Widgets Magazine

ಗೋಚಾರದಲ್ಲಿ ಗುರು ಮತ್ತು ರಾಹುವಿನ ಪಾತ್ರ

ರಾಜೇಶ್ ಪಾಟೀಲ್| Last Updated: ಬುಧವಾರ, 30 ಸೆಪ್ಟಂಬರ್ 2015 (15:53 IST)

PTI
ಪರಮೇಶ್ವರ ಶೃಂಗೇರಿ. ಹಿಂದೂ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರ ಆದಿಕಾಲದಿಂದಲೂ ಅತ್ಯಂತ ಮಹತ್ವಪೂರ್ಣ ಸ್ಥಾನವನ್ನು ಹೊಂದಿದ್ದು ಅದರಲ್ಲೂ ಜಾತಕ ಎನ್ನುವುದು ಮನುಷ್ಯನ ಜೀವನದ ಘಟನಾವಳಿಗಳನ್ನು ವಿವರಿಸುವ ವಿಜ್ಞಾನವೆಂದೇ ಹೇಳಬಹುದು.ಈ ಜಾತಕದ ಪ್ರಕಾರ ಶುಭಾಶುಭಗಳನ್ನು ,ಯೋಗಗಳು ಯಾವ ಸಮಯಕ್ಕೆ ಫಟಿಸುವುದೆಂದು ನಿಶ್ಚಯವಾಗಿ ಹೇಳುವುದಕ್ಕಾಗಿ ದಶಾಭುಕ್ತಿ ಮತ್ತು ಗೋಚಾರ ಎಂಬ ಅಂಶಗಳನ್ನು ಪರಿಗಣಿಸುತ್ತಾರೆ.


PR
ಯಾವಯಾವ ಗ್ರಹಗಳಿಗೆ ಯಾವಯಾವ ಗ್ರಹಗಳು ಮಾರಕವಾಗಿರುತ್ತವೆ. ಅಥವಾ ಯೋಗಕಾರಕವಾಗಿ ಇರುತ್ತವೆ ಎಂಬುದನ್ನು ಆಧರಿಸಿ ನಕ್ಷತ್ರ ಆಧಾರಿತ ದಶಾ ಪದ್ಧತಿಯಿಂದ ಫಲವನ್ನು ನಿಶ್ಚಯಿಸಬಹುದಾಗಿದೆ.

ಅದೇ ರೀತಿ ನಿರಂತರವಾಗಿ ಚಲನೆಯಲ್ಲಿರುವ ಗ್ರಹಗಳ ಪ್ರಭಾವವೇ ಗೋಚಾರ ಎಂದೆನಿಸಿಕೊಳ್ಳುತ್ತದೆ ‘ಗ್ರಹಚಾರ’ ಎಂದೂ ಕರೆಯಿಸಿಕೊಳ್ಳುವ ಈ ಗೋಚಾರದ ಆಧಾರವನ್ನಾಧರಿಸಿಯೇ ಜಾತಕನ ಭವಿಷ್ಯವನ್ನು ಜೋತಿಷ್ಯ ಶಾಸ್ತ್ರದ ಪ್ರಕಾರ ನಿರ್ಣಯಿಸಲಾಗುವುದು. ಚಂದ್ರನು ಒಂದು ರಾಶಿಯಲ್ಲಿ ಎರಡುಕಾಲುದಿನಗಳಲ್ಲಿ ತನ್ನ ಸಂಚಾರ ಮುಗಿಸಿದರೆ ಸೂರ್ಯನಿಗೆ ಮೂವತ್ತು ದಿನಗಳ ಕಾಲ ಬೇಕಾಗುವುದು.ಅದೇ ಒಂದು ರಾಶಿಯಲ್ಲಿ ಗುರುವು ಒಂದು ವರ್ಷವಿದ್ದರೆ ಶನಿಯು ಎರಡುವರೆ ವರ್ಷಗಳ ಕಾಲ ಮಂದಗತಿಯಲ್ಲಿ ಆ ರಾಶಿಯ ಸಂಚಾರವನ್ನು ಪೂರೈಸುತ್ತಾನೆ.ಹಾಗಾಗಿ ವಿಶೇಷವಾಗಿ ಜಾತಕನ ಭವಿಷ್ಯವನ್ನು ಗುರು ಮತ್ತು ಶನಿಯ ಚಲನೆಯನ್ನು ಆಧರಿಸಿ ಈ ಗೋಚಾರ ಭವಿಷ್ಯವನ್ನು ನಿಶ್ಚಯಿಸಲಾಗುವುದು.


ಇದರಲ್ಲಿ ಇನ್ನಷ್ಟು ಓದಿ :