Widgets Magazine

ಮದುವೆ ಓಕೆ... ಮಹೂರ್ತ ಯಾಕೆ ?

PR
ಇಷ್ಟಲ್ಲದೇ ಸಪ್ತಮಾಧಿಪತಿಯ ದೆಸೆ ಮತ್ತು ಸಪ್ತಮಸ್ಥಾನದಲ್ಲಿರುವ ಗ್ರಹಗಳ ಅಂತರ್ದೆಸೆ ಶುಕ್ರಯುಕ್ತನಾಗಿರುವ ಸಪ್ತಮಾಧಿಪತಿಯು ದಶಾಭುಕ್ತಿ,ಸಪ್ತಮಾಧಿಪತಿಯ ಮೇಲೆ ಗುರುಸಂಚಾರ ಮಾಡುವ ಕಾಲದಲ್ಲಿ ಅಥವಾ ಸಪ್ತಮಾಧಿಪತಿಯು ಯಾವ ನಕ್ಷತ್ರದಲ್ಲಿರುತ್ತಾನೋ, ಆ ದಶಾ ನಕ್ಷತ್ರಗಳ ಮೇಲೆ ಗುರು ಸಂಚಾರ ಮಾಡುವ ಕಾಲದಲ್ಲಿ, ಸಮಯವನ್ನು ನಿಷ್ಕರ್ಷಿಸುತ್ತಾರೆ.

ದಶಾನಕ್ಷತ್ರದಲ್ಲಿ ಗುರು ಸಂಚಾರದ ಸಮಯದಲ್ಲಿ ಶುಕ್ರನಿಗೆ 1-5-7 ಸ್ಥಾನಗಳಲ್ಲಿ ಗುರುಸಂಚರಿಸುವ ಕಾಲದಲ್ಲಿ ಗುರುಲಗ್ನಕ್ಕೆ2-7 ರಲ್ಲಿ ಸಂಚರಿಸುವಾಗ ದ್ವಿತೀಯ,ಸಪ್ತಮಾದಿಪತಿಗಳ ದಶಾಭುಕ್ತಿಯ ಪ್ರಕಾರ ನಿಶ್ಚಯಿಸಬಹುದಾಗಿದೆ. ಲಗ್ನಕ್ಕೆ 2-7-11 ರಲ್ಲಿರುವ ಗ್ರಹ ಮತ್ತು ಈ ಗ್ರಹ ನಕ್ಷತ್ರಗಳಲ್ಲಿರುವ ಗ್ರಹಗಳು ಕಾರಕರಾಗಿರುತ್ತಾರೆ. ಇದು ಅತ್ಯಂತ ಪ್ರಶಸ್ತ.ಲಗ್ನಕ್ಕೆ 2-7-11ರಲ್ಲಿರುವ ನಕ್ಷತ್ರಗಳಲ್ಲಿ ಯಾವಗ್ರಹವೂ ಇಲ್ಲದಿದ್ದರೆ ಆ ಗ್ರಹಗಳೇ ಕಾರಕರಾಗಿರುತ್ತಾರೆ.

ರಾಜೇಶ್ ಪಾಟೀಲ್|
ಇದು ಮಧ್ಯಮ.ಲಗ್ನಕ್ಕೆ 2-7-11 ರಲ್ಲಿ ಯಾವ ಗ್ರಹಗಳೂ ಇಲ್ಲದಿದ್ದ ಪಕ್ಷದಲ್ಲಿ ಆ ಭಾವಾಧಿಪತಿಗಳೇ ಕಾರಕರಾಗುತ್ತಾರೆ. ಇದು ಸಾಮಾನ್ಯ ಬಲ ಎಂದೆನಿಸಿಕೊಳ್ಳುತ್ತದೆ. ಒಂದೊಮ್ಮೆ ಇವೆಲ್ಲವನ್ನು ಗಣನೆಗೆ ತೆಗೆದುಕೊಳ್ಳದಿದ್ದಲ್ಲಿ ಅಮಂಗಲ ನಿಶ್ಚಿತ. ಹಾಗಾಗಿ ಇಂದಿನ ಸಂದರ್ಭದಲ್ಲಿ ವಿವಾಹವಾಗಿ ಕೆಲವೇ ದಿನಗಳಲ್ಲಿ ವಿಚ್ಛೇದನದಂತಹ ಪ್ರಕರಣವನ್ನು ತಪ್ಪಿಸಲು ಹಾಗೂ ಸುಖಮಯ ದಾಂಪತ್ಯ ಜೀವನವನ್ನು ನಡೆಸಲು ಈ ‘ವಿವಾಹಸಮಯ’ ಕಂಡುಕೊಂಡು ಮುಂದುವರೆದಲ್ಲಿ, ಮುಂದೆ ಬರಬಹುದಾದ ಎಲ್ಲಾ ದಾಂಪತ್ಯ ತೊಂದರೆ ತೊಡಕುಗಳನ್ನು ನಿವಾರಿಸಿಕೊಂಡು ಹೋಗಬಹುದಾಗಿದೆ. ಹಾಗಾಗಿ ಮದುವೆಯಾಗುವ ಮುನ್ನ ಜಾತಕ ಪರಿಶೀಲನೆಗಾಗಿ ಜ್ಯೋತಿಷಿಗಳಲ್ಲಿ ಮೊರೆ ಹೋಗುವುದು ಸೂಕ್ತ.



ಇದರಲ್ಲಿ ಇನ್ನಷ್ಟು ಓದಿ :