ತಿಥಿ ಆರಾಧನೆಯಿಂದ ಜೀವನದಲ್ಲಿ ಸಮೃದ್ಧಿ ಕಾಣಿ

ಶುಕ್ರವಾರ, 31 ಜನವರಿ 2014 (11:58 IST)

PR
ತಿಥಿ ಆರಾಧನೆ: ಮಾನವ ಸಮುದಾಯದ ಸಾಮಾಜಿಕ ಹಾಗೂ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ಅವಲಂಬಿಸಿರುತ್ತದೆ. ಹಿಂದೂಗಳಿಗೆ ಮೂಲ ನೆಲೆಯಾಗಿರುವುದು ಧರ್ಮ. ಈ ಧರ್ಮಕ್ಕೆ ಮೂರು ದೃಷ್ಟಿಕೋನಗಳು.

1. ಮೂಲಭೂತ ತತ್ವಗಳ ಅಥವಾ ಸಿದ್ದಾಂತದ ದೃಷ್ಟಿಕೋನ 2. ಆ ತತ್ವಗಳನ್ನು ಜನ ಸಾಮಾನ್ಯನಿಗೆ ನಿರೂಪಿಸುವ ಪೌರಾಣಿಕ ದೃಷ್ಟಿಕೋನ. 3. ಆ ತತ್ವಗಳ ಸಿದ್ದಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆಯ ದೃಷ್ಟಿಕೋನ.

ಸೈದ್ದಾಂತಿಕ ನೆಲೆಯಲ್ಲಿ ದೇವರ ಅಸ್ತಿತ್ವ, ಮಾನವ ಚೇತನದ ಸ್ವರೂಪ, ಜಗತ್ತಿನ ದೃಷ್ಟಿ, ಜೀವನದ ಪರಮ ಪುರುಷಾರ್ಥ ಮತ್ತು ಅದರ ಸಾಧನ ಪಥ, ದಿನನಿತ್ಯದ ಜೀವನದ ಸಿಹಿ-ಕಹಿ ಅನುಭವಗಳನ್ನೇ ದೃಷ್ಟಾಂತವಾಗಿಸಿಕೊಂಡು ಈ ಎರಡು ದೃಷ್ಟಿಕೋನಗಳು ಮಾನವ ಹೇಗೆ ಬದುಕಬೇಕು ಎಂಬ ಜ್ಞಾನಕ್ಕೆ ಸಾಧನ, ಬುದ್ದಿಯ ವಿಚಾರ ವಿವೇಚನಾ ಶಕ್ತಿಗಳ ಪ್ರಚೋದಕವಾಗಿದೆ. ಭಾವನೆ ಹಾಗೂ ಕಲ್ಪನಾ ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಸಾಧಕ ಹಾಗೂ ಪೂರಕವಾದದ್ದು, ಧರ್ಮದ ಮೂರನೇ ದೃಷ್ಟಿಕೋನವಾದ ನಿತ್ಯ ನೈಮಿತ್ತಿಕ ಕರ್ಮಚಾರಣೆಗಳ ದೃಷ್ಟಿಕೋನ ಕೂಡಾ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ.

ಸಾಂಪ್ರದಾಯಿಕವಾಗಿ ಮೂಡಿಬಂದಿರುವ ಪುರಾಣಗಳ ಮತ್ತು ಅವುಗಳಗೆ ಸಂಬಂಧಪಟ್ಟ ಇತರೆ ಗ್ರಂಥಗಳ ಆಧಾರದಿಂದ ವ್ರತಗಳನ್ನು ವರ್ಗೀಕರಿಸಬಹುದು. ಉಪವಾಸ ಮುಂತಾದ ದೈಹಿಕ ನಿರ್ಬಂಧಗಳನ್ನೊಳಗೊಂಡ ವ್ರತಗಳು ಶಿಕಾಯಿಕ ವ್ರತಗಳುಷಿ. ಸತ್ಯವಚನ, ಧರ್ಮ ಗ್ರಂಥಗಳ ಪಾರಾಯಣ ಮುಂತಾದ ಮಾತಿನ ನಿಯಂತ್ರಣಗಳನ್ನೊಳಗೊಂಡ ವ್ರತಗಳುಷಿ ವಾಚಕ ವ್ರತಗಳುಷಿ. ಜಪ-ಧ್ಯಾನಾಧಿಗಳ ಮೂಲಕ ರಾಗ-ದ್ವೇಷ ಮುಂತಾದ ಮನೋ ದೌರ್ಬಲ್ಯಗಳ ನಿಯಂತ್ರಗಳನ್ನೊಳಗೊಂಡ ವ್ರತಗಳು ಶಿಮಾನಸ ವ್ರತಗಳು. ಆದರೆ ಈ ಮೂರು ಬಗೆಯ ವ್ರತಗಳಲ್ಲೂ ದೈಹಿಕ, ವಾಚಕ, ಮಾನಸಿಕ ನಿಯಂತ್ರಣಗಳಾಗಿರುತ್ತವೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

1. ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

ಸನ್ಯಾಸಯೋಗದತ್ತ ಜ್ಯೋತಿಷ್ಯ ಚಿಂತನೆ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜಾತಕಕ್ಕೆ ಅದರದೇ ಆದ ಮಹತ್ವವಿದೆ. ಅವರವರ ...

ಜಾತಕದ ಪ್ರಕಾರನೀವು ಬುದ್ದಿವಂತರಾ?

ಜಾತಕದ ಪ್ರಕಾರ ಜಾತಕನಿಗೆ ಶುಭಾಶುಭಫಲಗಳನ್ನು ನೀಡುತ್ತವೆ. ಅದರಲ್ಲಿ ಪ್ರಮುಖವಾಗಿ ಶುಭಫಲಗಳನ್ನು ...

ಅಧಿಕಾರ ಕಳೆದುಕೊಂಡಿದ್ದೀರಾ? ಇದು ಶಶಕಯೋಗದ ಪ್ರಭಾವ

ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಹಲವು ಬಗೆಯ ಯೋಗಗಳು ಕಂಡುಬರುತ್ತವೆ.ಅದರಲ್ಲಿ ‘ಶಶಕಯೋಗ’ ಎಂಬುದು ಒಂದು ...