ನಾಲ್ಕು ಬೆರಳಿಗೆ ನವ ರತ್ನಗಳು : ನಿಮಗ್ಯಾವ ರತ್ನ?

ಶುಕ್ರವಾರ, 31 ಜನವರಿ 2014 (12:13 IST)

PR
PR
ರತ್ನಗಳಲ್ಲಿ ಪ್ರಮುಖವಾಗಿ ಒಂಬತ್ತು ರತ್ನಗಳನ್ನು ಶುಭದಾಯಕ ಎಂಬ ಕಾರಣಕ್ಕೆ ನಾವು ಧರಿಸುತ್ತಿದ್ದೇವೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಕೆಂಪು ಹವಳ, ಬುಧನಿಗೆ ಮರಕತ (ಪಚ್ಚೆ), ಗುರುವಿಗೆ ಹಳದಿ ಪುಷ್ಯರಾಗ, ಶುಕ್ರನಿಗೆ ವಜ್ರ, ಶನಿಗೆ ನೀಲ, ರಾಹುವಿಗೆ ಗೋಮೇದಿಕ ಮತ್ತು ಕೇತುವಿಗೆ ವೈಢೂರ್ಯ.

ಪುಷ್ಯರಾಗ ಮಣಿಯನ್ನು (Yellow sapphire) ತರ್ಜನಿ (ತೋರು) ಬೆರಳಿಗೇ ಧರಿಸಬೇಕೆಂದು ಯಾಕೆ ಸೂಚಿಸುತ್ತಾರೆ? ಯಾಕೆಂದರೆ, ಯಾವುದೇ ವ್ಯಕ್ತಿ ಎಚ್ಚರಿಕೆ ಅಥವಾ ನಿರ್ದೇಶನ ನೀಡುವುದು ಇದೇ ಬೆರಳಿನ ಮೂಲಕ. ಇದೇ ಬೆರಳು ಜಗಳಕ್ಕೂ ಕಾರಣವಾಗುತ್ತದೆ, ಹೀಗಾಗಿ ಎಚ್ಚರದಿಂದಿರುವಂತೆ ಹೇಳಲೂ ಕೆಲಸಕ್ಕೆ ಬರುತ್ತದೆ. ಇದಕ್ಕಾಗಿ ಗುರುವಿನ ಪುಷ್ಯರಾಗವನ್ನು ಧರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಈ ಮಣಿಯನ್ನು ಧರಿಸುವುದರಿಂದ ಆ ವ್ಯಕ್ತಿಗೆ ಗಂಭೀರತೆ ಬರುತ್ತದೆ ಮತ್ತು ಆತ ಅನ್ಯಾಯದ ವಿರುದ್ಧ ಜಾಗೃತನಾಗುತ್ತಾನೆ. ಇದು ಧರ್ಮ-ಕರ್ಮದಲ್ಲಿಯೂ ಶ್ರದ್ಧೆ ಹುಟ್ಟಿಸುತ್ತದೆ. ಗುರುವಿನ ಪ್ರಭಾವ ಹೆಚ್ಚಿಸಲು ಮತ್ತು ಅದರ ಅಶುಭ ಫಲಗಳನ್ನು ಕೊನೆಗಾಣಿಸಲು ಈ ರತ್ನವನ್ನು ಧರಿಸಲಾಗುತ್ತದೆ.

ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಮಂತ್ರಿಗಳು, ರಾಜನಾಯಕರು, ನಟರು ಮುಂತಾದವರ ಕೈಯಲ್ಲಿ ಈ ರತ್ನವನ್ನು ಕಾಣಬಹುದು. ಈ ರತ್ನದೊಂದಿಗೆ ಮಾಣಿಕ್ಯವನ್ನೂ ಧರಿಸಿದರೆ, ಅತಿ ಶುಭ ಫಲ ದೊರೆಯುತ್ತದೆ.



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

1. ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

ಸನ್ಯಾಸಯೋಗದತ್ತ ಜ್ಯೋತಿಷ್ಯ ಚಿಂತನೆ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜಾತಕಕ್ಕೆ ಅದರದೇ ಆದ ಮಹತ್ವವಿದೆ. ಅವರವರ ...

ಜಾತಕದ ಪ್ರಕಾರನೀವು ಬುದ್ದಿವಂತರಾ?

ಜಾತಕದ ಪ್ರಕಾರ ಜಾತಕನಿಗೆ ಶುಭಾಶುಭಫಲಗಳನ್ನು ನೀಡುತ್ತವೆ. ಅದರಲ್ಲಿ ಪ್ರಮುಖವಾಗಿ ಶುಭಫಲಗಳನ್ನು ...

ಅಧಿಕಾರ ಕಳೆದುಕೊಂಡಿದ್ದೀರಾ? ಇದು ಶಶಕಯೋಗದ ಪ್ರಭಾವ

ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಹಲವು ಬಗೆಯ ಯೋಗಗಳು ಕಂಡುಬರುತ್ತವೆ.ಅದರಲ್ಲಿ ‘ಶಶಕಯೋಗ’ ಎಂಬುದು ಒಂದು ...