Widgets Magazine

ಗುರು ಸ್ಧಾನಪಲ್ಲಟ: ಕಟಕ ರಾಶಿ ಫಲಾಫಲ

WD
ಕೊಳ್ಳು-ಕೊಡುಗೆ ವ್ಯವಹಾರದಲ್ಲಿ ನಿಸ್ಸೀಮರಾದ ನೀವು ಒಳ್ಳೆಯ ಸಮರ್ಥ ನಾಯಕರು. ಸುತ್ತಲಿನ ವ್ಯವಹಾರವನ್ನು,ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದು ಸಮಯೋಚಿತ ಬುದ್ಧಿವಂತಿಕೆಯೊಂದಿಗೆ ಜೀವನದ ಚದುರಂಗದಲ್ಲಿ ಚಾತುರ್ಯದಿಂದ ಕಾಯಿಗಳನ್ನು ಜರುಗಿಸುವುದು ನಿಮ್ಮ ರಾಜತಂತ್ರ. ದ್ರವ ಆಹಾರವನ್ನು ಇಷ್ಟಪಟ್ಟು ಸೇವಿಸುವ ನೀವು ಕಲೆಯಲ್ಲಿ ವಿಶೇಷ ಅಕ್ಕರೆಯನ್ನು ಪಡೆದಿರುತ್ತೀರಿ.

ಗುರುಭಗವಾನ್ ನಿಮ್ಮ ರಾಶಿಗೆ ಭಾಗ್ಯಾಧಿಪತಿಯೂ ಆಗಿರುವುದರಿಂದ ದುಷ್ಫಲಗಳು ತಾನಾಗಿಯೇ ಕಡಿಮೆಯಾಗುತ್ತದೆ. ಉನ್ನತ ವಿದ್ಯಾಭ್ಯಾಸ ಭವಿಷ್ಯ ಜೀವನಕ್ಕಾಗಿ ಹೆಚ್ಚು ದುಡಿಯಬೇಕಾಗುತ್ತದೆ. ಗುರುಭಗವಾನ್ ಧನಸ್ಧಾನದಲ್ಲಿರುವುದರಿಂದ ಅಗತ್ಯವಿರುವ ಜಾಗದಲ್ಲಿ ಹಣವೂ,ತಕ್ಕಸಮಯದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಸಹಾಯವೂ ದೊರೆಯುತ್ತದೆ.ದಿಢೀರನೆ ಪ್ರಯಾಣ ಮಾಡಬೇಕಾಗುತ್ತದೆ.ಹೊಸಮನೆಯನ್ನು ಖರೀದಿ ಮಾಡುತ್ತೀರಿ.ಬ್ಯಾಂಕಿನಿಂದ ನಿರೀಕ್ಷಿಸಿದಂತೆ ಸಾಲವೂ ದೊರೆಯುತ್ತದೆ. ಮುಖ್ಯವಾದ ತೀರ್ಮಾನಗಳನ್ನು ಧೈರ್ಯದಿಂದ ಕೈಗೊಳ್ಳುತ್ತೀರಿ.ಕನ್ಯಾಮಣಿಗಳು ಅಲಕ್ಷ್ಯದಿಂದ ನಡೆಯುವುದನ್ನು ತಡೆಯಬೇಕು.ಮುಖ್ಯ ವಿಷಯಗಳಲ್ಲಿ ಬೇರೆಯವರನ್ನು ನಂಬಿ ತೀರ್ಮಾನಿಸಬೇಡಿ. ತಂದೆ-ತಾಯಿಯ ಸಲಹೆ ಪಡೆಯುವುದು ಹಿತಕರ. ಉದ್ಯೋಗ ದೊರೆಯುತ್ತದೆ. ಉದರಭಾದೆ ಬರುತ್ತದೆ,ವಾಸಿಯಾಗುತ್ತದೆ. ಸರಕಾರದ ವಿಷಯದಲ್ಲಿ ಜಾಗುರಾಕತೆಯಿಂದ ಇರಬೇಕು.ಕೋರ್ಟುಕಛೇರಿ ವ್ಯವಹಾರದಲ್ಲಿ ನಿರ್ಲಕ್ಷ್ಯವಿರಬಾರದು.

ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗುತ್ತದೆ.ದೇವಾಲಯಗಳಲ್ಲಿ ಉತ್ಸವಾದಿಗಳನ್ನು ಮುಂದೆ ನಿಂತು ನಡೆಸುತ್ತೀರಿ.ಕೆಲವು ಪದವಿಗಳು ತಾನಾಗಿ ನಿಮ್ಮಲ್ಲಿಗೆ ಬರುತ್ತವೆ. ಆಂತರಿಕ ವಿಷಯಗಳನ್ನು ಹೊರಗೆ ಮಾತನಾಡಬೇಡಿ.ಹಳೆಯ ಸ್ನೇಹಿತರನ್ನು ಸ್ವಲ್ಪ ಹಿಡಿತದಲ್ಲಿರಿಸಿಕೊಳ್ಳಿ.ತಾವಾಗಿ ಹುಡುಕುತ್ತಾ ಬರುತ್ತಾರೆ.ನಿಮ್ಮ ಅಭಿವೃದ್ದಿಯನ್ನು ಕಂಡು ಬಂಧುವರ್ಗದವರು ಆಶ್ಚರ್ಯ ಪಡುತ್ತಾರೆ.ಸಹೋದರಿ ಸಹಾಯ ಮಾಡುತ್ತಾಳೆ.ಸಹೋದರರೊಂದಿಗೆ ಸ್ವಲ್ಪ ಅಸಮಾಧಾನವುಂಟಾಗುತ್ತದೆ.

ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉತ್ತರಗಳನ್ನು ಬರೆದು ನೋಡಿ ಓದುವುದು ಶ್ರೇಯಸ್ಕರ.ಮರೆವು ಮಂದಗತಿಯಲ್ಲಿ ಬಂದು ಹೋಗುತ್ತದೆ.ತಪ್ಪುಹುಡುಕಿ ತಿದ್ದುವ ಅಧ್ಯಾಪಕರೊಂದಿಗೆ ಕೋಪ ಬೇಡ. ಕೆಟ್ಟ ಸ್ನೇಹಿತರನ್ನು ದೂರವಿಡಿ.

ವ್ಯಾಪಾರದಲ್ಲಿ ಅಕ್ಕರೆಯುಂಟಾಗುತ್ತದೆ.ಹಳೆಯ ಬಾಕಿಯನ್ನು ವಸೂಲು ಮಾಡುತ್ತೀರಿ.ಮುಖ್ಯವಾದ,ದೊಡ್ಡ ಆರ್ಡರುಗಳನ್ನು ಪಡೆಯುತ್ತೀರಿ.ಕಂಟ್ರಾಕ್ಟ್ ಉದ್ದಿಮೆಯಲ್ಲಿ ತೊಡಗಿರುವವರಿಗೆ ತಪ್ಪಿಹೋದ ಒಪ್ಪಂದಗಳು ಮರಳಿ ಬರುತ್ತವೆ.ರಿಯಲ್ ಎಸ್ಟೇಟ್ ಲಾಭದಾಯಕ.ಕೆಲಸದಾಳುಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಾರೆ.ಪಾಲುದಾರರು ನಿಮಗೆ ಮೋಸ ಮಾಡುವ ಸಾಧ್ಯತೆಯುಂಟು.ಆದ್ದರಿಂದ ದಸ್ತಾವೇಜುಗಳಲ್ಲಿ ಸಹಿ ಮಾಡುವ ಮುಂಚೆ ವಕೀಲರನ್ನು ಸಮಾಲೋಚನೆ ಮಾಡಿ.

ಉದ್ಯೋಗದಲ್ಲಿ ಮರೆಯಲ್ಲಿ ವಿರೋಧವ್ಯಕ್ತವಾಗುತ್ತದೆ. ಅಧಿಕಾರಿಗಳ ಬಗೆಗೆ ರಹಸ್ಯವನ್ನು ಹೊರಗಡೆ ಚರ್ಚೆ ಮಾಡಬೇಡಿ.ಸಹೋದ್ಯೋಗಿಗಳ ಮೆಚ್ಚುಗೆ ಗಳಿಸುತ್ತೀರಿ.ಕೆಲಸದ ಹೊರೆಹೆಚ್ಚಾಗುತ್ತದೆ.ಹೊಸಬಗೆಯ ಅವಕಾಶಗಳಿವೆ.ಯೋಚಿಸಿ ಮುನ್ನುಗ್ಗಬೇಕು.ಹೊರದೇಶದಿಂದ ಸಂಸ್ಧೆಗಳ ಮೂಲಕ ಸಹಾಯ ಪಡೆಯುತ್ತೀರಿ.ಉನ್ನತ ಅಧಿಕಾರಿಗಳೊಂದಿಗೆ ಕೆಲಸದಲ್ಲಿ ವಿವಾದಗಳುಂಟಾಗಬಹುದು.

ಕಲಾವಿದರಿಗೆ ಸಣ್ಣಪುಟ್ಟ ತೊಂದರೆಗಳು ಬರುತ್ತವೆ.ಎಚ್ಚರಿಕೆಯಿಂದರಬೇಕು.ಹೊಸದಾಗಿ ಅವಕಾಶಗಳು ದೊರೆಯುತ್ತವೆ.ಈ ಗುರು ಸ್ಧಾನಪಲ್ಲಟ ಹೊಸ ಅನುಭವಗಳನ್ನು ಅಲೆದಾಟದೊಂದಿಗೆ ಆದಾಯವನ್ನೂ ತಂದುಕೊಡುತ್ತದೆ.

ಇಳಯರಾಜ|
ಪರಿಹಾರ: ಮಹಾಬಲಿಪುರದ ಬಳಿಯಿರುವ ತಿರುಪ್ಪೊರೂರಿಗೆ ಹೋಗಿ ಶ್ರೀ ಮುರುಗಪೆರುಮಾಳ್ ಶ್ರೀಮದ್ ಚಿದಂಬರ ಸ್ವಾಮಿಗಳನ್ನು,ಅವರಿಂದ ಸ್ಧಾಪಿಸಲಾದ ಚಕ್ರಗಳನ್ನು ಷಷ್ಠಿ ತಿಥಿ ದಿನಗಳಲ್ಲಿ ಪೂಜಿಸಿ. ಅರಿಶಿನಬಟ್ಟೆಗಳನ್ನು ದಾನವಾಗಿ ಕೊಡಿ.ಗೆಲುವು ನಿಮಗೆ ಲಭಿಸುತ್ತದೆ.


ಇದರಲ್ಲಿ ಇನ್ನಷ್ಟು ಓದಿ :