ನಿಮ್ಮ ಜೇಬಿನ ದುಡ್ಡಿಗೂ ಜಾತಕಕ್ಕೂ ಸಂಬಂಧವಿದೆ!

WD
'ಕಂಡರೆ ಹೆಣವೂ ಬಾಯಿ ಬಿಡುತ್ತದೆ' ಎಂಬ ಗಾದೆಯಿದೆ. ಅಂತೆಯೇ ಹಣ ಬೇಡ ಎನ್ನುವ ಮಂದಿ ಯಾರೂ ಸಿಗಲಿಕ್ಕಿಲ್ಲ. ಉತ್ತಮ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ, ಸಮಾಧಾನದ ಜತೆಗೆ ಬೇಡುವುದು ಹಣ.ಎಲ್ಲರ ಆರ್ಥಿಕ ಸ್ಥಿತಿಯೂ ಒಂದೇ ತೆರನಾಗಿದ್ದರೆ ದೇಶ ಹೀಗಿರುತ್ತಿರಲಿಲ್ಲವೇನೋ. ಹಾಗಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಅವರವರ ಜನ್ಮ ಕುಂಡಲಿಯನ್ನೂ ಅವಲಂಬಿಸಿದೆ ಅನ್ನುವ ಸತ್ಯವೂ ಇಲ್ಲಿ ಬೆಳಕಿಗೆ ಬರುತ್ತದೆ. ಹಾಗಾದರೆ ಪ್ರತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಆಯ ಸ್ಥಾನ ಅರ್ಥಾತ್ ಆರ್ಥಿಕ ಸ್ಥಾನ ಎಲ್ಲಿದೆ ಮತ್ತು ಹೇಗಿರುತ್ತದೆ ಎಂಬುದಕ್ಕೆ ಬೆಳಕು ಚೆಲ್ಲೋಣ.

ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಅರ್ಥಾತ್ ಜಾತಕದಲ್ಲಿ ಎರಡನೇ ಅಥವಾ 11ನೇ ಭಾವವನ್ನು ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೆ. ಈ ಭಾವವನ್ನು ನೋಡುವ ಜತೆಜತೆಗೆ ನಾಲ್ಕನೇ ಹಾಗೂ 10ನೇ ಭಾವದಲ್ಲಿ ಶುಭವಿದೆಯೋ ಅಶುಭವಿದೆಯೋ ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸ್ಥಾನಗಳು ಪ್ರಬಲವಾಗಿದ್ದರೆ, ಖಂಡಿತ ಅವುಗಳ ಪರಿಣಾಮ ಜೀವನದಲ್ಲಿ ತಿಳಿದೇ ತಿಳಿಯುತ್ತದೆ. ತೀರಾ ದುರ್ಬಲವಾದರೂ ಪರಿಣಾಮ ಕಾಣುತ್ತದೆ. ವಿಶೇಷವಾಗಿ ಧನೇಶ, ಸುಖೇಶ ಹಾಗೂ ಲಾಭೇಶ ಆರನೇ, ಎಂಟನೇ ಹಾಗೂ 12ನೇ ಸ್ಥಾನಗಳಲ್ಲಿ ಕಂಡುಬಂದರೆ, ಆ ಹೊಂದಿದವರಿಗೆ ಯಾವಾಗಲೂ ಧನದ ಅಂತರೆ ಆರ್ಥಿಕ ಅಭಾವ ಹಾಗೂ ಆರ್ಥಿಕವಾಗಿ ಕಷ್ಟನಷ್ಟಗಳು ಜೀವನದಲ್ಲಿ ಕಂಡುಬರುತ್ತವೆ.

WD
ಧನಲಾಭ, ಸುಖ ಅಥವಾ ಕರ್ಮ ಸ್ಥಾನ ಪ್ರಬಲವಾಗಿದ್ದರೂ, ಆರ್ಥಿಕ ಸ್ಥಿತಿ ದೇಶ, ಸಮಾಜ ಹಾಗೂ ಪರಿವಾರದ ಮೇಲೂ ಪ್ರಭಾವ ಬೀರುತ್ತದೆ. ಇದರ ಸ್ಥಾನ ಗ್ರಹಗಳ ಮೇಲೂ ಪ್ರಭಾವ ಬೀರುತ್ತದೆ.

