Widgets Magazine

ಬರಾಕ್ ಒಬಾಮ 2009 ಹೇಗಿರುತ್ತದೆ?

ಒಬಾಮ ಕುಂಡಲಿ
PR

ಕುಂಡಲಿ ವಿಶ್ಲೇಷಣೆ:
ತೃತೀಯೇಶ ಗುರುವು ನೀಚ ಸ್ಥಾನದಲ್ಲಿದ್ದಾನೆ ಆದರೆ ಅವನು ಲಗ್ನದಲ್ಲಿ ಸ್ವಗೃಹಿ ಶನಿಯೊಂದಿಗಿರುವ ಕಾರಣ ನೀಚ ಮಂಗರಾಜಯೋಗ ಇರುತ್ತದೆ. ಇದು ಹೆಸರು, ಕೀರ್ತಿ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ. ಗುರು ಮತ್ತು ಬುಧ ಎದುರುಬದುರಾಗಿರುವುದರಿಂದ ಅವರು ಬುದ್ಧಿವಂತ ಮತ್ತು ವಾಕ್ಪಟುತ್ವದೊಂದಿಗೆ ಹಾಗೂ ವಿನೋದವೃತ್ತಿಯಿಂದ ಗಮನ ಸೆಳೆಯುತ್ತಾರೆ.

ಶಕ್ತಿಶಾಲಿ ಗುರು, ಶನಿ ಮತ್ತು ಬುಧಗಳು ಅವರನ್ನು ಪ್ರತಿಭಾಶಾಲಿ ವಕೀಲ ಮತ್ತು ಶಿಕ್ಷಕನಾಗಿ ರೂಪಿಸುತ್ತವೆ. ಈ ಬುಧ ಲಗ್ನ ಮತ್ತು ಲಗ್ನೇಶನ ಮೇಲೆ ದೃಷ್ಟಿಯಿದ್ದು, ಅದು ಅವರ ವಾಕ್ಪಟುತ್ವಕ್ಕೆ ಉತ್ತೇಜನಕಾರಿ. ರಾಜನೀತಿಗೆ ಸಂಬಂಧಿಸಿ ಕುಂಡಲಿಯಲ್ಲಿ ಶನಿಯು ಆಶೀರ್ವಾದ ಕಾರಕನಾಗಿದ್ದಾನೆ. ಒಬಾಮ ಕುಂಡಲಿಯಲ್ಲಿ ಶನಿಯು ಲಗ್ನದಲ್ಲಿ ವಿರಾಜಮಾನನಾಗಿ ಶಶ ಮಹಾಪುರುಷಯೋಗ ಮೂಡುತ್ತದೆ ಮತ್ತು ವರ್ಗೋತ್ತಮನಾಗಿ ಶಕ್ತಿಶಾಲಿಯೂ ಆಗಿರುತ್ತಾರೆ. ಇವುಗಳು ಅವರ ಶಕ್ತಿಶಾಲಿ ಚಾರಿತ್ರ್ಯ ಮತ್ತು ಮಹಾನ್ ನೇತಾರನ ಗುಣಗಳನ್ನು ನಿರ್ದೇಶಿಸುತ್ತವೆ. ಪಂಚಮ ಸ್ಥಾನದಲ್ಲಿ ಉಚ್ಚನಾಗಿರುವ ಚಂದ್ರನು ಒಬಾಮರನ್ನು ಪ್ರತಿಷ್ಠಿತರನ್ನಾಗಿ ರೂಪಿಸುತ್ತದೆ.

