂಟಾಗಿತ್ತು. ಇನ್ನು ಕೆಲಸವೆಲ್ಲವೂ ಸಲೀಸಾಗಿ ನಡೆಯುತ್ತವೆ. ಹಲವು ವರ್ಷಗಳಿಂದಲೂ ಕಾಯುತ್ತಿದ್ದ ಪುಣ್ಯಕ್ಷೇತ್ರ ದರ್ಶನ ಲಭಿಸುತ್ತದೆ. ರಾಜಕೀಯ ವ್ಯಕ್ತಿಗಳಿಗಿದ್ದ ಇಕ್ಕಟ್ಟು ಪರಿಹಾರವಾಗುತ್ತದೆ. ಅರ್ಧಕ್ಕೆ ನಿಲ್ಲಿಸಿದ್ದ ಕಟ್ಟಡದ ಕೆಲಸ ಪೂರ್ತಿಯಾಗುತ್ತದೆ.

ಕೋರ್ಟು ವ್ಯವಹಾರ ಸುಗಮವಾಗುತ್ತದೆ. ವಿದೇಶ ಪ್ರಯಾಣ ಒಳ್ಳೆಯ ರೀತಿಯಲ್ಲಿ ಮುಗಿಯುತ್ತದೆ. ಹಣ ಪಡೆದು ಮೋಸ ಮಾಡಿದವರು ಹಣವನ್ನು ಹಿಂತಿರುಗಿಸ್ತಾರೆ. ನೆರೆಹೊರೆಯವರು ಸುಮಧುರವಾಗಿ ನಡೆದುಕೊಳ್ಳುತ್ತಾರೆ.

ವ್ಯಾಪಾರಕ್ಕೆ ಅನುಭವವುಳ್ಳ ಕೆಲಸದವರು ದೊರೆಯುತ್ತಾರೆ. ಹೊಸ ಹೊಸ ಒಪ್ಪಂದಗಳು ದೊರೆಯುತ್ತವೆ. ಗಿರಾಕಿಗಳ ಮನಸ್ಸಿಗೆ ತಕ್ಕಂತೆ ಸರಕು ಒದಗಿಸುತ್ತೀರಿ. ಪಾಲುದಾರರು ಮತ್ತೆ ಬಂದು ಜತೆ ಸೇರುತ್ತಾರೆ. ಅಂಗಡಿಯನ್ನು ಅಲಂಕರಿಸುತ್ತೀರಿ.

ಉದ್ಯೋಗದಲ್ಲಿ ನಿಮ್ಮ ಬಗೆಗಿದ್ದ ದೂರುಗಳೆಲ್ಲವೂ ದೂರವಾಗುತ್ತವೆ. ನಿರೀಕ್ಷಿಸಿದಂತೆ ಪದೋನ್ನತಿ ದೊರೆಯುತ್ತದೆ. ಕೆಲಸದ ಜವಾಬ್ದಾರಿ ಹೆಚ್ಚಾಗುತ್ತದೆ. ಸಹೋದ್ಯೋಗಿಗಳ ಸ್ವಂತ ವಿಷಯದಲ್ಲಿ ತಲೆಹಾಕಬೇಡಿ. ವಿದೇಶಿ ಸಂಸ್ಥೆಯೊಂದಿಗೆ ಒಳ್ಳೆಯ ಉದ್ಯೋಗ ದೊರೆಯುತ್ತದೆ.

ಕನ್ಯಾಮಣಿಗಳಿಗೆ ಆರೋಗ್ಯ ಉತ್ತಮಗೊಳ್ಳುತ್ತದೆ. ಉನ್ನತ ಅಧ್ಯಯನದಲ್ಲಿ ಜಯಶಾಲಿಗಳಾಗುತ್ತೀರಿ; ಒಳ್ಳೆಯ ನೌಕರಿ ದೊರೆಯುತ್ತದೆ. ಪ್ರೇಮ ವ್ಯವಹಾರ ಫಲಿಸಿ ಮದುವೆಯಾಗುತ್ತದೆ. ವಿದ್ಯಾರ್ಥಿಗಳು ವಿದ್ಯೆ ಹಾಗೂ ಆಟಪಾಠಗಳಲ್ಲಿ ಜಯಗಳಿಸುತ್ತಾರೆ.

ಕಲಾವಿದರಿಗೆ ತಡವಾಗಿ ಕೆಲಸಗಳು ದೊರೆಯುತ್ತವೆ. ಸಣ್ಣಪುಟ್ಟ ತೊಂದರೆಗಳು, ಅವಮಾನ ದೂರವಾಗುತ್ತವೆ. ನಿಮ್ಮ ಕೃತಿಗಳಿಗೆ ಸನ್ಮಾನವಿರುತ್ತದೆ. ಈ ಸ್ಥಾನಪಲ್ಲಟ ಕೈಗೆ ಬಂದರೂ ಬಾಯಿಗೆ ಬರಲಿಲ್ಲವೆಂಬ ಸ್ಥಿತಿಯನ್ನು ಬದಲಾಯಿಸಿ ಮುನ್ನಡೆಸುತ್ತದೆ ಮತ್ತು ಇಕ್ಕಟ್ಟುಗಳಿಂದ ಪಾರುಮಾಡುತ್ತದೆ.

ಇಳಯರಾಜ|
ಪರಿಹಾರ: ಕಾಂಚೀಪುರದ ಬಳಿಯಿರುವ ಗೋವಿಂದವಾಡಿಯಲ್ಲಿರುವ ಶ್ರೀ ದಕ್ಷಿಣಾಮೂರ್ತಿಯನ್ನು ಗುರುವಾರಗಳಂದು ಸೇವಿಸಿ. ಅಭಿಷೇಕ ಮಾಡಿಸಿ ವಸ್ತ್ರ ದಾನ ಮಾಡಿ. ಮನಸ್ಸು ಸ್ವಾಸ್ಥ್ಯ ಕಳೆದುಕೊಂಡವರಿಗೆ ಸಹಾಯ ಮಾಡಿ, ಆಹಾರ ದಾನ ಮಾಡಿ. ನೆನೆದದ್ದು ನೆರವೇರುತ್ತದೆ.


ಇದರಲ್ಲಿ ಇನ್ನಷ್ಟು ಓದಿ :