ಮೇಷ ರಾಶಿಯಲ್ಲಿ ಜನಿಸಿದವರು ಹೀಗಿರ್ತಾರೆ!

ಭಾರತಿ ಪಂಡಿತ

WD
ಪ್ರತಿ ರಾಶಿಗೂ ಅದರದ್ದೇ ಆದ ಮೂಲ ಗುಣಗಳಿವೆ. ಹಾಗಾಗಿ ಒಂದೊಂದು ರಾಶಿಯಲ್ಲಿ ಜನಿಸಿದವರೂ ಕೂಡಾ ಕೆಲವು ಮೂಲ ಗುಣಗಳನ್ನು ರಾಶಿ ಪ್ರಭಾವದಿಂದ ಪಡೆದಿರುತ್ತಾರೆ. ಮೇಷ ರಾಶಿಯಲ್ಲಿ ಜನಿಸಿದ ಪುರುಷ, ಮಹಿಳೆ ಹಾಗೂ ಮಕ್ಕಳೆಂಬ ಮೂರು ಗುಂಪುಗಳಲ್ಲಿ ಕೆಲವು ಮೂಲ ಗುಣಗಳನ್ನು ಇಲ್ಲಿ ನೀಡಲಾಗಿದೆ.

ಪುರುಷರು: ಮೇಷ ರಾಶಿಯಲ್ಲಿ ಜನಿಸಿದ ಪುರುಷರು ಸ್ವಲ್ಪ ಅಹಂಕಾರಿಗಳು. ತಮ್ಮ ತಪ್ಪನ್ನು ಯಾವತ್ತೂ ಒಪ್ಪಿಕೊಳ್ಳಲು ಅವರು ಸಿದ್ಧರಿರುವುದಿಲ್ಲ. ಆದರೆ, ಇವರು ಉದಾರ ಬುದ್ಧಿಯವರು. ಜತೆಗೆ ಇವರನ್ನು ಹೊಗಳುತ್ತಿದ್ದರೆ, ತುಂಬಾ ಖುಷಿ ಪಡುವ ಜಾಯಮಾನ ಇವರದ್ದು. ಸೇನೆ, ಪೊಲೀಸ್ ಮತ್ತಿತರ ಉದ್ಯೋಗಗಳಿಗೆ ಇವರು ಲಾಯಕ್ಕು. ರಕ್ತವಾತ ಅಥವಾ ಪಿತ್ತಕ್ಕೆ ಸಂಬಂಧಿಸಿದ ರೋಗಗಳಿಂದ ಇವರಿಗೆ ಸ್ವಲ್ಪ ತೊಂದರೆಯಾಗುತ್ತದೆ. ಆದರೆ ಪತ್ನಿ ಪ್ರಿಯರು. ಪತ್ನಿಯ ಸೇವೆ ಮಾಡಲೂ ಕೂಡಾ ಇವರು ಸಿದ್ಧರು. ಇವರಿಗೆ ಎಲ್ಲರೂ ಹೂಂಗುಡುತ್ತಲೇ ಇದ್ದರೆ ಸಂತೋಷ. ಇಲ್ಲವೆಂದು ಉತ್ತರ ಬಂದರೆ ಇವರ ಕೈಯಲ್ಲಿ ಸಹಿಸಲು ಆಗುವುದಿಲ್ಲ.

WD
ಸ್ತ್ರೀಯರು: ಮೇಷ ರಾಶಿಯಲ್ಲಿ ಜನಿಸಿದ ಮಹಿಳೆ ಸಾಮಾನ್ಯಳಾಗಿರುತ್ತಾಳೆ. ಕುಟುಂಬ ಸಂಬಂಧಿ ನಿರ್ಣಯಗಳನ್ನು ಸ್ವಯಂ ತೆಗೆದುಕೊಳ್ಳುವ ಧೈರ್ಯ, ತನ್ನ ಪತಿಯನ್ನು ತನ್ನ ಕಿರುಬೆರಳಲ್ಲೇ ನಿಯಂತ್ರಿಸುವ ಚಾಲಾಕಿತನ ಇವರಿಗಿರುತ್ತದೆ. ಮನೆ ಸಂಬಂಧೀ ಎಲ್ಲ ವಿಚಾರಗಳಲ್ಲೂ ಇವರು ಚೆನ್ನಾಗಿರುತ್ತಾನೆ. ಮನೆಯನ್ನು ಒಪ್ಪವಾಗಿಡುತ್ತಾರೆ. ಧನಾರ್ಜನೆಯಲ್ಲೂ ಇವರಿಗೆ ರುಚಿಯಿರುತ್ತದೆ. ಚೆನ್ನಾಗಿ ತಿನ್ನುವುದು, ಉತ್ತಮ ಬಟ್ಟೆ ತೊಡುವುದು ಇಂತಹ ಆಸೆಗಳು ಇವರಿಗೆ ಇರುತ್ತದೆ.

ಗಮನಿಸಿ
  ಸದ್ಯದಲ್ಲೇ ವೆಬ್‌ದುನಿಯಾ ಕನ್ನಡದ ಓದುಗರ ಜ್ಯೋತಿಷ್ಯದ ಕುರಿತ ಸಂದೇಹಗಳಿಗೆ ಬೆಂಗಳೂರಿನ ಖ್ಯಾತ ಜ್ಯೋತಿಷಿಗಳು ಉತ್ತರಿಸಲಿದ್ದಾರೆ. ವಿವರಗಳಿಗೆ ಸದ್ಯವೇ ನಿರೀಕ್ಷಿಸಿ.      
ಮಕ್ಕಳು: ಈ ರಾಶಿಯಲ್ಲಿ ಜನಿಸಿದ ಮಕ್ಕಳು ಚಂಚಲರು, ತುಂಟರು ಹಾಗೂ ಕಿಲಾಡಿಗಳು. ಒಂದು ಜಾಗದಲ್ಲಿ ಒಂದು ನಿಮಿಷವೂ ನಿಲ್ಲುವ ಸ್ವಭಾವ ಇವರಿಗಿಲ್ಲ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಇವರ ತುಂಟತನದಿಂದಾಗಿ ಇವರು ಆಗಾಗ ಬೀಳುವುದು, ಏಳುವುದು ಇದ್ದದ್ದೇ. ಸಣ್ಣ ಪುಟ್ಟ ಗಾಯಗಳು ಇವರಿಗೆ ಯಾವಾಗಲೂ ಇದ್ದೇ ಇರುತ್ತದೆ. ಇವರು ಉತ್ತಮ ಬುದ್ಧಿ ಶಕ್ತಿ ಹೊಂದಿರುತ್ತಾರೆ. ಆದರೆ ತಲೆಗೆ ಪೆಟ್ಟಾಗುವುದನ್ನು ಮಾತ್ರ ಸ್ವಲ್ಪ ಪೋಷಕರು ನಿಯಂತ್ರಿಸಬೇಕು.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...