Widgets Magazine

ನಿಮ್ಮ ಜೇಬಿನ ದುಡ್ಡಿಗೂ ಜಾತಕಕ್ಕೂ ಸಂಬಂಧವಿದೆ!

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:51 IST)
'{C}

PR
{C} ಕಂಡರೆ ಹೆಣವೂ ಬಾಯಿ ಬಿಡುತ್ತದೆ' ಎಂಬ ಗಾದೆಯಿದೆ. ಅಂತೆಯೇ ಹಣ ಬೇಡ ಎನ್ನುವ ಮಂದಿ ಯಾರೂ ಸಿಗಲಿಕ್ಕಿಲ್ಲ. ಉತ್ತಮ ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಆರೋಗ್ಯ, ಶಾಂತಿ, ಸಮಾಧಾನದ ಜತೆಗೆ ಬೇಡುವುದು ಹಣ.ಎಲ್ಲರ ಆರ್ಥಿಕ ಸ್ಥಿತಿಯೂ ಒಂದೇ ತೆರನಾಗಿದ್ದರೆ ದೇಶ ಹೀಗಿರುತ್ತಿರಲಿಲ್ಲವೇನೋ. ಹಾಗಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಅವರವರ ಜನ್ಮ ಕುಂಡಲಿಯನ್ನೂ ಅವಲಂಬಿಸಿದೆ ಅನ್ನುವ ಸತ್ಯವೂ ಇಲ್ಲಿ ಬೆಳಕಿಗೆ ಬರುತ್ತದೆ. ಹಾಗಾದರೆ ಪ್ರತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಆಯ ಸ್ಥಾನ ಅರ್ಥಾತ್ ಆರ್ಥಿಕ ಸ್ಥಾನ ಎಲ್ಲಿದೆ ಮತ್ತು ಹೇಗಿರುತ್ತದೆ ಎಂಬುದಕ್ಕೆ ಬೆಳಕು ಚೆಲ್ಲೋಣ.

ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಅರ್ಥಾತ್ ಜಾತಕದಲ್ಲಿ ಎರಡನೇ ಅಥವಾ 11ನೇ ಭಾವವನ್ನು ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೆ. ಈ ಭಾವವನ್ನು ನೋಡುವ ಜತೆಜತೆಗೆ ನಾಲ್ಕನೇ ಹಾಗೂ 10ನೇ ಭಾವದಲ್ಲಿ ಶುಭವಿದೆಯೋ ಅಶುಭವಿದೆಯೋ ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸ್ಥಾನಗಳು ಪ್ರಬಲವಾಗಿದ್ದರೆ, ಖಂಡಿತ ಅವುಗಳ ಪರಿಣಾಮ ಜೀವನದಲ್ಲಿ ತಿಳಿದೇ ತಿಳಿಯುತ್ತದೆ. ತೀರಾ ದುರ್ಬಲವಾದರೂ ಪರಿಣಾಮ ಕಾಣುತ್ತದೆ. ವಿಶೇಷವಾಗಿ ಧನೇಶ, ಸುಖೇಶ ಹಾಗೂ ಲಾಭೇಶ ಆರನೇ, ಎಂಟನೇ ಹಾಗೂ 12ನೇ ಸ್ಥಾನಗಳಲ್ಲಿ ಕಂಡುಬಂದರೆ, ಆ ಹೊಂದಿದವರಿಗೆ ಯಾವಾಗಲೂ ಧನದ ಅಂತರೆ ಆರ್ಥಿಕ ಅಭಾವ ಹಾಗೂ ಆರ್ಥಿಕವಾಗಿ ಕಷ್ಟನಷ್ಟಗಳು ಜೀವನದಲ್ಲಿ ಕಂಡುಬರುತ್ತವೆ.


ಇದರಲ್ಲಿ ಇನ್ನಷ್ಟು ಓದಿ :