Widgets Magazine

ದಾಂಪತ್ಯದ ಮೇಲೆ ಸೂರ್ಯನ ಸಪ್ತಮ ಭಾವದ ಪ್ರಭಾವ

WD
ಸಪ್ತಮ ಭಾವ ಒಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಮುಖ್ಯ. ಇದರ ಪರಿಸ್ಥಿತಿ ಹದಗೆಟ್ಟರೆ ಆ ವ್ಯಕ್ತಿಯ ಜೀವನದಲ್ಲೂ ಏರುಪೇರಾಗುತ್ತದೆ. ಉತ್ತಮ ದಾಂಪತ್ಯದ ಆಧಾರವೇ ಸಪ್ತಮ ಭಾವ. ಅಂತಹ ಸೂರ್ಯನ ಸಪ್ತಮ ಭಾವದ ಶುಭಾಶುಭ ಫಲಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಿದು.

ಯಾರ ಜಾತಕದಲ್ಲಿ ಸಪ್ತಮ ಭಾವದಲ್ಲಿ ಮೇಷದಲ್ಲಿರುವ ಸೂರ್ಯ ಉಚ್ಛ ಸ್ಥಿತಿಯಲ್ಲಿದ್ದರೆ, ಜೀವನಸಂಗಾತಿ ಅತ್ಯಂತ ಪ್ರಭಾವಶಾಲಿಯಾಗಿರುತ್ತಾರೆ. ಆದರೆ ಜೀವನದಲ್ಲಿ ಆರೋಗ್ಯದ ಏರುಪೇರು ಸಂಭವಿಸುವ ಸಾಧ್ಯತೆಗಳಿರುತ್ತವೆ. ಸೂರ್ಯ ವೃಷಭ ರಾಶಿಯವನಾಗಿದ್ದರೆ ಹಾಗೂ ಲಗ್ನದ ಮೇಲೆ ಮಿತ್ರ ದೃಷ್ಟಿಯನ್ನು ಹಾಯಿಸುತ್ತಿದ್ದರೆ, ಅದರಿಂದ ಆ ಜಾತಕ ಹೊಂದಿರುವ ವ್ಯಕ್ತಿಯ ಜೀವನ ಉತ್ತಮವಾಗಿದ್ದರೂ, ಆ ವ್ಯಕ್ತಿಯ ಪತ್ನಿ ಅಥವಾ ಪತಿಯ ಜೀವನ ಕಷ್ಟಮಯವಾಗುತ್ತದೆ.

ಗಮನಿಸಿ
  ಸದ್ಯದಲ್ಲೇ ವೆಬ್‌ದುನಿಯಾ ಕನ್ನಡದ ಓದುಗರ ಜ್ಯೋತಿಷ್ಯದ ಕುರಿತ ಸಂದೇಹಗಳಿಗೆ ಬೆಂಗಳೂರಿನ ಖ್ಯಾತ ಜ್ಯೋತಿಷಿಗಳು ಉತ್ತರಿಸಲಿದ್ದಾರೆ. ವಿವರಗಳಿಗೆ ಸದ್ಯವೇ ನಿರೀಕ್ಷಿಸಿ.      
ಮಿಥುನದ ಸೂರ್ಯ ಮಿತ್ರ ರಾಶಿಯಲ್ಲಿದ್ದರೆ ಜೀವನ ಸಂಗಾತಿ ಬುದ್ಧಿವಂತರಾಗಿರುತ್ತಾರೆ. ಕರ್ಕನ ಸೂರ್ಯನಿದ್ದರೆ ಆಗಾಗ ಸರಸ ವಿರಸಗಳು ಇರುವ ಸಾಧ್ಯತೆಗಳಿವೆ. ಸಿಂಹನ ಸೂರ್ಯ ಸ್ವರಾಶಿಯಲ್ಲಿದ್ದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಆದರೆ ಲಗ್ನದ ಮೇಲೆ ಶತ್ರು ದೃಷ್ಟಿಯಿದ್ದರೆ ವಿಪರೀತ ಪರಿಣಾಮಗಳು ಉಂಟಾಗಬಹುದು. ಕನ್ಯಾ ರಾಶಿಯ ಸೂರ್ಯ ಬುಧ ರಾಶಿಯಲ್ಲಿದ್ದು ಷಶ್ಟೇಶನಾಗಿದ್ದರೆ ವೈವಾಹಿಕ ಜೀವನದಲ್ಲಿ ಏನಾದರೊಂದು ಸಣ್ಣಪುಟ್ಟ ತೊಂದರೆಗಳು ಇದ್ದೇ ಇರುತ್ತದೆ. ತುಲಾದ ಸೂರ್ಯ ಸಪ್ತಮದಲ್ಲಿ ನೀಚನಾಗಿದ್ದರೆ ಅಂತಹ ಜಾತಕದವರಿಗೆ ವಿವಾಹ ವಿಚ್ಛೇದನ ಅಥವಾ ವಿವಾಹವಾಗದೇ ಇರುವಂತಹ ಭಾವನೆಗಳೂ ಬರಬಹುದು.

ವೃಶ್ಚಿಕದ ಸೂರ್ಯ ಮಿತ್ರ ಮಂಗಳನ ರಾಶಿಯಲ್ಲಿದ್ದರೆ ಮಂಗಳನ ಸುಭವಿದ್ದರೂ ದಾಂಪತ್ಯ ಚೆನ್ನಾಗಿರುವುದಿಲ್ಲ. ಧನುವಿನ ಸೂರ್ಯನಾದರೆ ಅಂತಹ ಜಾತಕದ ಮಂದಿಗೆ ತುಂಬ ಗೆಳೆಯರಿರುತ್ತಾರೆ ಹಾಗೂ ಅಂಥವರು ತಮ್ಮ ಗೆಳೆಯನನ್ನೇ ವರಿಸುವ ಸಂದರ್ಭ ಬರಬಹುದು. ಇದರ ಜತೆಗೆ ಗುರುವಿದ್ದರೆ ಇದು ಖಂಡಿತಾ ಸತ್ಯವಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :