Widgets Magazine

ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ತಿಳಿಯಬೇಕೇ?

ವೆಬ್‌ದುನಿಯಾ|
PR
ಹುಟ್ಟಿದ ಮೂಲ ಸ್ವಭಾವವನ್ನು ಜ್ಯೋತಿಷ್ಯದ ಮೂಲಕ ಅರಿಯಲು ಸಾಧ್ಯ. ಹುಟ್ಟಿದ ದಿನಾಂಕದ ಮೂಲಕ ಮೂಲಾಂಕವನ್ನು ಕಂಡುಹಿಡಿದು ಆ ಮೂಲಕ ಮೂಲ ಸ್ವಭಾವ ಅರಿಯಲು ಸಾಧ್ಯವಾಗುತ್ತದೆ. ಹೆತ್ತವರು ತಮ್ಮ ಮಕ್ಕಳ ಮೂಲ ಸ್ವಭಾವವನ್ನು ಮೊದಲೇ ಅರಿತರೆ, ಅವರನ್ನು ತಿದ್ದಿ ತೀಡಲು ಸುಲಭವಾಗುತ್ತದೆ. ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲಾಂಕ ಅರಿತು ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಂಯ್ಯಲು ಇಲ್ಲಿ ಕೆಲವು ಮಾರ್ಗಗಳಿವೆ.

ಮೂಲಾಂಕ 1: ಈ ಅಂಕೆಯನ್ನು ಹೊಂದಿದವರು ಅಂದರೆ ಯಾವುದೇ ತಿಂಗಳಿನ 1, 10, 19 ಹಾಗೂ 28 ತಾರೀಕುಗಳಲ್ಲಿ ಜನಿಸಿದ ಮಕ್ಕಳು ಕೋಪ, ಜಿದ್ದು ಸಾಧಿಸುವ ಹಾಗೂ ಅಹಂಕಾರಿ ಸ್ವಭಾವಗಳನ್ನು ಹೊಂದಿರುತ್ತಾರೆ. ಉದ್ಯೋಗ ಸ್ಥಾನದಲ್ಲಿ ಇವರೊಬ್ಬ ಉತ್ತಮ ಅಧಿಕಾರಿಯಾಗಿ ರೂಪುಗೊಳ್ಳಬಹುದು. ಈ ಮಕ್ಕಳನ್ನು ತರ್ಕ, ವಾದದಿಂದ ಅಥವಾ ಬೈದು ಸರಿಮಾಡಲು ಸಾಧ್ಯವಿಲ್ಲ. ಪ್ರೀತಿಯಿಂದ ಬುದ್ಧಿಮಾತು ಹೇಳಿದರೆ ಇವರು ತಿದ್ದಿಕೊಳ್ಳುತ್ತಾರೆ.

ಮೂಲಾಂಕ 2: ಈ ಅಂಕೆಯನ್ನು ಹೊಂದಿದವರು ಅಂದರೆ ಯಾವುದೇ ತಿಂಗಳಿನ 2, 11, 20 ಅಥವಾ 29ನೇ ತಾರೀಕಿನಂದು ಜನಿಸಿದವರು ಶಾಂತ, ಭಾವುಕ ಹಾಗೂ ಬುದ್ಧಿವಂತರಾಗಿರುತ್ತಾರೆ. ತಂದೆತಾಯಿಯರ ಸೇವೆ ಮಾಡುತ್ತಾರೆ. ಇವರ ಬಳಿ ದೊಡ್ಡ ಸ್ವರದಲ್ಲಿ ಮಾತನಾಡುವುದು ಸಲ್ಲ. ಶಾಂತ ಹಾಗೂ ಸಮಾಧಾನದಿಂದ ಇವರ ಬಳಿ ಮಾತನಾಡಿದರೆ ಉತ್ತಮ.


ಇದರಲ್ಲಿ ಇನ್ನಷ್ಟು ಓದಿ :