Widgets Magazine

ಗುರು ಸ್ಧಾನಪಲ್ಲಟ: ಮಿಥುನ ರಾಶಿ ಫಲಾಫಲ

WD
ಹಣವಂತ,ವಿದ್ಯಾವಂತ,ಕೆಲಸಗಾರ ಎಂಬ ಬೇಧಭಾವನೆ ತೋರಿಸದೇ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನೀವು ಉತ್ತಮ ಹಿತೈಶಿಗಳು.ಮಾನವೀಯತೆಯಲ್ಲಿ ಅಚಲ ನಂಬಿಕೆಯುಳ್ಳ ನೀವು ಮನಃಸಾಕ್ಷಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತೀರಿ. ಸುಖದುಃಖಗಳನ್ನು ಸಮಾನವಾಗಿ ಕಾಣುವ ನೀವು ಉತ್ತಮ ಬಗೆಯ ಮಾನವ ಗುಣ ಸಂಪನ್ನರು. ಸ್ವಾದಿಷ್ಟ ಆಹಾರವನ್ನು ಬಯಸಿ ಸೇವಿಸುವ ನೀವು ಹಂಚಿಕೊಂಡು ಉಂಡು ಜೀವನ ನಡೆಸುವರು.

ಇದುವರೆಗೆ ನಿಮ್ಮ ರಾಶಿಯಲ್ಲಿ ಆರನೇ ಸ್ಧಾನದಲ್ಲಿದ್ದು ಅಲೆಯೆಬ್ಬಿಸಿದ ಗುರುಭಗವಾನ್ ಸಮಸಪ್ತ ರಾಶಿಯಾದ ಏಳನೆಯ ರಾಶಿಗೆ ಈಗ ಹೆಜ್ಜೆ ಇಡುತ್ತಾನೆ. ಸಹಾಯಮಾಡಲು ಹೋಗಿ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿರಲ್ಲವೆ? ಸದಾ ಏನೋ ಕಳೆದುಕೊಂಡವರಂತೆ ಕಳವಳದ ಮುಖವನ್ನು ತೋರಿಸುತ್ತಿದ್ದೀರಲ್ಲವೇ? ಅಲ್ಲಿ ಇಲ್ಲಿ ಸಾಲಪಡೆದು ಹಿಂತಿರುಗಿಸಲಾರದೇ ತೊಂದರೆ ಅನುಭವಿಸುತ್ತಿದ್ದಿರಲ್ಲವೇ? ಇನ್ನುಮುಂದೆ ಇಂತಹ ಪರಿಸ್ಥಿತಿ ಬದಲಾಗುತ್ತದೆ. ಮತ್ತೆ ಮತ್ತೆ ಕೆಲಸ ಹೆಚ್ಚಾಗಿ ತೊಂದರೆ ಪಡುತ್ತಿದ್ದೀರಲ್ಲವೇ? ಸ್ನೇಹಿತರೊಂದಿಗೆ,ಬಂಧುಗಳೊಂದಿಗೆ ಎಲ್ಲಾ ವಿಷಯಗಳಲ್ಲಿಯೂ ಕೋಪಮಾಡಿಕೊಳ್ಳುತ್ತಿದ್ದಿರಲ್ಲವೇ? ಗುರು ನಿಮ್ಮ ರಾಶಿಗೆ ಕಾವಲಿರುವುದರಿಂದ ನಿಮ್ಮಲ್ಲಿ ಹೆಚ್ಚು ಮನಃಸ್ಧೈರ್ಯವುಂಟಾಗುತ್ತದೆ. ನಿರಂತರವಾದ ಆದಾಯ ಬರುವಂತೆ ಏರ್ಪಾಡು ನಡೆಯುತ್ತದೆ.ಕುಟುಂಬದಲ್ಲಿ ಆಗಾಗ್ಗೆ ಎದ್ದೇಳುತ್ತಿದ್ದ ಬಿರುಗಾಳಿ ನಿಂತು ನೆಮ್ಮದಿಯುಂಟಾಗುತ್ತದೆ. ಗಂಡ-ಹೆಂಡಿರ ಮಧ್ಯೆ ಈಗ ಅನ್ಯೋನ್ಯವುಂಟಾಗುತ್ತದೆ.ಹಳೆಯ ಸಾಲಗಳನ್ನು ತೀರಿಸಲು ಅನಿರೀಕ್ಷಿತವಾಗಿ ಹಣ ಒದಗಿ ಬರುತ್ತದೆ.ಸೊರಗಿ ಹೋಗಿದ್ದ ನೀವು ಇನ್ನು ಮುಂದೆ ಉತ್ಸಾಹಶಾಲಿಗಳಾಗುತ್ತೀರಿ. ಅಡವಿರಿಸಿದ್ದ ಎಲ್ಲಾ ಆಭರಣಗಳನ್ನು ಮತ್ತೆ ಪಡೆಯುತ್ತೀರಿ.

