Widgets Magazine

ಚೈತ್ರ ನವರಾತ್ರಿ ಸಂದರ್ಭದಲ್ಲಿ ನಿಮ್ಮ ರಾಶಿ ಭವಿಷ್ಯ ನೋಡಿ

ರಾಜೇಶ್ ಪಾಟೀಲ್| Last Updated: ಬುಧವಾರ, 30 ಸೆಪ್ಟಂಬರ್ 2015 (16:07 IST)
ದಾತಿ ಮಹಾರಾಜ್

 
WD
ಮಾತೆ ವೈಷ್ಣೋದೇವಿಯನ್ನು ಆರಾಧಿಸುವ ಪರ್ವ ಚೈತ್ರ ಆರಂಭವಾಗಿದೆ.ಜೀವನದಲ್ಲಿ ನವುತ್ಸಾಹವನ್ನು ಉಂಟು ಮಾಡುವ ಹಬ್ಬವಾಗಿದೆ. ವಿಶಿಷ್ಟ ಗ್ರಹಗಳೊಂದಿಗೆ ಆರಂಭವಾಗುವುದರಿಂದ ಪ್ರತಿಯೊಬ್ಬರ ರಾಶಿಯ ಮೇಲೆ ಅಲ್ಪಮಟ್ಟಿನ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಭವಿಷ್ಯದಲ್ಲಿ ಸಕಾರಾತ್ಮಕ ಫಲಗಳನ್ನು ಪಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಕೇತಗಳನ್ನು ನೀಡುತ್ತವೆ. ಯಾಕೆಂದರೆ ಶನಿ, ಬೃಹಸ್ಪತಿ, ಸೂರ್ಯ, ಮಂಗಳ, ಬುಧ ಮತ್ತು ಚಂದ್ರ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.

ಇಂತಹ ರಾಶಿಗಳನ್ನು ಹೊಂದಿದವರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಲ್ಲದೇ ಇಷ್ಟಸಿದ್ಧಿಯ ಲಾಭ ದೊರೆಯುತ್ತದೆ. ನಿಮಗೆ ಗೌರವ-ಸನ್ಮಾನಗಳೊಂದಿಗೆ ಧನಲಾಭವಾಗುವ ಸಾಧ್ಯತೆಗಳು ಹೇರಳವಾಗಿವೆ. ವ್ಯಾಪಾರ ವಹಿವಾಟುದಾರರಿಗೆ ಹಾಗೂ ಉದ್ಯೋಗಿಗಳ ಸಮಸ್ಯೆಗಳಿಗೆ ಪರಿಹಾರ ದೊರೆಯಲಿವೆ. ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ. ವೈವಾಹಿಕ ಜೀವನದ ಸಮಸ್ಯೆಗಳಿಂದ ಮುಕ್ತವಾಗುವ ಯೋಗವಿದೆ.

ನವರಾತ್ರಿಯ ಸಂದರ್ಭದಲ್ಲಿ 12 ರಾಶಿಗಳ ಮೇಲೆ ಗ್ರಹಗಳ ಪ್ರಭಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡೋಣ.

ಮೇಷ: ನವರಾತ್ರಿ ಸಂದರ್ಭದಲ್ಲಿ ನಿಮ್ಮ ಕಾರ್ಯಗಳು ಸಫಲವಾಗಲಿವೆ. ಸಾವಧಾನವಾಗಿ ಇರುವುದು ಒಳಿತು. ಅನವಶ್ಯಕ ಕಾರ್ಯಗಳಲ್ಲಿ ಹಸ್ತಕ್ಷೇಪ ಬೇಡ.ವೆಚ್ಚದಲ್ಲಿ ಹೆಚ್ಚಳ.ಆರೋಗ್ಯದ ಬಗ್ಗೆ ಎಚ್ಚರವಹಿಸಿ.

ವೃಷಭ: ಈ ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ. ಧನಲಾಭವಾಗಲಿದೆ.ನಿಮ್ಮ ಕಾರ್ಯಗಳು ಸಫಲವಾಗಲಿವೆ. ನಿಮ್ಮ ವೈವಾಹಿಕ ಜೀವನ ದಲ್ಲಿ ಹೊಸ ಸಂತೋಷ ಹರಿದು ಬರಲಿದೆ.ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗಲಿವೆ. ಮನೆಯಲ್ಲಿ ಸಹೋದರರ, ಹಿರಿಯರ ಆಶೀರ್ವಾದದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿವೆ.
 
