Widgets Magazine

ದ್ವಾದಶ ರಾಶಿಗಳಲ್ಲಿ ಶುಕ್ರದೆಸೆ: ನಿಮ್ಮ ರಾಶಿಯ ಭವಿಷ್ಯ ಗೊತ್ತಾ?

ರಾಜೇಶ್ ಪಾಟೀಲ್| Last Updated: ಬುಧವಾರ, 30 ಸೆಪ್ಟಂಬರ್ 2015 (15:53 IST)

PR
ಪರಮೇಶ್ವಶೃಂಗೇರಿ

ಭಾರತೀಯ ಹಿಂದೂಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ತನ್ನದೇ ಆದ ವೈಶಿಷ್ಟ ಸ್ಥಾನವಿದ್ದು ಅದರಲ್ಲೂ ವಿಶೇಷವಾಗಿ ಜಾತಕ ಫಲ ಒಬ್ಬ ವ್ಯಕ್ತಿಯ ಜೀವಿತದ ಆಗುಹೋಗುಗಳನ್ನು ಸೂಚಿಸುವ ಒಂದು ಪ್ರಬಲ ವಾಹಕವೆಂದು ನಂಬಿಕೆ ಗಳಿಸಿದೆ. ಇದರಲ್ಲಿ ಗ್ರಹಗಳ ಚಲನೆಯ ಆಧಾರದ ಮೇಲೆ ಫಲಗಳು ನಿರ್ಣಯವಾಗುವುದು ಎಂಬುದು ಸ್ಪಷ್ಟವಾಗಿದೆ. ಅದೇ ರೀತಿ ಜನ್ಮರಾಶಿಯಲ್ಲಿ ಗ್ರಹಗಳ ಸಂಚಲನೆ ಉಂಟಾದಾಗ ಬೇರೆಬೇರೆ ರೀತಿಯ ಪ್ರಭಾವಗಳು ಉಂಟಾಗುತ್ತವೆ.ವಿಶೇಷವಾಗಿ ಜನ್ಮರಾಶಿಯಲ್ಲಿ ಶುಕ್ರಗ್ರಹವಿದ್ದರೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗೆಗೆ ಪ್ರಧಾನವಾಗಿ ಜನರು ತಿಳಿಯ ಬಯಸುವ ಅಂಶ.

ಮೊದಲನೆಯದಾಗಿ ಜನ್ಮರಾಶಿ ಮೇಷದಲ್ಲಿ ಶುಕ್ರನಿರುವಾಗ ಜನಿಸಿದ ಜಾತಕನು ಸ್ತ್ರೀ ಸಂಬಂಧಿ ಆಸಕ್ತನೂ ಆಗಿದ್ದು, ಸ್ತ್ರೀಗೆ ಸಂಬಂಧಿಸಿದ ಸುಖವನ್ನು ಅನುಭವಿಸುತ್ತಾನೆ. ವೃಷಭದಲ್ಲಿ ಶುಕ್ರನಿರುವಾಗ ಜನಿಸಿದವನು, ಅಪರಿಮಿತ ಸಂಪತ್ತನ್ನು ಹೊಂದುವುದಲ್ಲದೇ, ವ್ಯವಹಾರ ಚತುರರೂ ಆಗಿರುತ್ತಾರೆ. ಮಿಥುನ ರಾಶಿಯಲ್ಲಿ ಶುಕ್ರನಿದ್ದಾಗ ಜನಿಸಿದ ಪಕ್ಷದಲ್ಲಿ ಜಾತಕನು ಕಲಾಸಕ್ತನೂ,ಹಲವು ಬಗೆಯ ಉಧ್ಯಮ ನಿರತನೂ ಆಗಿದ್ದು ‘ಧನಯೋಗ’ ಸಾಧ್ಯತೆಯು ಹೆಚ್ಚಾಗಿರುತ್ತದೆ. ವಿಶೇಷವಾಗಿ ಇವರು ರಾಜಕೀಯ ಕ್ಷೇತ್ರದಲ್ಲಿ ಅಥವಾ ಅಧಿಕಾರಯುಕ್ತ ಹುದ್ದೆಗಳಲ್ಲಿ ಸಕ್ರಿಯರಾಗುತ್ತಾರೆ. ಕರ್ಕಾಟದಲ್ಲಿ ಶುಕ್ರನಿರುವಾಗ ಜನಿಸಿದವರಿಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಯೋಗವಿದ್ದು ಕಾಮಕ್ಕೆ ಸಂಬಂಧಿಸಿದ ವಿಚಾರಕ್ಕೆ ಹೆಚ್ಚಿನ ಆಸಕ್ತರಾಗಿರುತ್ತಾರೆ. ಸಿಂಹರಾಶಿಯಲ್ಲಿ ಶುಕ್ರನಿರುವಾಗ ಜನಿಸಿದವರು ಸ್ತ್ರೀ ಸಂಬಂಧಿ ಆಸ್ತಿಯ ಒಡೆಯರಾಗುತ್ತಾರಲ್ಲದೇ, ಜೀವನ ಪರ್ಯಂತ ಸ್ತ್ರೀ ಮುಖೇನವಾಗಿಯೇ ಅಧಿಕ ಸಂಪತ್ತನ್ನು ಗಳಿಸುವುದು ಖಂಡಿತ.


ಇದರಲ್ಲಿ ಇನ್ನಷ್ಟು ಓದಿ :