ಮಕ್ಕಳ ಪ್ರತಿಭೆಗಳನ್ನು ಹೊರತರಲು ಹೊಸಬಗೆಯ ಪ್ರಯತ್ನ ಮಾಡುತ್ತೀರಿ.ಸಂತಾನ ಭಾಗ್ಯವುಂಟಾಗುತ್ತದೆ.ನಿಮ್ಮ ಮಗಳಿಗೆ ವಿವಾಹವಾಗುತ್ತದೆ.ಮಗನಿಗೆ ನಿರೀಕ್ಷಿಸಿದಂತೆ ವಿದೇಶದಲ್ಲಿ ಉದ್ಯೋಗ ದೊರೆಯುತ್ತದೆ. ನಿಮಗೆ ವಿರೋಧವಾಗಿದ್ದವರು ನಿಮ್ಮ ಒಳ್ಳೆಯ ಮನಸ್ಸನ್ನು ಅರ್ಥಮಾಡಿಕೊಳ್ಳುತ್ತಾರೆ. ಸ್ನೇಹಿತರು ಹಾಗು ಬಂಧುಗಳ ಸಹಾಯದಿಂದ ಹೊಸ ಒಂದು ಉದ್ಯಮವನ್ನು ಪ್ರಾರಂಭಿಸುತ್ತೀರಿ.

ಕನ್ಯೆಗೆ ತಡೆಹಿಡಿದಿದ್ದ ವಿವಾಹದ ಏರ್ಪಾಡು ಸುಗಮವಾಗಿ ನಡೆಯುತ್ತದೆ. ಹೊಸ ಉದ್ಯೋಗವು ದೊರೆಯುತ್ತದೆ. ಉದರಶೂಲೆ, ಬೆನ್ನುನೋವು ಮುಂತಾದವು ವಾಸಿಯಾಗುತ್ತದೆ.ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.ಸ್ನೇಹಿತರ ಹಾಗು ಬಂಧುಬಳಗದವರ ವಿವಾಹಕ್ಕೆ ಮುಂದೆ ನಿಂತು ಕೆಲಸ ನಿರ್ವಹಿಸುತ್ತೀರಿ. ರಾಜಕೀಯದಲ್ಲಿ ಸಂಪರ್ಕ ಬೆಳೆಯುತ್ತದೆ. ಅವರಿಂದ ಮೆಚ್ಚುಗೆ ಪಡೆಯುತ್ತೀರಿ. ವಿದೇಶ ಪ್ರಯಾಣವಿರುತ್ತದೆ. ಮನಸ್ಸಿಗೆ ಹಿಡಿಯುವಂತಹ ಕೆಲಸಕ್ಕಾಗಿ ಅಲೆದಾಡುತ್ತೀರಿ. ಇನ್ನು ಮುಂದೆ ನಿರೀಕ್ಷೆಯಂತೆ ಒಳ್ಳೆಯ ಉದ್ಯೋಗ ಲಭಿಸುತ್ತದೆ.

ಕೋರ್ಟು ವ್ಯವಹಾರದಲ್ಲಿ ತಲೆದೋರಿದ್ದ ಬಿಕ್ಕಟ್ಟು ನಿವಾರಣೆಯಾಗುತ್ತದೆ.ದೂರದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತೀರಿ.ಕಾವ್ಯ,ಬರಹ,ಸಾಹಿತ್ಯ,ಸಂಗೀತ ಮುಂತಾದವುಗಳಲ್ಲಿ ಆಸಕ್ತಿ ಮೂಡುತ್ತದೆ.ಸಮಾಜಸೇವೆಯಲ್ಲಿ ನಿರತರಾಗುತ್ತೀರಿ. ವಿದ್ಯಾರ್ಥಿಗಳು ತರಗತಿಯಲ್ಲಿ ಹೆಚ್ಚು ಶ್ರದ್ದೆಯಿಂದ ಕಲಿಯುತ್ತಾರೆ. ಉಪಾಧ್ಯಾಯರ ಮೆಚ್ಚುಗೆ ಪಡೆಯುತ್ತೀರಿ.ನೆರೆಹೊರೆಯ ಮನೆಗಳವರಲ್ಲಿ ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತೀರಿ.ಕುಟುಂಬ ವಿಷಯಗಳನ್ನು ರಕ್ಷಿಸಿಕೊಳ್ಳುತ್ತೀರಿ.