WD


ಮಿಥುನ: ಈ ರಾಶಿಯವರು ನವರಾತ್ರಿ ಸಂದರ್ಭದಲ್ಲಿ ನೈತಿಕತೆಯಿಂದ ವರ್ತಿಸುವುದು ಅಗತ್ಯವಾಗಿದೆ. ವ್ಯಾಪಾರ ವಹಿವಾಟಿನಲ್ಲಿ ಸಫಲತೆಯನ್ನು ಪಡೆಯಲು ಕಠಿಣ ಪರಿಶ್ರಮದಿಂದ ದುಡಿಯುವುದು ಅಗತ್ಯವಾಗಿದೆ. ಕೌಟಂಬಿಕ ಸಮಸ್ಯೆಗಳು ಶೀಘ್ರದಲ್ಲಿ ಪರಿಹಾರವಾಗಲಿವೆ.

ಕರ್ಕ: ಈ ರಾಶಿಯವರಿಗೆ ನವರಾತ್ರಿ ಸಂದರ್ಭದಲ್ಲಿ ಸಂತೋಷದ ಕ್ಷಣಗಳು ಎದುರಾಗಲಿವೆ.ನೀವು ಪ್ರೀತಿಸಿದವರೊಂದಿಗೆ ವಿವಾಹವಾಗಲಿದೆ, ಎಲ್ಲಾ ಕಡೆಗಳಿಂದಲೂ ಹಣದ ಹೊಳೆ ಹರಿದುಬರಲಿದೆ.ಕುಟಂಬದಲ್ಲಿ ಶುಭಕಾರ್ಯಗಳು ನಡೆಯಲಿವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಸಫಲತೆಯನ್ನು ಪಡೆಯುವಿರಿ.ಆತ್ಮಿಯರು ಮತ್ತು ಗೆಳೆಯರು ನಿಮಗೆ ಕಷ್ಟಕಾಲದಲ್ಲಿ ನೆರವಾಗಲಿದ್ದಾರೆ.

ಸಿಂಹ: ಈ ರಾಶಿಯವರೆಗೆ ನವರಾತ್ರಿ ಸಂದರ್ಭದಲ್ಲಿ ಕೋಪವನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ. ನಿರೀಕ್ಷಿಸಿದ ಫಲಗಳು ದೊರೆಯುವ ಸಾಧ್ಯತೆಗಳು ಕಡಿಮೆ. ಹಣಕಾಸಿನ ವ್ಯವಹಾರಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ.ಅನಗತ್ಯ ಹಣಕಾಸಿನ ವೆಚ್ಚ.ಕೌಟಿಂಬಿಕ ಸಮಸ್ಯೆಗಳು ಪರಿಹಾರವಾಗಲಿವೆ.

ಕನ್ಯಾ: ಈ ರಾಶಿಯವರು ನವರಾತ್ರಿ ಸಮಯದಲ್ಲಿ ಅವಸರದಿಂದ ಕಾರ್ಯನಿರ್ವಹಿಸುವುದು ಸೂಕ್ತವಲ್ಲ. ಅನಗತ್ಯ ಸಮಸ್ಯೆಗಳು ಎದುರಾಗಲಿವೆ.ದೂರದ ಪ್ರಯಾಣ ಎದುರಾಗುವ ಸಾಧ್ಯತೆಗಳಿವೆ. ಹಣಕಾಸಿನ ಹರಿವಿನಲ್ಲಿ ಕೊರತೆಯಾಗಬಹುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ.
 
WD


ತುಲಾ: ಈ ರಾಶಿಯವರಿಗೆ ನವರಾತ್ರಿ ಸಮಯದಲ್ಲಿ ಸಂತಸದ ವಾತಾವರಣವಿದೆ. ಆದರೆ. ಕುಟುಂಬದವರ ಮನವನ್ನು ಗೆಲ್ಲುವುದು ಅಗತ್ಯವಾಗಿದೆ. ನಿಮ್ಮ ಕಷ್ಟದ ದಿನಗಳು ದೂರವಾಗಲಿವೆ. ಹಣಕಾಸಿನ ವ್ಯವಹಾರ ಉತ್ತಮ. ಇಷ್ಟಾನುಸಿದ್ಧಿಯಾಗಲಿದೆ.

