Widgets Magazine

ಗುರು ಸ್ಥಾನಪಲ್ಲಟ: ವೃಶ್ಚಿಕ ರಾಶಿ ಫಲಾಫಲಗಳು

WD
ಮಂತ್ರಿಯಾಗಿದ್ದರೂ,ಮಗನಾಗಿದ್ದರೂ ಮನಃಸಾಕ್ಷಿಗೆ ವಿರುದ್ಧವಾಗಿ ನೀವು ಎಂದೂ ನಡೆದುಕೊಂಡವರಲ್ಲ. ಮರ್ಯಾದೆ ಕೊಡದವರ ಮನೆ ಬಾಗಿಲಿಗೆ ಹೆಜ್ಜೆ ಇಡದವರು ನೀವು.ಕಳ್ಳತನದಲ್ಲಿ ಸಂಪಾದನೆ ಮಾಡಲು ಎಂದೂ ಇಷ್ಟಪಡದವರು ನೀವು. ರಬ್ಬರ್ ಮರಗಳಿಗೆ ಗಾಯಗಳು ಹೊಸದಲ್ಲ ಎಂದು ತಿಳಿದು ಜೀವನದಲ್ಲಿ ಎಷ್ಟೇ ತೊಂದರೆಗಳು ಬಂದರೂ ಎಲ್ಲವನ್ನೂ ಸಹಿಸಿಕೊಂಡು ಜೀವನ ಮಾಡುತ್ತೀದ್ದೀರಿ.

ಇದುವರೆಗೆ ನಿಮ್ಮ ರಾಶಿಯಲ್ಲಿ ಕುಳಿತುಕೊಂಡು ನಿಮ್ಮನ್ನು ಹುಚ್ಚನಂತೆ,ದೆವ್ವದಂತೆ ಆಟವಾಡಿಸಿ ನಿಮಗೆ ವಿರಕ್ತಿಯುಂಟುಮಾಡಿದ್ದ ಗುರು ಭಗವಾನ್ ಈಗ ನಿಮ್ಮ ರಾಶಿಯನ್ನು ಬಿಟ್ಟು ಹೋಗುತ್ತಾನೆ.

ಯಾವ ಕೆಲಸ ಕೈಗೊಂಡರೂ ಅರ್ಧಮರ್ಧಕ್ಕೆ ನಿಂತು ಹೋಗುತ್ತಿತ್ತು.ಎಷ್ಟೇ ಬುದ್ದಿವಂತರಾಗಿದ್ದರೂ ಸಣ್ಣಸಮಸ್ಯೆಗಳು ಅಗಾಧವಾಗಿ ನಿಮಗೆ ಕಂಡುಬರುತ್ತಿತ್ತು. ಇನ್ನುಮುಂದೆ ಇಂತಹ ಸ್ಥಿತಿ ಇರುವುದಿಲ್ಲ. ಸಾಧ್ಯವಿಲ್ಲವೆಂದು ಕೈಬಿಟ್ಟ ಕೆಲಸಕಾರ್ಯಗಳೆಲ್ಲವೂ ಇನ್ನುಮುಂದೆ ಸುಗಮವಾಗಿ ಪೂರೈಸುತ್ತವೆ. ಗಂಡಹೆಂಡಿರ ಮಧ್ಯೆ ಸಣ್ಣಪುಟ್ಟ ವಿಷಯಗಳಿಗೂ ಅನಗತ್ಯ ಜಗಳ ಬರುತ್ತಿತ್ತು. ಅನಗತ್ಯ ಸಂದೇಹಗಳು ತಲೆದೋರಿದವು. ಇನ್ನು ಅವೆಲ್ಲವೂ ಬದಲಾಗಿ ದಂಪತಿಗಳಲ್ಲಿ ಅನ್ಯೋನ್ಯತೆಯುಂಟಾಗುತ್ತದೆ.

ಹಳೆಯ ಸಾಲಗಳನ್ನು ತೀರಿಸಲು ಹೊಸಬಗೆಯ ಮಾರ್ಗವುಂಟಾಗುತ್ತದೆ.ಎಲ್ಲರಿಗೂ ಕಣ್ಣುಮುಚ್ಚಿ ಸಾಕ್ಷಿ ಹಾಕಿದಿರಿ.ಅವರಿಂದ ತೊಂದರೆಯಾಯಿತು. ಸಹಾಯ ಮಾಡಲು ಹೋಗಿ ನೀವೇ ತೊಂದರೆಗೊಳಗಾದಿರಿ.ಅವೆಲ್ಲವೂ ಇನ್ನು ಮುಂದೆ ಪರಿಹಾರವಾಗುತ್ತದೆ.