ವ್ಯಾಪಾರದಲ್ಲಿ ಏನು ಮಾಡಿದರೂ ನಷ್ಟವುಂಟಾಗುತ್ತದೆಂದು ಕಳವಳ ಪಡುತ್ತಿದ್ದಿರಲ್ಲವೇ? ಇನ್ನು ಮುಂದೆ ನಿಮ್ಮ ಪ್ರತಿಯೊಂದು ತೀರ್ಮಾನವೂ ಸುಗಮವಾಗಿ ನೆರವೇರುತ್ತದೆ. ಹೊಸಬಗೆಯ ಜಾಹಿರಾತು ನೀಡಿ ಸ್ಪರ್ಧೆಯಲ್ಲಿ ಮುಂದೆ ನುಗ್ಗುತ್ತೀರಿ.ಪಾಲುದಾರರಲ್ಲಿ ಪ್ರತಿದಿನ ವಾಗ್ವಾದವಿರುತ್ತಿತ್ತು ಅಲ್ಲವೇ? ಇನ್ನುಮುಂದೆ ಅವರೇ ನಿಮ್ಮನ್ನು ಅನುಸರಿಸಿ ನಡೆಯುತ್ತಾರೆ. ಕೆಲಸದಾಳುಗಳು ನಿಮ್ಮ ಬಗೆಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ.ಕಂಪ್ಯೂಟರ್,ಔಷಧಿ, ಆಹಾರ ಮುಂತಾದ ಪದಾರ್ಥಗಳಿಂದ ಹೆಚ್ಚು ಲಾಭಗಳಿಸುತ್ತೀರಿ.ಸ್ವಂತ ಅಂಗಡಿಯನ್ನು ಸ್ವಂತ ಕಟ್ಟಡದಲ್ಲಿಯೇ ನಡೆಸುತ್ತೀರಿ.ಹೊಸ ಒಪ್ಪಂದಗಳು ವರ್ಧಿಸುತ್ತವೆ.

ಉದ್ಯೋಗ ವೃದ್ಧಿಯಾಗುತ್ತದೆ.ಪದವಿಯಲ್ಲಿ ಮುನ್ನಡೆ.ಸಹ ಉದ್ಯೋಗಿಗಳು ನಿಮ್ಮನ್ನು ಅನುಸರಿಸಿ ನಡೆಯುತ್ತಾರೆ.ಹೊರದೇಶದಲ್ಲಿ ಅವಕಾಶವಿರುತ್ತದೆ.ಕಲಾವಿದರಿಗೆ ನಿರೀಕ್ಷಿಸಿದಂತೆ ಹೊಸ ಉದ್ದಿಮೆಗಳಲ್ಲಿ ಅವಕಾಶ ಸಿಗುತ್ತದೆ.ಬಾಕಿಯಿದ್ದ ಸಂಬಳ ಕೈಸೇರುತ್ತದೆ.

ಇಳಯರಾಜ|
ಪರಿಹಾರ: ಪುದುಚ್ಚೇರಿಯ ಮುತ್ಯಾಲಪೇಟೆ ಸಮೀಪದ ಕರುವಡಿಕುಪ್ಪುಂನಲ್ಲಿರುವ ಸಜೀವ ಸಮಾಧಿ ಹೊಂದಿದ ಶ್ರೀಗುರು ಸಿದ್ದಾನಂದ ಸ್ವಾಮಿಗಳನ್ನು ಆರಾಧಿಸಿ.ಅಲ್ಲಿರುವ ಸುಂದರ ವಿನಾಯಕ ದೇವಾಲಯದ ಶ್ರೀ ಗುರು ದಕ್ಷಿಣಾಮೂರ್ತಿಯನ್ನು ಪೂಜಿಸಿ. ನೆಲಗಡಲೆಯನ್ನು ದಾನಮಾಡಿ.ನೆನೆಸಿದ ಆಶೆ ಈಡೇರುತ್ತದೆ


ಇದರಲ್ಲಿ ಇನ್ನಷ್ಟು ಓದಿ :