ವೃಶ್ಚಿಕ: ಈ ರಾಶಿಯವರಿಗೆ ನವರಾತ್ರಿ ಸಂದರ್ಭದಲ್ಲಿ ಸಫಲತೆ ದೊರೆಯಲಿದೆ. ಆತ್ಮಿಯರೊಂದಿಗೆ ಉತ್ತಮ ಸಂಬಂಧ ಹೊಂದುವುದು ಅಗತ್ಯವಾಗಿದೆ. ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಲಾಭವಾಗಲಿದೆ. ವೈವಾಹಿಕ ಜೀವನ ಉತ್ತಮ. ಯುವಕರಿಗೆ ಉತ್ತಮ ಯೋಗವಿದೆ.

ಧನು: ಈ ರಾಶಿಯವರಿಗೆ ನವರಾತ್ರಿ ಸಮಯದಲ್ಲಿ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪತ್ನಿಯ ಅಥವಾ ಗೆಳತಿಯ ಸಲಹೆಗಳನ್ನು ಪಾಲಿಸಿ. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ.ಪಾಲುದಾರಿಕೆಯಲ್ಲಿ ನಷ್ಟ ಸಾಧ್ಯತೆ.

ಮಕರ: ಈ ರಾಶಿಯವರಿಗೆ ನವರಾತ್ರಿ ಸಮಯದಲ್ಲಿ ಹೆಚ್ಚಿನ ಬಲ ದೊರೆಯುತ್ತದೆ.ಆದರೆ, ಬಡವರಿಗೆ ದಯಾಪರತೆಯನ್ನು ತೋರಿಸಬೇಕಾಗುತ್ತದೆ. ಸಾಹಸ ಮತ್ತು ಪರಾಕ್ರಮದಲ್ಲಿ ವೃದ್ಧಿಯಾಗುತ್ತದೆ.ವಹಿವಾಟಿನಲ್ಲಿ ಹೆಚ್ಚಿನ ಲಾಭ. ಪ್ರಿಯಕರ ಅಥವಾ ಪ್ರಿಯತಮೆಯಿಂದ ಶುಭಸಂದೇಶ.ಉದ್ಯೋಗದಲ್ಲಿ ಬದಲಾವಣೆ ಸದ್ಯಕ್ಕೆ ಬೇಡ.

ಕುಂಭ: ಈ ರಾಶಿಯವರು ನವರಾತ್ರಿ ಸಮಯದಲ್ಲಿ ಅವಸರ ಕಾರ್ಯಗಳಲ್ಲಿ ತೊಡಗುವುದು ಬೇಡ. ಗುರು ಹಿರಿಯರ ಮಾರ್ಗದರ್ಶನಗಳನ್ನು ಪಡೆಯಿರಿ. ವ್ಯಾಪಾರ ವಹಿವಾಟಿನಲ್ಲಿ ಕಠಿಣ ಸ್ಥಿತಿ ಎದುರಾಗಲಿದೆ. ಅನಗತ್ಯ ವೆಚ್ಚಗಳನ್ನು ಮಾಡದಿರಿ. ಕುಟುಂಬದವರ ಬೆಂಬಲ ದೊರೆಯಲಿದೆ. ದಾಪಂತ್ಯ ಜೀವನ ಸುಖಕರವಾಗಿರಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಹಾನಿ.

ಮೀನ: ಈ ರಾಶಿಯವರಿಗೆ ನವರಾತ್ರಿ ಸಮಯದಲ್ಲಿ ಅದೃಷ್ಠ ಒಲಿದು ಬರಲಿದೆ.ನಿಮ್ಮ ಆತ್ಮಿಯರಿಗೆ ನೆರವಾಗಲು ಪ್ರಯತ್ನಿಸಿ. ಹಣಕಾಸಿನ ಲಾಭವಾಗಲಿದೆ. ನೆನೆಗುದಿಗೆ ಬಿದ್ದ ಕಾರ್ಯಗಳು ಚೇತರಿಕೆ ಕಾಣಲಿವೆ. ಕೃಷಿ ಲಾಭದಲ್ಲಿ ಹೆಚ್ಚಳ. ಅಕಸ್ಮಿಕ ಧನಲಾಭವಾಗಲಿದೆ.


ಇದರಲ್ಲಿ ಇನ್ನಷ್ಟು ಓದಿ :