ನಾಲ್ಕು ಬೆರಳಿಗೆ ನವ ರತ್ನಗಳು : ರಾಶಿಗನುಗುಣವಾಗಿ ನಿಮಗ್ಯಾವ ರತ್ನ?

ಮಂಗಳವಾರ, 17 ಸೆಪ್ಟಂಬರ್ 2013 (16:41 IST)

 
PR
ರತ್ನಗಳಲ್ಲಿ ಪ್ರಮುಖವಾಗಿ ಒಂಬತ್ತು ರತ್ನಗಳನ್ನು ಶುಭದಾಯಕ ಎಂಬ ಕಾರಣಕ್ಕೆ ನಾವು ಧರಿಸುತ್ತಿದ್ದೇವೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಕೆಂಪು ಹವಳ, ಬುಧನಿಗೆ ಮರಕತ (ಪಚ್ಚೆ), ಗುರುವಿಗೆ ಹಳದಿ ಪುಷ್ಯರಾಗ, ಶುಕ್ರನಿಗೆ ವಜ್ರ, ಶನಿಗೆ ನೀಲ, ರಾಹುವಿಗೆ ಗೋಮೇದಿಕ ಮತ್ತು ಕೇತುವಿಗೆ ವೈಢೂರ್ಯ.

ಪುಷ್ಯರಾಗ ಮಣಿಯನ್ನು (Yellow sapphire) ತರ್ಜನಿ (ತೋರು) ಬೆರಳಿಗೇ ಧರಿಸಬೇಕೆಂದು ಯಾಕೆ ಸೂಚಿಸುತ್ತಾರೆ? ಯಾಕೆಂದರೆ, ಯಾವುದೇ ವ್ಯಕ್ತಿ ಎಚ್ಚರಿಕೆ ಅಥವಾ ನಿರ್ದೇಶನ ನೀಡುವುದು ಇದೇ ಬೆರಳಿನ ಮೂಲಕ. ಇದೇ ಬೆರಳು ಜಗಳಕ್ಕೂ ಕಾರಣವಾಗುತ್ತದೆ, ಹೀಗಾಗಿ ಎಚ್ಚರದಿಂದಿರುವಂತೆ ಹೇಳಲೂ ಕೆಲಸಕ್ಕೆ ಬರುತ್ತದೆ. ಇದಕ್ಕಾಗಿ ಗುರುವಿನ ರತ್ನ ಪುಷ್ಯರಾಗವನ್ನು ಧರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಈ ಮಣಿಯನ್ನು ಧರಿಸುವುದರಿಂದ ಆ ವ್ಯಕ್ತಿಗೆ ಗಂಭೀರತೆ ಬರುತ್ತದೆ ಮತ್ತು ಆತ ಅನ್ಯಾಯದ ವಿರುದ್ಧ ಜಾಗೃತನಾಗುತ್ತಾನೆ. ಇದು ಧರ್ಮ-ಕರ್ಮದಲ್ಲಿಯೂ ಶ್ರದ್ಧೆ ಹುಟ್ಟಿಸುತ್ತದೆ. ಗುರುವಿನ ಪ್ರಭಾವ ಹೆಚ್ಚಿಸಲು ಮತ್ತು ಅದರ ಅಶುಭ ಫಲಗಳನ್ನು ಕೊನೆಗಾಣಿಸಲು ಈ ರತ್ನವನ್ನು ಧರಿಸಲಾಗುತ್ತದೆ.

ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಮಂತ್ರಿಗಳು, ರಾಜನಾಯಕರು, ನಟರು ಮುಂತಾದವರ ಕೈಯಲ್ಲಿ ಈ ರತ್ನವನ್ನು ಕಾಣಬಹುದು. ಈ ರತ್ನದೊಂದಿಗೆ ಮಾಣಿಕ್ಯವನ್ನೂ ಧರಿಸಿದರೆ, ಅತಿ ಶುಭ ಫಲ ದೊರೆಯುತ್ತದೆ.

ಮಧ್ಯ ಬೆರಳಿನಲ್ಲಿ ನೀಲ ಮಣಿ ಧಾರಣೆ ಮಾಡಿದರೆ, ಅವರು ಆ ಬೆರಳಲ್ಲಿ ಅದರ ಹೊರತು ಬೇರಾವುದೇ ರತ್ನ ಧರಿಸಬಾರದು. ಇಲ್ಲವಾದರೆ ಶುಭ ಫಲ ದೊರೆಯುವುದಿಲ್ಲ. ಈ ಬೆರಳಲ್ಲಿ ಭಾಗ್ಯ ರೇಖೆಯು ಕೊನೆಗೊಳ್ಳುತ್ತದೆಯಾದುದರಿಂದ, ಯಾರಲ್ಲಿ ಭಾಗ್ಯ ರೇಖೆ ಇಲ್ಲವೋ ಅವರು ತಿಳಿದವರಲ್ಲಿ ಕೇಳಿ, ನೀಲ ಮಣಿ ಧರಿಸಿದರೆ, ಲಾಭ ಪಡೆಯಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...