Widgets Magazine

ಗುರು ಸ್ಧಾನಪಲ್ಲಟ: ವೃಷಭ ರಾಶಿಗೆ ಫಲಾಫಲ

WD
ಮಳೆ,ಗಾಳಿ, ಬಿಸಿಲೆನ್ನದೆ ಇದು ನನ್ನ ಕರ್ತವ್ಯವೆಂದು ತಿಳಿದು ಸದಾ ಕೆಲಸದಲ್ಲಿ ನಿರತರಾಗಿರುವ ನೀವು ಹಣ ಸಂಪಾದನೆ ಮಾಡಿದ ನಂತರವೂ ನಡೆದುಬಂದ ದಾರಿಯನ್ನು ಮರೆಯುವುದಿಲ್ಲ. ಏಣಿಯಂತೆ ಇರುವ ನೀವು ಉಳಿದವರನ್ನು ಮೇಲೇರಿಸುತ್ತೀರಿ.ಎಂದಿಗೂ ಅಧರ್ಮದತ್ತ ಕಣ್ಣು ಹಾಯಿಸುವುದಿಲ್ಲ.ಹುಳಿಯೊಂದಿಗೆ ಸಿಹಿಯನ್ನು ಮೆಲ್ಲಲು ಇಷ್ಟಪಡುವ ನೀವು ನಿಸರ್ಗ ನೀಡುವ ಆಹಾರದಿಂದ ಪುಷ್ಟಿ ಪಡೆಯುತ್ತೀರಿ.

ನಿಮ್ಮ ರಾಶಿಯ ಏಳನೆಯ ಸ್ಥಾನದಲ್ಲಿ ನಿಲ್ಲುವ ಅಷ್ಟಮಾಧಿಪತಿ ಗುರುಭಗವಾನ್ 16-11-2007 ರಿಂದ 30-11-2007 ರವರೆಗೆ 8ನೇ ಸ್ಥಾನದಲ್ಲಿ ಕುಳಿತು ಅಧಿಕಾರ ನಡೆಸುತ್ತಾನೆ. ಗುರು 8ರಲ್ಲಿ ಮರೆಯಾಗುವುದರಿಂದ ಗಂಡ-ಹೆಂಡಿರ ಮಧ್ಯೆ ಅಹಂ ನಿವಾರಣೆಯಾಗಿ ಮನಬಿಚ್ಚಿ ಮಾತನಾಡುತ್ತಾ ದಾಂಪತ್ಯದಲ್ಲಿ ಸುಖದಿಂದ ಜೀವನ ನಡೆಸುತ್ತಾರೆ.

ನಿಮ್ಮ ರಾಶಿಯ ಅಧಿಪತಿಗೆ ಹಗೆಯಾದ ಗುರು 8ರಲ್ಲಿ ಮರೆಯಾಗಿರುವುದರಿಂದ ಒಳ್ಳೆಯದೇ ನಡೆಯುತ್ತದೆ. ಬರಬೇಕಾಗಿರುವ ಹಣ ಬಂದು ಸೇರುತ್ತದೆ. ಇತರರಿಂದ ಮೋಸಗೊಂಡ ನಿಮ್ಮ ಸ್ಥಿತಿ ಬದಲಾಗುತ್ತದೆ. ಬೆನ್ನಹಿಂದೆ ಇರಿದವರು, ನಿಮ್ಮನ್ನು ಅವಮಾನಪಡಿಸಿದವರು ಮುಂತಾದವರು ನಿಮ್ಮ ದಯಾಶೀಲಗುಣವನ್ನು ಅರ್ಥಮಾಡಿಕೊಳ್ಳುತ್ತಾರೆ. ಮಕ್ಕಳನ್ನು ಅವರ ದಾರಿಗೆ ಬಿಡುವುದೇ ಶ್ರೇಯಸ್ಸು. ಮಗನ ದೆಶೆಯಿಂದ ಅನಗತ್ಯ ವೆಚ್ಚ ಹಾಗು ಅಲೆದಾಟವುಂಟಾಗುತ್ತದೆ. ಮಗಳಿಗೆ ಶುಭಕರವಾಗುತ್ತದೆ. ಮಕ್ಕಳ ಸಹಚರರ ಬಗೆಗೆ ಗಮನ ನೀಡಿ. ಹಣ ಕೊಡುವಾಗ, ತೆಗೆದುಕೊಳ್ಳುವಾಗ ಹೆಚ್ಚು ಗಮನವಿರಲಿ.

ಯಾರಿಗೇ ಆಗಲಿ ಜಾಮೀನು,ಗ್ಯಾರಂಟಿ ಮುಂತಾದುವನ್ನು ನೀಡಬೇಡಿ. ಸ್ವತ್ತು ಖರೀದಿಸುವಾಗ ಸಂಬಂಧಪಟ್ಟ ದಸ್ತಾವೇಜುಗಳನ್ನು ಲಾಯರ್ ಮೂಲಕ ಪರಿಶೀಲಿಸಿ ಮುಂದುವರೆಯಿರಿ.ದೂರ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ.ಕೆಲವೂ ಸಣ್ಣ ಪ್ರಮಾಣದ ಅಪಘಾತಗಳು ನಡೆಯಬಹುದು. ಒಡಹುಟ್ಟಿದವರೊಂದಿಗೆ ಇರುವ ಭಿನ್ನಾಭಿಪ್ರಾಯ ದೂರವಾಗುತ್ತದೆ.

ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಒಳ್ಳೆಯ ತೀರ್ಮಾನವಾಗುತ್ತದೆ.ಸಹೋದರಿಯ ಮನೆಯಲ್ಲಿ ಮದುವೆಗಾಗಿ ಮುನ್ನುಗ್ಗಿ ನಡೆಸುತ್ತೀರಿ. ಕನ್ಯಾಮಣಿಗಳಿಗೆ ಶುಭಕಾಲವೊದಗುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ಗಮನವಿಡಿ. ಕೆಲ ಕೆಟ್ಟವರ ಪರಿಚಯವೂ ಆಗುತ್ತದೆ. ಜಾಗರೂಕತೆಯಿಂದ ಇರಿ. ಮದುವೆಯ ವಿಘ್ನ ನಿವಾರಣೆಯಾಗುತ್ತದೆ. ಸರಕಾರದ ಕೆಲಸ ಬೇಗನೆ ನಡೆಯುತ್ತದೆ. ವರಮಾನ ತೆರಿಗೆ, ಆಸ್ತಿ ತೆರಿಗೆ ಮುಂತಾದವುಗಳನ್ನು ಕಾಲಕ್ಕೆ ಸರಿಯಾಗಿ ಕೊಡಿ. ರಾಜಕೀಯದಲ್ಲಿ ಪ್ರಭಾವವುಂಟಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹಣದ ಸಂಪಾದನೆಯಾಗುತ್ತದೆ. ಹೊರವಲಯಗಳಲ್ಲಿ ಮೆಚ್ಚುಗೆ ಪಡೆಯುತ್ತೀರಿ. ಇತರರನ್ನು ವಿಮರ್ಶೆ ಮಾಡುವುದು ಬೇಡ. ನಿಮ್ಮ ಬಗ್ಗೆ ಅವಹೇಳನ ಮಾಡುವವರನ್ನು ಲೆಕ್ಕಿಸಬೇಡಿ. ಗೌರವ ಪದವಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಹೊಟ್ಟೆನೋವು, ಹೃದಯಶೂಲೆ ಮುಂತಾದವು ನಿವಾರಣೆಯಾಗುತ್ತವೆ. ವಿದ್ಯಾರ್ಥಿಗಳು ದಿನವೂ ಓದುವುದು ಒಳ್ಳೆಯದು. ಕಲಾವಿದರಿಗೆ ಅನೇಕ ನಿರೀಕ್ಷಿತ ಅವಕಾಶಗಳು ದೊರೆಯುತ್ತವೆ.ವೇದಿಕೆಗಳಲ್ಲಿ ಗೌರವವಿದೆ.

ವ್ಯಾಪಾರದಲ್ಲಿ ಹೆಚ್ಚು ಲಾಭ.ಸ್ಪರ್ಧೆಯು ಹೆಚ್ಚುತ್ತದೆ.ಕೆಲಸಗದಾಳುಗಳು ಹೊಂದಿಕೊಂಡು ಕೆಲಸ ನಿರ್ವಹಿಸುತ್ತಾರೆ.ಹೊಸಬರನ್ನು ನೇಮಿಸಿಕೊಳ್ಳುತ್ತೀರಿ.ವ್ಯಾಪಾರದ ವಿಷಯಗಳನ್ನು ಹೊರಗಡೆ ಚರ್ಚಿಸಬೇಡಿ.ಹಳೆಬಾಕಿಗಳು ವಸೂಲಾಗುತ್ತವೆ.ಹೊರನಾಡಿನ ಒಪ್ಪಂದಗಳು ದೊರೆಯುತ್ತವೆ.ಆಹಾರ,ಕಬ್ಬಿಣ ಮುಂತಾದ ವಸ್ತುಗಳಿಂದ ಹೆಚ್ಚಿನ ಲಾಭ. ಏಕಕಾಲದಲ್ಲಿ ಅನೇಕ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ಹಿರಿಯ ಅಧಿಕಾರಿಗಳಿಗೆ ಅಸಮಾಧಾನವಾಗುತ್ತದೆ.ವಿದೇಶಿ ಸಂಸ್ಥೆಗಳಲ್ಲಿ ಹೆಚ್ಚು ಸಂಬಳ ಪಡೆಯುವ ಉದ್ಯೋಗ ದೊರೆಯುತ್ತದೆ.

ಈ ಗುರು ಸ್ಥಾನಪಲ್ಲಟದಿಂದ ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ.ಹೆಚ್ಚು ವೆಚ್ಚವಾದರೂ ಹೆಚ್ಚಿನ ಸಂಪರ್ಕ ಪಡೆಯುತ್ತೀರಿ.

ಇಳಯರಾಜ|
ಪರಿಹಾರ: ತಂಜಾವೂರು ಜಿಲ್ಲೆಯ ವಲಂಗೈಮಾನ್ ಸಮೀಪದ ಆಲಂಗುಡಿಯಲ್ಲಿರುವ ಶ್ರೀ ಆಪದ್‌ಸಹಾಯೇಶ್ವರ ಮತ್ತು ಗುರುಭಗವಾನನನ್ನು ಗುರುವಾರಗಳಂದು ಆರಾಧಿಸಿ. ಬಡ ಕನ್ಯಾಮಣಿಗಳ ಮದುವೆಗಾಗಿ ಸಹಾಯ ಮಾಡಿ. ಅಡ್ಡಿ ಆತಂಕಗಳು ದೂರವಾಗುತ್ತವೆ.


ಇದರಲ್ಲಿ ಇನ್ನಷ್ಟು ಓದಿ :