ಮಕ್ಕಳಿಲ್ಲವೆಂದು ಕೊರಗುತ್ತಿದ್ದ ದಂಪತಿಗಳಿಗೆ ಸಂತಾನ ಭಾಗ್ಯವುಂಟಾಗುತ್ತದೆ.ನಿಮ್ಮ ಮಗನು ಕೆಟ್ಟ ಸಹವಾಸಗಳನ್ನು ಬಿಟ್ಟುಬಿಡುತ್ತಾನೆ.ಮಗಳಿಗೆ ಒಳ್ಳೆಯ ವರನ ನಿಶ್ಚಯವಾಗುತ್ತದೆ.ಭೂಮಿಪೂಜೆ ನಡೆದು ಅರ್ಧದಲ್ಲಿಯೇ ನಿಲ್ಲಿಸಿದ್ದ ಕಟ್ಟಡ ನಿರ್ಮಾಣ ಸುಗಮವಾಗಿ ಇನ್ನು ಮುಂದೆ ಪೂರ್ಣವಾಗುತ್ತದೆ.ಊರ ಹೊರಗಿನ ಜಮೀನನ್ನು ಮಾರಿ ಮುಖ್ಯ ರಸ್ತೆಯಲ್ಲಿ ಸ್ವತ್ತನ್ನು ಖರೀದಿಸುತ್ತೀರಿ.

ಹೊರಗಿನ ಸಂಪರ್ಕ ಅಧಿಕವಾಗುತ್ತದೆ. ಪ್ರಭಾವಶಾಲಿಗಳು ಶುಭಕಾರ್ಯದಲ್ಲಿ ಪಾಲ್ಗೊಳ್ಳುವ ಮಟ್ಟಿಗೆ ಗೌರವ ಸಂಪಾದನೆಯಿದೆ.ದೊಡ್ಡ ಹುದ್ದೆಗಳಿಗೆ ನಿಮ್ಮ ಹೆಸರನ್ನು ಸೂಚಿಸುವಂತಾಗುತ್ತದೆ. ಕನ್ಯಾಮಣಿಗಳಿಗೆ ಪ್ರೇಮಪ್ರಕರಣ ಸುಗಮವಾಗುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಇರುವ ವಿಘ್ನ ನಿವಾರಣೆಯಾಗುತ್ತದೆ. ತಂದೆ-ತಾಯಿಗೆ ಹೊರೆಯಿಲ್ಲದ ಸ್ವತಂತ್ರವಾಗಿ ಸಂಪಾದನೆ ಮಾಡಲು ಮಾರ್ಗವುಂಟಾಗುತ್ತದೆ.

ದೇಹಾರೋಗ್ಯ ಸುಧಾರಿಸುತ್ತದೆ.ಹಾಳಾಗಿದ್ದ ಸ್ವಂತ ಊರಿನ ದೇವಾಲಯವನ್ನು ಪುನರ್ ನಿರ್ಮಾಣ ಮಾಡುತ್ತೀರಿ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಮರೆವು,ಮಂದಗತಿ ಇನ್ನುಮುಂದೆ ಇರುವುದಿಲ್ಲ. ಗಮನವಿಟ್ಟು ಅಧ್ಯಯನ ನಡೆಸಿ ಒಳ್ಳೆಯ ಅಂಕಗಳನ್ನು ಪಡೆಯುತ್ತಾರೆ.ಇಷ್ಟಪಟ್ಟ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುತ್ತಾರೆ.