2009ರಲ್ಲಿ ಗ್ರಹಗಳ ಪ್ರಭಾವ:
25 ಮಾರ್ಚ್ 2009ರವರೆಗೆ ಒಬಾಮ ಅವರು ಗುರು-ಚಂದ್ರರ ದೆಶೆ-ಅಂತರದೆಶೆಯ ಪ್ರಭಾವದಲ್ಲಿರುತ್ತಾರೆ. ಗುರು ಮತ್ತು ಚಂದ್ರರು ನವಪಂಚಮದಲ್ಲಿದ್ದಾರೆ ಮತ್ತು ರಾಜಯೋಗದಲ್ಲಿಯೂ ಸಮಾವಿಷ್ಟರಾಗಿದ್ದಾರೆ. 8 ಮಾರ್ಚ್‌ವರೆಗೆ ಅವರಿಗೆ ವಿಭಿನ್ನ ಕಡೆಗಳಿಂದ ಸಹಕಾರ ಮತ್ತು ಪ್ರಶಂಸೆ ದೊರೆಯುತ್ತಿರುತ್ತದೆ. ಆದರೆ 9 ಮಾರ್ಚ್ ಮತ್ತು 18 ಏಪ್ರಿಲ್ ನಡುವಿನ ಅವಧಿಯು ಅವರಿಗೆ ಬಹಳ ಕ್ಲಿಷ್ಟಕರವಾಗಿರುತ್ತದೆ. ಅವರ ಸೃಜನಾತ್ಮಕ ಶಕ್ತಿಗಳು ಉಲ್ಲೇಖನೀಯ ಸಂದರ್ಭಗಳಿಗೆ ಹಾನಿಯುಂಟುಮಾಡಬಲ್ಲವು. ಈ ಕಾರಣಕ್ಕೆ ಅವರು ತಪ್ಪು ಪರಿಸ್ಥಿತಿಗಳನ್ನು ಸರಿಯಾಗಿ ಗುರುತಿಸಲು ವಿಫಲರಾಗುತ್ತಾರೆ. ಈ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಅವರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ.

25 ಮಾರ್ಚ್ 2009 ನಂತರ ಅವರ ಗ್ರಹಗಳು ಮಂಗಳದ ದಶೆ-ಅಂತರದೆಶೆಯಲ್ಲಿ ಸುತ್ತುತ್ತವೆ. ಅವರ ಮಂಗಳವು ಎಂಟನೇ ಭಾವದಲ್ಲಿ ರಾಹುವಿನ ಜತೆಗಿದೆ. ಮಂಗಳವು ದಶೆಯ ಒಡೆಯ ಗುರುವಿಗಿಂತ ಎಂಟನೇ ಭಾವದಲ್ಲಿದೆ. ಎಂಟನೇ ಭಾವದಲ್ಲಿ ಮಂಗಳ, ಪ್ಲುಟೋ ಮತ್ತು ರಾಹು ವಿರಾಜಮಾನರಾಗಿದ್ದಾರೆ. ಇದರಿಂದಾಗಿ ಅವರಿಗೆ ಸಾಕಷ್ಟು ಕಠಿಣ ಪರಿಸ್ಥಿತಿಗಳು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ಸಂಭಾಳಿಸುವುದು ಅವರಿಗೆ ಕಷ್ಟಕರವಾಗಬಹುದು. ಈ ಸಮಯದ ನಂತರ ಅವರ ಉತ್ಸಾಹ, ಜೋಶ್‌ನಲ್ಲೂ ಕೊರತೆ ಕಂಡುಬರುತ್ತದೆ. ಪರಿಸ್ಥಿತಿಯನ್ನು ನಿಭಾಯಿವುದೇ ಕಷ್ಟಕರವಾಗಲಿದೆ. ಅದರೊಂದಿಗೆ ಅವರ ಮೇಲೆ ಒತ್ತಡವೂ ಹೆಚ್ಚಾಗುತ್ತದೆ, 2009ರ ಸೆಪ್ಟೆಂಬರ್ ತಿಂಗಳವರೆಗೂ ಅವರು ಇದೇ ರೀತಿಯ ಮಾನಸಿಕ ತುಮುಲಕ್ಕೆ ಸಿಲುಕಲಿದ್ದಾರೆ. ಅದರ ನಂತರ ಅವರು ತಮ್ಮ ರಕ್ಷಣೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.

ಇಳಯರಾಜ|
ಅಮೆರಿಕ ರಾಷ್ಟ್ರಪತಿಯಾಗಿ ಕರಿಯ ಜನಾಂಗೀಯ ಅವರು ಅಧಿಕಾರಕ್ಕೇರಿ ಹೊಸ ಇತಿಹಾಸ ಬರೆದಿದ್ದಾರೆ. ಅವರ ಭವಿಷ್ಯದ ಬಗ್ಗೆ ಭಾರತದ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ ಅವರ ಗಣೇಶಸ್ಪೀಕ್ಸ್ ಡಾಟ್ ಕಾಂ ತಂಡವು ಏನು ಹೇಳುತ್ತದೆ ಎಂದು ತಿಳಿಯುವ ಕುತೂಹಲವೇ? ಮುಂದೆ ಓದಿ.

ಅಮೆರಿಕ ರಾಷ್ಟ್ರಪತಿ ಪದವಿಗೇರಿದ ಕರಿಯ ಜನಾಂಗದ ಪ್ರಥಮ ಅಧ್ಯಕ್ಷ ಬರಾಕ್ ಒಬಾಮ ಸ್ವಚ್ಛ ರಾಜನೀತಿಯ ಒಲವುಳ್ಳವರು. ವರ್ತಮಾನ ಕಾಲದಲ್ಲಿ ಅಮೆರಿಕವು ಅಭೂತಪೂರ್ವ ಆರ್ಥಿಕ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಅಮೆರಿಕವನ್ನು ಆರ್ಥಿಕ ದುಸ್ಥಿತಿಯಿಂದ ಪಾರು ಮಾಡುವುದು ಮತ್ತು ಸರಕಾರದಲ್ಲಿರುವ ಭ್ರಷ್ಟಾಚಾರ, ವಿಶ್ವದ ಅನ್ಯ ದೇಶಗಳೊಂದಿಗಿನ ಸಂಬಂಧ ಮುಂತಾದ ಹಲವು ಸವಾಲುಗಳು ಮತ್ತು ಉತ್ತರದಾಯಿತ್ವಗಳೊಂದಿಗೆ ದೇಶವನ್ನು ಸಂಭಾಳಿಸಲಿರುವ ಒಬಾಮಗೆ 2009 ವರ್ಷ ಹೇಗಿರುತ್ತದೆ ಎಂಬ ಬಗ್ಗೆ ಗಣೇಶ ಹೀಗೆ ಹೇಳುತ್ತಾನೆ:
ಬರಾಕ್ ಒಬಾಮ ಲಗ್ನ ಕುಂಡಲಿ ಹೀಗಿದೆ:
ಸೆಪ್ಟೆಂಬರ್ ಮಧ್ಯಭಾಗದ ನಂತರ ಅವರ ಪರಿಸ್ಥಿತಿ ಒಂದಿಷ್ಟು ಸುಧಾರಣೆಯಾಗುತ್ತದೆ ಮತ್ತು 11 ಸೆಪ್ಟೆಂಬರ್‌ನಿಂದ 18 ಅಕ್ಟೋಬರ್ ನಡುವೆ ಅವರು ಪ್ರಭಾವಶಾಲಿಯಾದ ಕೆಲವೊಂದು ನಿರ್ಣಾಯಕ ಹೆಜ್ಜೆಗಳನ್ನು ಇರಿಸುತ್ತಾರೆ. ನವೆಂಬರ್ ಮಧ್ಯಭಾಗದ ನಂತರ ಅವರು ಆತ್ಮವಿಶ್ವಾಸ ಮರಳಿ ಗಳಿಸಿಕೊಳ್ಳುತ್ತಾರೆ ಮತ್ತು ಆ ಸಂದರ್ಭದಲ್ಲಿ ಕೈಗೊಳ್ಳುವ ಯಾವುದೇ ಕಾರ್ಯಗಳು ಅವರ ಪ್ರತಿಷ್ಠೆಯನ್ನು, ಗರಿಮೆಯನ್ನು ವೃದ್ಧಿಸುತ್ತದೆ. ಇದಲ್ಲದೆ, ಮಹಾನ್ ವ್ಯಕ್ತಿಯೊಬ್ಬರು ಅವರ ಪರವಾಗಿ ನಿಲ್ಲುತ್ತಾರೆ. (ಗಣೇಶಸ್ಪೀಕ್ಸ್ ತಂಡ)


ಇದರಲ್ಲಿ ಇನ್ನಷ್ಟು ಓದಿ :