1. ಶನಿ- ಮಂಗಳ ಯೋಗಕಾರಕನಾಗಿದ್ದರೆ ಅಂತಹ ವ್ಯಕ್ತಿ ಸಾಧಾರಣ ಧನವಂತನಾಗಿರುತ್ತಾನೆ. ಕಷ್ಟನಷ್ಟಗಳಿಲ್ಲದಿದ್ದರೂ ಆರಕ್ಕೇರದ, ಮೂರಕ್ಕಿಳಿಯದ ಅನ್ನುತ್ತಾರಲ್ಲ ಹಾಗೆ, ಉಚ್ಛವೂ ಅಲ್ಲದ ನೀಚ ಸ್ಥಿತಿಯೂ ಅಲ್ಲದ ಸಾಧಾರಣ ಆರ್ಥಿಕ ಸ್ಥಿತಿ ಇರುತ್ತದೆ.

2. ಸೂರ್ಯ- ಚಂದ್ರ ಯೋಗಕಾರಕರಾಗಿರುವ ಜಾತಕದ ವ್ಯಕ್ತಿಗಳು ಲಕ್ಷಾಧಿಪತಿಗಳಾಗುತ್ತರೆ. ಇಂಥವರಿಗೆ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ತೊಂದರೆ ಎಂದೂ ಬಾಧಿಸದು.

3. ಬುಧ, ಬೃಹಸ್ಪತಿ ಹಾಗೂ ಶುಕ್ರನ ಪ್ರಭಾವ ಇದ್ದರೆ ಧನ ಸಂಪತ್ತಿನ ಲಾಭವಾಗುತ್ತದೆ.

ಧನಲಾಭ ಯೋಗ: ಕುಂಡಲಿಯಲ್ಲಿ 11ನೇ ಸ್ಥಾನವನ್ನು ಆರ್ಥಿಕ ಸ್ಥಾನವೆಂದೇ ಹೇಳಲಾಗುತ್ತದೆ. ಈ ಸ್ಥಾನದಲ್ಲಿರುವ ಗ್ರಹ ಅಥವಾ ರಾಶಿಯನ್ನು ಅವಲಂಬಿಸಿ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. 11ನೇ ಸ್ಥಾನದ ಅಧಿಪತಿ ದುರ್ಬಲನಾಗಿದ್ದರೆ ಆರ್ಥಿಕ ಸ್ಥಿತಿ ಚೆನ್ನಾಗಿರುವುದಿಲ್ಲ ಎಂದರ್ಥ. ಈ ಸ್ಥಾನದ್ಲಲಿ ಶುಭ ರಾಶಿ ಇದ್ದರೆ ಅಥವಾ ಶುಭ ಗ್ರಹದ ದೃಷ್ಟಿಯಿದ್ದರೆ, ಆರ್ಥಿಕ ಸ್ಥಿತಿ ಸರಿಯಾಗಿ ಇದೆ. ಉತ್ತಮ ಗತಿಯಲ್ಲೇ ಸಾಗುತ್ತಿದೆ ಎಂದರ್ಥ. ಈ ಸ್ಥಾನದ ಮೇಲೆ ಪಾಪ ಪ್ರಭಾವ ಇದ್ದರೆ ಕೆಟ್ಟ ಮಾರ್ಗದ ಮೂಲಕ ಹಣ ಸಂಗ್ರಹವಾಗುತ್ತಿದೆ ಎಂದರ್ಥ.

ವಿಶೇಷವೆಂದರೆ, ಆಯೇಶ ಹಾಗೂ ಧನೇಶ ದುರ್ಬಲರಾಗಿದ್ದರೆ, ಅಲ್ಲಿರುವ ಗ್ರಹಗಳನ್ನು ಸ್ವಲ್ಪ ಮಟ್ಟಿಗೆ ಬಲಯುತರನ್ನಾಗಿ ಮಾಡಲು ಜ್ಯೋತಿಷ್ಯದಲ್ಲಿ ಮಾರ್ಗಗಳಿವೆ. ಹೀಗೆ ಮಾಡುವುದರಿಂದ ಸ್ವಲ್ಪ ಮಟ್ಟಿನ ಆರ್ಥಿಕ ಬದಲಾವಣೆ ಜೀವನದಲ್ಲಿ ಕಾಣಲು ಸಾಧ್ಯವಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...