Widgets Magazine

ನಿಮ್ಮದು ಮಿಥುನ ರಾಶಿಯೇ?

PR
ಹಾಗಂತ, ಇವರಿಗೆ ಯಾವ ಸಂಗಾತಿಯೂ ಸರಿಹೋಗುವುದಿಲ್ಲ ಎಂದಲ್ಲ. ಇಂಥ ಪುರುಷರಿಗೆ ಸರಿಹೋಗುವುದು ಸ್ಪರ್ಧೆಗೆ ಬಿದ್ದು ಪ್ರೀತಿಯಿಂದ ಸೋಲಿಸುವ ಹುಡುಗಿಯರೆಂದರೆ ಇಷ್ಟ. ತನ್ನಂತೆ ಸದಾ ಬದಲಾಗುತ್ತಿರುವ, ಜೀವನವನ್ನು ತುಂಬ ಕುತೂಹಲದಿಂದ ನೋಡುವ, ಏನಾದರೊಂದು ಚಿತ್ರವಿಚಿತ್ರವಾದ ಕೆಲಸ ಮಾಡುತ್ತಲೇ ಇರುವ ಬಹುಮುಖಿ, ಬುದ್ಧಿವಂತ ಹುಡುಗಿಯರಿಂದ ಮಿಥುನ ರಾಶಿಯ ಹುಡುಗರು ಬೇಗನೆ ಇಂಪ್ರೆಸ್ ಆಗುತ್ತಾರೆ.

ಮಿಥುನ ಪುರುಷರಿಗೆ ಅಹಂ ಇರುವುದಿಲ್ಲ. ಅಯ್ಯೋ ತನ್ನನ್ನು ಒಬ್ಬ ಹುಡುಗಿ ಸೋಲಿಸಿಬಿಟ್ಟಳಲ್ಲ, ಇದರಿಂದ ನನ್ನ ಅಹಂಗೆ ಧಕ್ಕೆ ಬಂತಲ್ಲ ಎಂದು ಯೋಚಿಸುವವರು ಇವರಂತೂ ಅಲ್ಲ. ಬದಲಾಗಿ, ತನ್ನನ್ನು ಸೋಲಿಸಿದ ಹುಡುಗಿಯ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತಾರೆ. ಜತೆಗೆ ಆಸಕ್ತಿಯನ್ನೂ.

ಮಿಥುನ ರಾಶಿಯ ಪುರುಷರು ಹಳೇ ಫ್ರೆಂಡುಗಳಿಗೇ ಜೋತುಬೀಳುವವರಲ್ಲ. ಹೊಸ ಹೊಸ ಗೆಳೆಯ ಗೆಳತಿಯರನ್ನು ಮಾಡುತ್ತಲೇ ಇರುತ್ತಾರೆ ಇವರು. ಜನರು, ಗೌಜು, ಗದ್ದಲವನ್ನು ಇಷ್ಟವಡುವ ಇವರು ಏಕಾಂಗಿತನವನ್ನು ಇಷ್ಟಪಡೋದಿಲ್ಲ. ಮಿಥುನ ರಾಶಿಯ ಪುರುಷರ ಹೃದಯ ಕದಿಯಬೇಕೆಂದು ಮನಸ್ಸಾದ ಹುಡುಗಿಯರು ಮಾಡಬೇಕಾದ್ದು ಇಷ್ಟೆ,

ಅವರ ಬಳಿ ಸದಾ ಜೋತು ಬೀಳದೆ, ನಿನಗೆ ನಿನ್ನದೇ ಆದ ಖಾಸಗಿ ತನವ್ನು ಕೊಡುತ್ತೇನೆ ಎಂದು ಭರವಸೆ ನೀಡಿದರೆ ಸಾಕು. ಅಂಥ ಹುಡುಗಿಯರ ಜತೆಗೆ ಮಿಥುನ ರಾಶಿಯ ಬಿಂದಾಸ್ ಆಗಿ ಪ್ರೀತಿಸುತ್ತಾನೆ. ಆತ ನೋಡುವುದನ್ನೆಲ್ಲ ತ್ನ ಹುಡುಗಿಗೂ ತೋರಿಸುತ್ತಾನೆ. ಹೋಗುವಲ್ಲಿಗೆಲ್ಲ ಕರೆದುಕೊಂಡೂ ಹೋಗುತ್ತಾನೆ. ಹಣವನ್ನೂ ಧಾರಾಳವಾಗಿ ಖರ್ಚು ಮಾಡುವ ಇವರ ಕೆಲವೊಮ್ಮೆ ಜಿಪುಣನಂತೆ ವರ್ತಿಸುತ್ತಾರೆ.

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:51 IST)
ಮಿಥುನ ರಾಶಿಯ ಪುರುಷರು ತುಂಬ ಪೊಸೆಸಿವ್ ಅಲ್ಲ. ನೀವು ಆತನನ್ನು ನಂಬಿದರೆ ಆತ ನಿಮ್ಮನ್ನೂ ನಂಬುತ್ತಾನೆ. ಆತನೊಂದಿಗೆ ನಿಮಗೆ ಸೋತಂತೆ ಆನಿಸಿದರೆ ಆತ ನಿಮಗೆ ಧೈರ್ಯ ನೀಡುತ್ತಾನೆ. ನಿಮ್ಮನ್ನು ಉತ್ಸಾಹಿತನನ್ನಾಗಿ ಮಾಡುತ್ತಾನೆ. ರೊಮ್ಯಾನ್ಸಿನಲ್ಲೂ ಮಿಥುನ ರಾಶಿಯ ಪುರುಷರು ಕಡಿಮೆಯೇನೂ ಇಲ್ಲ. ಮಿಥುನ ರಾಶಿಯ ಪುರುಷರು ಉತ್ತಮ ಅಪ್ಪನೂ ಆಗಬಲ್ಲರು. ತನ್ನ ಮಕ್ಕಳನ್ನ ಗೆಳೆಯರಂತೆ ಪ್ರೀತಿಯಿಂದ ನೋಡಬಲ್ಲ ತಾಕತ್ತೂ ಇವರಲ್ಲಿದೆ.



ಇದರಲ್ಲಿ ಇನ್ನಷ್ಟು ಓದಿ :