ನಿಮ್ಮದು ಮಿಥುನ ರಾಶಿಯೇ?

ಮಂಗಳವಾರ, 28 ಜನವರಿ 2014 (18:47 IST)

 
PR
ಮಿಥುನ ರಾಶಿಯಲ್ಲಿ ಜನಿಸಿದವರ ಮೂಲ ಸ್ವಭಾವ ಹೆಚ್ಚು ಕಡಿಮೆ ರಾಶಿಯ ಗುಣಸ್ವಭಾವಕ್ಕೆ ಹೊಂದಿಕೊಂಡಿರುತ್ತದೆ. ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಈ ರಾಶಿಯವರು ಬದಲಾದರೂ, ಮೂಲಸ್ವಭಾವ ಎಲ್ಲೋ ಹುದುಗಿಕೊಂಡ ಸ್ಥಿತಿಯಲ್ಲಿ ಇದ್ದೇ ಇರುತ್ತದೆ.

ಪುರುಷ- ಯಾವಾಗಲೂ ಪ್ರೀತಿಯ ಮಳೆ ಸುರಿಸುತ್ತಲೇ ತನ್ನ ಜತೆಗೇ ಇರಬೇಕೆಂದು ಹಪಹಪಿಸುವ ಹುಡುಗಿಯರು ಮಿಥುನ ರಾಶಿಯ ಹುಡುಗರ ಕಡೆಗೆ ವಾಲದಿರುವುದೇ ಉತ್ತಮ. ಕಾರಣ ಮಿಥುನ ರಾಶಿಯ ಪುರುಷರು ಸ್ವಲ್ಪ ಕಾಲ ಪ್ರೀತಿಯ ಮಳೆ ಸುರಿಸಿದರೂ ಕೆಲವು ಕಾಲ ಮಳೆಯೇ ಇಲ್ಲದೆ ಬೆಂಗಾಡಾಗಬಲ್ಲರು. ಇವರಿಗೆ ಸ್ವಲ್ಪ ಸಹನೆ ಕಡಿಮೆಯೇ. ಅತಿ ಬೇಗನೆ ಕೋಪ ನೆತ್ತಿಗೇರುವ, ಉದ್ರಿಕ್ತರಾಗುವ ಸ್ವಭಾವ ಇವರದ್ದು. ಸ್ವಲ್ಪ ಸಂದೇಹವೂ ಹೆಚ್ಚು.

ಮಿಥುನ ರಾಶಿಯ ಒಬ್ಬ ಪುರುಷನೊಂದಿಗೆ ಇರುವುದೆಂದರೆ ಮೂರು ನಾಲ್ಕು ಪುರುಷರೊಂದಿಗೆ ಇದ್ದಂತೆ. ಅರ್ಥಾತ್ ಇವರದು ಬದಲಾಗುತ್ತಿರುವ ಸ್ವಭಾವ. ಇಂಥಹ ಪುರುಷರು ಮೂರು ನಾಲ್ಕು ವ್ಯಕ್ತಿತ್ವಗಳ್ನನು ಹೊಂದಿರುವವರು. ತುಂಬ ಗೆಳೆತನದ ಸ್ವಭಾವ, ಬೇಗ ಹಚ್ಚಿಕೊಂಡುಬಿಡುವ, ಜನರನ್ನು ಬಹುಬೇಗನೆ ನಂಬುವ, ಪ್ರೀತಿಸುವ, ಯಾರ ಜತೆಗಾದರೂ ಏಗಿಬಿಡುವ ಜಾಯಮಾನ ಇವರದ್ದು.

ಮಿಥುನ ರಾಶಿಯವರಿಂಗೆ ಇಂಥವರೇ ಗೆಳೆಯರಾಗಬೇಕೆಂದಿಲ್ಲ. ಯಾರಾದರೂ ಆಗುತ್ತದೆ. ಜತೆಗೆ ಮಿಥುನ ರಾಶಿಯ ಪುರುಷರು ಯಾವ ವಿಚಾರವಾದರೂ ಮಾತನಾಡಬಲ್ಲ ವಾಚಾಳಿ. ಜತೆಗೆ ಸ್ವಲ್ಪ ತಮಾಷೆಯ ಸ್ವಭಾವ ಕೂಡಾ ಇವರಿಗಿರುತ್ತದೆ. ಇವರಿಗೆ ಜಾಲಿಯಾಗಿ ಪಾರ್ಟಿ ಮಾಡೋದೂ ಇಷ್ಟ. ಪಾರ್ಟಿಯಲ್ಲೇ ಹುಡುಗಿಯೊಬ್ಬಳಿಗೆ ಮಿಥುನ ರಾಶಿಯ ಇಷ್ಟವಾದರೆ ಧಾರಳವಾಗಿ ಸಂಗಾತಿಯಾಗಿಸಿಕೊಳ್ಳಬಹುದು. ಯಾಕೆಂದರೆ ಅವರ ನಿಜ ಸ್ವಭಾವ ಪಾರ್ಟಿಯಲ್ಲಿ ಕಾಣಬಹುದು.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...