ವ್ಯಾಪಾರದಲ್ಲಿ ಸದಾ ನಷ್ಟವನ್ನೇ ಕಾಣುತ್ತಿದ್ದ ನಿಮಗೆ ಇನ್ನುಮುಂದೆ ಯಾವಾಗಲೂ ಲಾಭವಿದೆ. ಕೆಲಸಗಳನ್ನು ಸುಧಾರಿಸುವುದೇ ಕಷ್ಟವಾಗಿತ್ತು.ಆಗಾಗ್ಗೆ ರಜೆ ಹಾಕಿ ಹೊರಟು ಹೋಗುತ್ತಿದ್ದು ಕೆಲಸಕ್ಕೆ ಅಡ್ಡಿಯಾಗುತ್ತಿತ್ತು.ಕೆಲಸಗಾರರನ್ನು ಬದಲಾಯಿಸುತ್ತೀರಿ.ಕೆಲಸ ಸುಗಮವಾಗುತ್ತದೆ. ಪಾಲುದಾರೊಂದಿಗೆ ಇನ್ನು ಮುಂದೆ ಜಗಳವಿರುವುದಿಲ್ಲ. ನಿಮ್ಮಿಂದ ಬೇರೆಯಾಗಿದ್ದ ಕೆಲವು ಪಾಲುದಾರರು ಮತ್ತೆ ಬಂದು ಸೇರುತ್ತಾರೆ. ಬಾಡಿಗೆ ಅಂಗಡಿಯನ್ನು ಬದಲಾಯಿಸಿ ಸ್ವಂತ ಅಂಗಡಿಗೆ ಹೋಗುತ್ತೀರಿ. ಹೊಸ ಏಜನ್ಸಿಗಳು ದೊರೆಯುತ್ತವೆ.ಮೂಲೆಗೆ ಬಿದ್ದಿದ್ದ ಸರಕು ಮಾರಾಟವಾಗುತ್ತದೆ. ಹಳೆಯ ಬಾಕಿಗಳೆಲ್ಲವೂ ವಸೂಲಾಗುತ್ತವೆ. ಆಹಾರ ಪದಾರ್ಥಗಳು,ಕಂಪ್ಯೂಟರ್,ಎಲೆಕ್ಟ್ರಾನಿಕ್ಸ್,ಮೂಲಿಕೆ ಮುಂತಾದ ವಸ್ತುಗಳ ಮಾರಾಟದಿಂದ ಅಧಿಕ ಲಾಭವಿದೆ.ಸ್ಪರ್ಧೆ ಕಡಿಮೆಯಾಗುತ್ತದೆ. ಹೊಸ ಒಪ್ಪಂದಗಳು ನಡೆಯುತ್ತವೆ.

ಉದ್ಯೋಗದಲ್ಲಿ ಎಷ್ಟೇ ಕಷ್ಟಪಟ್ಟರೂ ಒಳ್ಳೆಯ ಹೆಸರು ಬರಲಿಲ್ಲ. ಇನ್ನುಮುಂದೆ ನಿಮ್ಮ ಸಾಮರ್ಥ್ಯವನ್ನು ತಿಳಿದು ಉನ್ನತ ಹುದ್ದೆಗಳನ್ನು ನಿಮಗೆ ನೀಡುತ್ತಾರೆ.ವಿದೇಶಿ ವ್ಯಾಪಾರದ ಸಂಸ್ಥೆಗಳಿಗೆ ಒಳ್ಳೆಯ ಸಂಪರ್ಕವುಂಟಾಗುತ್ತದೆ. ಸರಕಾರದಿಂದ ಗೌರವ ಪಡೆಯುತ್ತೀರಿ. ತಪ್ಪಿಹೋದ ಅವಕಾಶಗಳು ಮರಳಿ ಬರುತ್ತವೆ.

ಈ ಗುರುಪಲ್ಲಟವು ನಿಮಗೆ ವಿಶ್ವರೂಪ ಹೊಂದಲು ಅನುಕೂಲವುಂಟುಮಾಡುತ್ತದೆ. ಅಧಿಕ ಧನಲಾಭ ಮತ್ತು ಮುನ್ನಡೆ ಸಾಧಿಸುವಂತಾಗುತ್ತದೆ.

ಇಳಯರಾಜ|
ಪರಿಹಾರ: ಪಳನಿಮಲೈ ಅರುಳ್‌ಮಿಗು ದಂಡಾಯುಧಪಾಣಿ ಸ್ವಾಮಿಯನ್ನು ಸೇವಿಸಿ.ಉತ್ತರಾ ನಕ್ಷತ್ರದ ದಿನದಂದು ಆರಾಧನೆ ಮಾಡಿ. ಸಾಧ್ಯವಾದರೆ ಪಾದಯಾತ್ರೆ ಮಾಡಿ. ಮನೋವಿಕಲರಿಗೆ ಸಹಾಯ ಮಾಡಿ.ಶುಭವಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :