Widgets Magazine

ಗುರು ಸ್ಥಾನಪಲ್ಲಟ: ಮೇಷ ರಾಶಿ ಫಲಾಫಲ

WD
ಎಂದೆಂದೂ ಎಲ್ಲಾ ವಿಚಾರಗಳಲ್ಲಿಯೂ ಕ್ರಾಂತಿಕಾರಕ ತೀರ್ಮಾನವನ್ನು ಕೈಗೊಳ್ಳುವಂತಹವರೇ, ಮೊದಲನೆಯ ಪ್ರಯತ್ನದಲ್ಲಿಯೇ ಕೆಲಸವನ್ನು ಮುಗಿಸುವ ಉತ್ಸಾಹಪಡೆದಿರುವವರೇ, ಬಿಸಿ ಬಿಸಿಯಾಗಿ ಉಟಮಾಡುವ ನೀವು ಹಸಿವನ್ನು ತಡೆಯಲಾರಿರಿ. ನಿಮ್ಮ ಸುತ್ತಲಿನವರು ಮಾಡುವ ತಪ್ಪುಗಳನ್ನು ಹಿಂದೆಮುಂದೆ ನೋಡದೇ ಎತ್ತಿ ತೋರಿಸುವಂತಹವರೇ, ಮನೆಯ ಹಿತದೊಂದಿಗೆ ದೇಶದ ಪ್ರಗತಿಯ ಬಗೆಗೆ ಹೆಚ್ಚು ವಿಚಾರ ಮಾಡುವಂತಹವರೇ, ದಾನಶೀಲರಾದ ನೀವು ಅರ್ಹತೆಗನುಗುಣವಾಗಿ ಕೈಯೆತ್ತಿ ನೀಡುವವರೇ ನೀವು ಸಮರ್ಥರು. ಮುಂಗೋಪಿಗಳಾದ ನೀವು ಉತ್ತಮ ಗುಣವಂತರಾಗಿರುತ್ತೀರಿ.

ಇದುವರೆಗೆ ನಿಮ್ಮ ರಾಶಿಯ ಎಂಟನೇ ಸ್ಥಾನದಲ್ಲಿದ್ದು ಕಾರ್ಯವೆಸಗಿದ ಗುರು ಭಗವಾನ್ 16-11-2007 ರಿಂದ 30-11-2007ವರೆಗೆ ಒಂಬತ್ತನೆಯ ಸ್ಧಾನದಲ್ಲಿ ಆಸೀನನಾಗಿ ನಿಮ್ಮ ಜೀವನದಲ್ಲಿ ಹಠಾತ್ತಾಗಿ ಬದಲಾವಣೆಗಳನ್ನು,ಸಂಪತ್ತು ಸೌಭಾಗ್ಯಗಳನ್ನು ಧಾರಾಳವಾಗಿ ದಯಪಾಲಿಸುತ್ತಾನೆ. ಕುಟುಂಬದಲ್ಲಿ ಇನ್ನು ಮುಂದೆ ಸಂತೋಷವುಂಟಾಗುತ್ತದೆ.ನಿಮ್ಮ ಮಾತಿಗೆ ಎಲ್ಲರೂ ಗೌರವ ನೀಡುತ್ತಾರೆ.

ಗಂಡ-ಹೆಂಡಿರ ಮಧ್ಯೆ ತಲೆದೋರುವ ಜಗಳ, ಮನಸ್ತಾಪ, ಸಂದೇಹಗಳು ದೂರವಾಗುತ್ತವೆ.ಅಗಲಿದವರೊಂದಿಗೆ ಸೇರುತ್ತೀರಿ.ಮಕ್ಕಳ ಭಾಗ್ಯವೇರ್ಪಡುತ್ತದೆ.ಮಕ್ಕಳ ಹಠಮಾರಿತನ ಬದಲಾಗುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ಜಯಶಾಲಿಗಳಾಗುತ್ತಾರೆ. ನಿಮ್ಮ ಮಗಳಿಗೆ ಅನೇಕ ಮಂದಿ ವರಗಳು ಬಂದರೂ ಯಾವುದೂ ತೀರ್ಮಾನವಾಗಲಿಲ್ಲವೆಂದು ಆತಂಕಪಡುತ್ತೀದ್ದೀರಿ. ಇನ್ನು ಒಳ್ಳೆಯ ಜಾಗದಲ್ಲಿ ಮದುವೆ ನಡೆಯುತ್ತದೆ. ಮಗನ ಮನಸ್ಸಿನಲ್ಲಿರುವ ಅನುಮಾನಗಳನ್ನು ತಿಳಿದು ಅದಕ್ಕೆ ಪ್ರೋತ್ಸಾಹ ನೀಡುತ್ತೀರಿ. ಹಲವು ಮಂದಿ ಪ್ರಮುಖರಿಂದ ಮೆಚ್ಚುಗೆ ಗಳಿಸುತ್ತೀರಿ. ಅವರ ಸ್ನೇಹವನ್ನು ಬಳಸಿಕೊಂಡು ಹಲವಾರು ಕೆಲಸಗಳನ್ನು ಮಾಡಿ ಸಾಧಿಸುತ್ತೀರಿ.

