Widgets Magazine

ಗುರು ಸ್ಧಾನಪಲ್ಲಟ: ಕನ್ಯಾರಾಶಿ ಫಲಾಫಲಗಳು

WD
ಮುಗ್ಧ ನಗೆ,ಕಪಟರಹಿತ ಚುರುಕು ಮಾತು,ವಿರೋಧಿಗಳನ್ನು, ಎದುರಿನಲ್ಲಿರುವವರನ್ನು ಚಿಂತಿಸುವಂತೆ ಮಾಡುವ ಕಾರ್ಯವಿಧಾನವುಳ್ಳವರು ನೀವು. ಹಳತು ಮತ್ತು ಹೊಸತನ್ನು ಸೇರಿಸಿ ನಿಮಗಾಗಿ ಹೊಸಮಾರ್ಗವನ್ನು ಕಂಡುಕೊಳ್ಳುತ್ತೀರಿ. ಕೈ ಚಾಚಿ ಕರೆದು ಅವರ ಹೊರೆಯನ್ನು ಇಳಿಸಿ ಸಂತೋಷವಾಗಿರುತ್ತೀರಿ. ಕಲ್ಪನಾಲೋಕದಲ್ಲಿ ಹಾರುವಂತಹವರು. ಜಾತಿ,ಮತ,ನಾಡುನುಡಿ ಬೇಧವಿಲ್ಲದೇ ಎಲ್ಲರಲ್ಲಿಯೂ ಅನ್ಯೋನ್ಯ ಸಂಪರ್ಕ ಪಡೆದಿರುತ್ತೀರಿ.

ಇದುವರೆಗೆ ನಿಮ್ಮ ರಾಶಿಯಲ್ಲಿ ಮೂರನೇ ಮನೆಯಲ್ಲಿ ಕುಳಿತು ನಿಮ್ಮನ್ನು ಮೂಲೆಗೆ ತಳ್ಳಿದ್ದ ಗುರುಭಗವಾನ್ 16-11-07 ರಿಂದ 30-11-07ರವರೆಗೆ ನಾಲ್ಕನೇ ಮನೆಗೆ ಪ್ರವೇಶಮಾಡಿ ನಿಮಗೆ ಮಾರ್ಗದರ್ಶಕನಾಗುತ್ತಾನೆ. ಬಾಡಿದ ನಿಮ್ಮ ಮುಖ ಇನ್ನು ಮುಂದೆ ಲವಲವಿಕೆಯಿಂದ ಕಂಗೊಳಿಸುತ್ತದೆ.ಕುಟುಂಬದಲ್ಲಿ ನೆಮ್ಮದಿ ಮೂಡುತ್ತದೆ. ಆದರೆ ಸಂಸಾರದಲ್ಲಿ ಆಗಿಂದಾಗ್ಗೆ ಅನಗತ್ಯ ವಿವಾದಗಳು ಕಂಡುಬರುತ್ತವೆ. ಆದಾಯಕ್ಕೆ ತಕ್ಕಂತೆ ಖರ್ಚು ಹೆಚ್ಚಾಗುತ್ತದೆ. ಅತ್ಯಗತ್ಯ ಖರ್ಚುಗಳಿಗೆ ಮಾತ್ರ ಗಮನ ನೀಡಿ.ಮಕ್ಕಳಿಂದ ಒದಗಿದ್ದ ಅನಗತ್ಯ ಅಲೆದಾಟ ಇನ್ನು ಇರುವುದಿಲ್ಲ.ಬಂಧುವರ್ಗದವರಿಗೆ ಎಷ್ಟೇ ಸಹಾಯ ಮಾಡಿದರೂ ಕೃತಜ್ಞತೆಯನ್ನು ತೋರಿಸುವುದಿಲ್ಲ. ಅದನ್ನು ನೀವು ತಲೆಗೆ ಹಚ್ಚಿಕೊಳ್ಳಬಾರದು. ಒಡಹುಟ್ಟಿದವರೊಂದಿಗಿದ್ದ ಮನಸ್ತಾಪ ನೀಗುತ್ತದೆ.ತಾಯಿಯ ಆರೋಗ್ಯ ಕೆಡುತ್ತದೆ. ಮಡದಿಗೆ ಔಷಧಿ ಖರ್ಚು ಇರುತ್ತದೆ. ತಂದೆ-ತಾಯಿ ಕೆಲವು ಸಂದರ್ಭಗಳಲ್ಲಿ ಆವೇಶದಿಂದ ಮಾತಿನಾಡಿದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ.

ಹೊರಗಿನ ಸಂಪರ್ಕ ಹೆಚ್ಚುತ್ತದೆ. ವಿಐಪಿಗಳ ಸಹಾಯವಿದೆ.ಕನ್ಯಾಮಣಿಗಳು ಆರೋಗ್ಯದತ್ತ ಗಮನ ಕೊಡುವುದು ಶ್ರೇಯಸ್ಕರ. ಕಣ್ಣು ಬೇನೆಯುಂಟಾಗುತ್ತದೆ.ನಂತರ ವಾಸಿಯಾಗುತ್ತದೆ. ತಂದೆತಾಯಿಯ ಅನ್ಯೋನ್ಯತೆ ಇರುತ್ತದೆ. ಪ್ರೇಮಪ್ರಕರಣ ಬಲಾಬಲದಲ್ಲಿ ಮುಗಿಯುತ್ತದೆ. ಮನಸ್ಸು ಅತ್ತಿತ್ತ ಹೊರಳಿಸದೆ ಉನ್ನತ ಕಲಿಕೆಯಲ್ಲಿ ಗಮನವಿರಲಿ.ಕುಲದೈವ ದೇವಾಲಯಕ್ಕೆ ಸಂದರ್ಶನ ನೀಡಿ. ಪ್ರಾರ್ಥನೆಯನ್ನು ಮುಂದೆ ಹಾಕದೇ ಆಗಿಂದಾಗ್ಗೆ ಜರುಗಿಸಲು ಯತ್ನಿಸಿ.ಯಾರಿಗೂ ಸಾಕ್ಷಿ, ಜಾಮೀನು ಬೇಡ. ರಾಜಕೀಯ ವ್ಯಕ್ತಿಗಳ ಬಗ್ಗೆ ಏನೂ ಬಹಿರಂಗವಾಗಿ ಮಾತನಾಡಬೇಡಿ. ಸಮಯ ದೊರೆತಾಗ ಧ್ಯಾನ,ಯೋಗಾಸನ ಮಾಡಿ.

ವಾಹನದಲ್ಲಿ ಓಡಾಡುವಾಗ ಗಮನವಿರಲಿ. ಚಿಕ್ಕಪುಟ್ಟ ಅಪಘಾತ ಸಂಭವವುಂಟು. ದೊಡ್ಡ ಜವಾಬ್ದಾರಿ ಕೆಲಸಗಳು ಹುಡುಕಿಕೊಂಡು ಬರುತ್ತವೆ.ವಿದೇಶ ಪ್ರಯಾಣವೂ ಇರುತ್ತದೆ. ಸರಕಾರಿ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವೇರ್ಪಡುತ್ತದೆ. ಕೋರ್ಟು,ಕಛೇರಿ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪ್ರಾತಃಕಾಲದಲ್ಲಿ ಎದ್ದು ಓಡುವ ಅಭ್ಯಾಸವನ್ನು ಮಾಡಿದರೆ ಒಳ್ಳೆಯದು.

