Widgets Magazine

ನಿಮ್ಮ ರಾಶಿಗನುಗುಣವಾಗಿ ಬಟ್ಟೆಗಳನ್ನು ಧರಿಸಿ!

ವೆಬ್‌ದುನಿಯಾ|
PR
ಸಿಂಹ ರಾಶಿಯ ಮಂದಿಗೆ ಬಣ್ಣಬಣ್ಣದ ಕಾಟನ್ ವಸ್ತ್ರಗಳು, ಕನ್ಯಾ ರಾಶಿಯವರಿಗಾಗಿ ತರಹೇವಾರಿ ಲಿನೆನ್ ಬಟ್ಟೆಗಳು, ವಜ್ರದ ತರಹೇವಾರಿ ಆಭರಣಗಳು ಮೇಷ ರಾಶಿಯವರಿಗಾಗಿ!

ಇದೆಂಥ ಹೊಸ ಥಿಯರಿ ಅಂತ ಆಶ್ಚರ್ಯ ಪಡಬೇಡಿ. ಬಟ್ಟೆಗಳಿಗೂ ರಾಶಿಗೂ ಸಂಬಂಧವಿದೆ. ಕಣ್ಣಿಗೆ ಚೆನ್ನಾಗಿ ಕಂಡಿದ್ದನ್ನು ನೀವು ಧರಿಸಬಹುದು. ಆದರೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳಲಾರದು ಎಂಬುದು ನಿಮಗೆ ಗೊತ್ತಾ? ಹೌದು. ನೀವು ಧರಿಸುವ ಬಟ್ಟೆಗೂ, ಆಭರಣಕ್ಕೂ, ಹಾಕಿಕೊಳ್ಳುವ ವಸ್ತುವಿಗೂ ನಿಮ್ಮ ರಾಶಿಗೂ ಸಂಬಂಧವಿದೆ.

ಫ್ಯಾಷನ್ ಜ್ಯೋತಿಷ್ಯರ ಅಭಿಪ್ರಾಯದ ಪ್ರಕಾರ, ನಾವು ಯಾವುದು ಧರಿಸಿದರೆ, ಚೆಂದ ಕಾಣುತ್ತದೆ ಎಂಬುದು ಮುಖ್ಯವಲ್ಲ. ಯಾವ ಮಾದರಿಯ ಬಟ್ಟೆ ಧರಿಸಿದರೆ ನಮ್ಮತನ ಪ್ರಜ್ವಲಿಸುತ್ತದೆ ಎಂಬುದು ಮುಖ್ಯ. ಎಲ್ಲ ರಾಶಿಗಳೂ ಅಗ್ನಿ ವಾಯು, ನೆಲ, ಜಲ ಹಾಗೂ ಆಕಾಶ ಈ ತತ್ವಗಳನ್ನು ಆಧರಿಸಿ ಇರುವುದರಿಂದ ಈ ಎಲ್ಲ ತತ್ವಗಳು ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜಿಯನ್ನು ಸ್ಫುರಿಸುತ್ತವೆ. ಆದರೆ ಬಹುತೇಕರು ತಮ್ಮ ರಾಶಿಗೆ ಹೊಂದುವ ಬಟ್ಟೆಯನ್ನು ಆರಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಇಂಥ ಆಯ್ಕೆಗಳೇ ಎಡವಟ್ಟಾಗುತ್ತದೆ. ನಾವು ಇಷ್ಟಪಟ್ಟು ಖರೀದಿಸುವ ಬಟ್ಟೆ ನಮ್ಮ ಒಳಗಿನ ವೆಬ್ರೇಷನ್‌ಗಳಿಗೆ ಇದು ಸೂಟ್ ಆಗೋದಿಲ್ಲ ಎಂಬುದೂ ಕೂಡಾ ಸತ್ಯ.

ಉದಾಹರಣೆಗೆ ಸಿಂಹ ರಾಶಿಯ ಮಂದಿಗೆ ಪ್ಯೂರ್ ಲೆದರ್‌ನಿಂದ ಮಾಡಿದ ವಸ್ತುಗಳನ್ನು ಬಳಸುವುದು ಸರಿಹೊಂದಲಾರದು. ಕಾರಣ. ಸಿಂಹ ರಾಶಿಯ ಮೃಗೀಯ ಗುಣಕ್ಕೂ ಚರ್ಮದ ವಸ್ತುಗಳಿಗೂ ಸರಿ ಹೊಂದುವುದಿಲ್ಲ. ಜೊತೆಗೆ ಎಲ್ಲಾ ರಾಶಿಯವರಿಗೂ ಚಿನ್ನ ಹೊಂದಿಕೊಳ್ಳುವುದಿಲ್ಲ. ಹೀಗೆ ಒಂದೊಂದು ರಾಶಿಯ ಮಂದಿಗೂ ಹೊಂದಿಕೊಳ್ಳುವ ಹೊಂದಿಕೊಳ್ಳದ ವಸ್ತ್ರ ವೈವಿಧ್ಯಗಳಿವೆ.


ಇದರಲ್ಲಿ ಇನ್ನಷ್ಟು ಓದಿ :