ಕನ್ಯಾಮಣಿಗಳೇ! ತಡೆಯಲಾಗಿರುವ ಮದುವೆ ಕೂಡಿಬರುತ್ತದೆ. ಒಳ್ಳೆಯ ಸ್ನೇಹಿತರ ಪರಿಚಯವಾಗುತ್ತದೆ. ತಂದೆತಾಯಿಯ ಪ್ರೋತ್ಸಾಹ ಹೆಚ್ಚುತ್ತದೆ. ಉನ್ನತ ವಿದ್ಯಾಭ್ಯಾಸದ ಅನುಕೂಲವಿಲ್ಲವೆಂದು ಕೊರಗುತ್ತಿದ್ದೀರಲ್ಲವೇ? ಇನ್ನು ಜಯವಾಗುತ್ತದೆ. ಒಳ್ಳೆಯ ಕೆಲಸಕ್ಕೆ ಸೇರುತ್ತೀರಿ. ಇಷ್ಟು ದಿನಗಳು ಬಾಡಿಗೆ ಮನೆಯ ವಾಸವಾಯ್ತು. ಇನ್ನಾದರೂ ಒಂದು ಸ್ವಂತ ಮನೆಯನ್ನು ಮಾಡಿಕೊಳ್ಳೋಣವೆಂದು ಯೋಚಿಸುತ್ತೀದ್ದೀರಲ್ಲವೇ? ನಿಮ್ಮ ಈ ಯೋಚನೆಗೆ ಪರಿಹಾರವಿದೆ. ತಂದೆ-ತಾಯಿ, ಒಡಹುಟ್ಟಿದವರೊಂದಿಗೆ ಇರುವ ಎಲ್ಲಾ ಮನಸ್ತಾಪಗಳು,ದುರಾಗ್ರಹಗಳು, ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಸ್ನೇಹಿತರು, ಬಂಧುಬಳಗದವರು ಕೆಲವರು ವಿರೋಧಿಗಳಾಗಿದ್ದವರೆಲ್ಲಾ ಸಾಕಷ್ಟು ತೊಂದರೆ ನೀಡಿದರಲ್ಲವೇ? ಅವರೆಲ್ಲರೂ ಇನ್ನು ಮುಂದೆ ಹೊಂದಿಕೊಂಡು ಹೋಗುತ್ತಾರೆ. ದೂರದೇಶ ಪ್ರಯಾಣ ಶುಭಪ್ರದವಾಗುತ್ತದೆ.

ಹೊರವಲಯಗಳಲ್ಲಿ ಪದವಿಗಳು ದೊರೆಯುತ್ತವೆ. ನಿಮಗೆ ಗೌರವ ಕೊಟ್ಟು ಮಾತನಾಡುವವರ ಸಂಖ್ಯೆಯೂ ಅಧಿಕವಾಗುತ್ತದೆ. ಸ್ಪರ್ಧೆಯಲ್ಲಿ ಸುಲಭವಾಗಿ ಗೆಲ್ಲುತ್ತೀರಿ. ನೀವು ಹೇಳಿದ್ದನ್ನು ತಪ್ಪಾಗಿ ಗ್ರಹಿಸಿ ನಿಮ್ಮ ಬಗೆಗೆ ತಪ್ಪು ಅಭಿಪ್ರಾಯ ಪಡೆದವರೆಲ್ಲಾ ಈಗ ಬದಲಾಗುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಸಮಯೋಚಿತ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ.
ಹುಡುಗಾಟದಿಂದ ಕಾಲಕಳೆಯುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ಇನ್ನು ಮುಂದೆ ದೀರ್ಘಕಾಲದ ಕನಸು ನನಸಾಗುತ್ತದೆ. ಮಂದಗತಿ ಬದಲಾಗುತ್ತದೆ. ದುಷ್ಟಜನರ ಸ್ನೇಹದಿಂದ ದೂರವಾಗುತ್ತೀರಿ.