ಒಳ್ಳೆಯ ಸ್ನೇಹಿತರ ಪರಿಚಯವಾಗುತ್ತದೆ. ಆಟವಾಡುವಾಗ ಹೆಚ್ಚು ಗಮನವಿರಲಿ. ಸಣ್ಣಪುಟ್ಟ ಗಾಯಗಳಾಗುತ್ತವೆ. ಉಪಾಧ್ಯಾಯರ ಮೆಚ್ಚುಗೆ ಗಳಿಸುತ್ತೀರಿ. ವ್ಯಾಪಾರದಲ್ಲಿ ಮರೆಯಲ್ಲಿ ಸ್ಪರ್ಧೆ ನಡೆಯುತ್ತದೆ. ಲೇವಾದೇವಿಯಲ್ಲಿ ಜಾಗರೂಕತೆ ಇರಲಿ. ಹೊಸದಾಗಿ ಏನನ್ನೂ ಕೈಗೊಳ್ಳಬೇಡಿ.ಕೆಲಸದಾಳುಗಳ ಬಳಿ ಉದ್ದಿಮೆಯ ರಹಸ್ಯವನ್ನು ಬಯಲು ಮಾಡಬೇಡಿ. ಪಾಲುದಾರರೊಂದಿಗೆ ಆಗಾಗ್ಗೆ ಸಮಸ್ಯೆಗಳು ಉಂಟಾಗುತ್ತದೆ. ಅನುಸರಿಸಿಕೊಂಡು ಹೋಗಿ. ಗಿರಾಕಿಗಳನ್ನು ಆಕರ್ಷಿಸಲು ಹೆಚ್ಚು ರಿಯಾಯ್ತಿಯನ್ನು ಪ್ರಕಟಿಸುತ್ತೀರಿ.ಕಬ್ಬಿಣ,ಮೂಲಿಕೆ,ಆಹಾರ,ರಾಸಾಯನಿಕ ದ್ರವ್ಯಗಳು ಮುಂತಾದವುಗಳಲ್ಲಿ ಹೆಚ್ಚು ಆದಾಯ ಗಳಿಸುತ್ತೀರಿ.

ಉದ್ಯೋಗದಲ್ಲಿ ಕೆಲಸದ ಭಾರ ಹೆಚ್ಚುತ್ತದೆ. ಮೇಲಧಿಕಾರಿಗಳ ಬಗ್ಗೆ ದೂರುವುದನ್ನು ಬಿಟ್ಟು ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಚಾಗಿ ಮಾಡಿ.ಹಳೆಯ ಸಂಬಳದ ಬಾಕಿ ತಲುಪುತ್ತದೆ.ವಿದೇಶಿ ಸಂಸ್ಥೆಗಳಿಂದ ಹೊಸ ಕೆಲಸಗಳು ದೊರೆಯುತ್ತವೆ.ಸಹೋದ್ಯೋಗಿಗಳ ವೈಯಕ್ತಿಕ ವಿಷಯಗಳಲ್ಲಿ ತಲೆಹಾಕಬೇಡಿ. ಕಲಾವಿದರು ಉತ್ಸಾಹದಿಂದ ಕಂಡು ಬರುತ್ತಾರೆ. ತಪ್ಪಿಹೋದ ಅವಕಾಶಗಳು ಮರಳಿ ಬರುತ್ತವೆ. ಸಣ್ಣಪುಟ್ಚ ತೊಂದರೆಗಳಿಂದ ಪಾರಾಗುತ್ತೀರಿ. ಈ ಗುರುವಿನ ಸ್ಥಾನಪಲ್ಲಟ ಆತ್ಮ ಸ್ಥೈರ್ಯವನ್ನು ಕೊಟ್ಟು ಗೆಲುವುಂಟುಮಾಡುತ್ತದೆ.

ಇಳಯರಾಜ|
ಪರಿಹಾರ: ದಕ್ಷಿಣ ಆರ್ಕಾಟ್ ಜಿಲ್ಲೆ ವಡಲೂರಿನಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ವಳ್ಳಲಾರ್ ರಾಮಲಿಂಗಸ್ವಾಮಿ ಅಡಿಗಳನ್ನು ಪುಷ್ಯ ನಕ್ಷತ್ರದ ದಿನದಂದು ಆರಾಧನೆ ಮಾಡಿ. ಅನ್ನದಾನ ಮಾಡಿ. ನೆಮ್ಮದಿ ದೊರೆಯುತ್ತದೆ.


ಇದರಲ್ಲಿ ಇನ್ನಷ್ಟು ಓದಿ :