ವ್ಯಾಪಾರದಲ್ಲಿ ಸ್ಪರ್ಧೆಗೆ ತಕ್ಕಂತೆ ಅಂಗಡಿಯನ್ನು ಮೇಲ್ದರ್ಜೆಗೇರಿಸುತ್ತೀರಿ. ಹಳೆಯ ಬಾಕಿಗಳೆಲ್ಲವೂ ಬಹುಬೇಗ ವಸೂಲಾಗುತ್ತದೆ. ಹಣದ ವಹಿವಾಟು ಹೆಚ್ಚಾಗುತ್ತದೆ. ಹೊಸಬಗೆಯ ಒಪ್ಪಂದಗಳು ಹುಡುಕಿಕೊಂಡು ಬರುತ್ತವೆ. ಅನುಭವಿಗಳಿಗೆ ಒಳ್ಳೆಯ ಕೆಲಸಗಳು ದೊರೆಯುತ್ತದೆ. ಸಹವ್ಯಾಪಾರಸ್ಥರೊಂದಿಗೆ ಇದುವರೆಗಿದ್ದ ಎಲ್ಲಾ ಮನಸ್ಥಾಪಗಳೂ ದೂರವಾಗುತ್ತವೆ. ಸರಕಾರದೊಂದಿಗೆ ಯಾವುದೇ ಬಗೆಯ ಇಕ್ಕಟ್ಚು ಇರುವುದಿಲ್ಲ. ಕಂಪ್ಯೂಟರ್,ಸೆಲ್‌ಫೋನ್ ಮುಂತಾದವುಗಳು ಮುಖಾಂತರ ಲಾಭ ಹೆಚ್ಚಾಗುತ್ತದೆ. ಆಮದು,ರಫ್ತುಗಳಿಂದಲೂ ಲಾಭವು ಹೆಚ್ಚುತ್ತದೆ.

ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಮನಸ್ತಾಪ ಪರಿಹಾರವಾಗುತ್ತದೆ. ಸಹೋದ್ಯೋಗಿಗಳೊಂದಿಗಿದ್ದ ಮನಸ್ತಾಪವೆಲ್ಲವೂ ದೂರವಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಹುದಿನಗಳಿಂದಲೂ ನಿರೀಕ್ಷಿಸುತ್ತಿದ್ದ ಅಧಿಕಾರದಲ್ಲಿ ಶ್ರೇಣಿ, ಸಂಬಳದಲ್ಲಿ ಉನ್ನತಿ ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ತಾನಾಗಿ ಬರುತ್ತವೆ. ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಹೊಸಬಗೆಯ ರಿಯಾಯ್ತಿಗಳು ದೊರೆಯುತ್ತವೆ.ವಿದೇಶದ ಪ್ರಸಿದ್ದ ಉದ್ದಿಮೆಗಳಲ್ಲಿ ಕೆಲಸ ಮಾಡುವ ಯೋಗವೂ ಇರುತ್ತದೆ.

ಕಲಾವಿದರೇ ನಿಮ್ಮ ಕಲ್ಪನೆಗಳು ಅಭಿವೃದ್ದಿಯಾಗುತ್ತವೆ. ಸಣ್ಣಪುಟ್ಟ ತೊಂದರೆಗಳು ದೂರವಾಗಿ ಮೆಚ್ಚುಗೆ ಮತ್ತು ಹಣ ಲಭಿಸುತ್ತದೆ. ಈ ಗುರುವಿನ ಸ್ಥಾನಪಲ್ಲಟ ಧನ, ಪದವಿ, ಕೀರ್ತಿ ಮುಂತಾದವುಗಳೊಂದಿಗೆ ಸಾಧನೆಗಳ ಆಗರವಾಗುತ್ತದೆ.

ಇಳಯರಾಜ|
ಪರಿಹಾರ: ತಿರುಜ್ಞಾನ ಸಂಬಂಧರಿಂದ ಕೇವಾರದಲ್ಲಿ ಹೊಗಳಲ್ಪಟ್ಟ ಸ್ಥಳ- ಚೆನ್ನೈ ಬಳಿಯು ತಿರುವಲಿತಾಯ್(ಪಾಡಿ). ಇಲ್ಲಿ ಪ್ರತಿಷ್ಠಾಪಿಸಲಾದ ಗುರುಭಗವಾನರನ್ನು ಪುನರ್ವಸು, ವಿಶಾಖ.ಪೂರ್ವಾಷಾಢ ನಕ್ಷತ್ರದ ದಿನಗಳಲ್ಲಿ ಆರಾಧನೆ ಮಾಡಿ. ಅನಾಥಾಲಯಗಳಲ್ಲಿರುವ ಮಕ್ಕಳಿಗೆ ಯಾವುದಾದರೂ ಒಂದು ಬಗೆಯಲ್ಲಿ ಸಹಾಯ ಮಾಡಿ. ಜಯಶಾಲಿಗಳಾಗುತ್ತೀರಿ.


ಇದರಲ್ಲಿ ಇನ್ನಷ್ಟು ಓದಿ :