Widgets Magazine

ನಿಮ್ಮದು ಮಿಥುನ ರಾಶಿಯೇ?

PR
ಮಹಿಳೆ- ಒಬ್ಬ ಮಿಥುನ ರಾಶಿಯ ಹುಡುಗಿಯನ್ನು ಮದುವೆಯಾಗೋದೆಂದರೆ ಇಬ್ಬರು ಹೆಂಡಿರ ಜತೆಗೆ ಜೀವಿಸಿದಂತೆ. ಅರ್ಥಾತ್ ಎರಡೆರಡು ವ್ಯಕ್ತಿತ್ವವನ್ನು ಮಿಥುನ ರಾಶಿಯ ಮಹಿಳೆಯರೂ ಹೊಂದಿರುತ್ತಾರೆ. ಒಬ್ಬರೊಂದಿಗೆ ತುಂಬ ಹಚ್ಚಿಕೊಂಡು ಕಚ್ಚಿಕೊಂಡು ಇರೋದಕ್ಕೆ ಮಿಥುನ ರಾಶಿಯ ಸ್ತ್ರೀಯರಿಗೆ ಸಾಧ್ಯವಾಗೋದಿಲ್ಲ. ಹಾಗೆಯೇ ಒಂದು ಸ್ಥಳಕ್ಕೂ ಅಂಟಿಕೊಂಡು ಬಿಡುವ ಜಾಯಮಾನ ಇವರದಲ್ಲ.

ಬದಲಾವಣೆಯೇ ಜಗದ ನಿಯಮ ಅಂದುಕೊಂಡು ತಿರುಗಾಡುವ ವ್ಯಕ್ತಿತ್ವ ಇವರದು. ಮಿಥುನ ರಾಶಿಯ ಸ್ತ್ರೀಯರನ್ನು ಯೌವನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಅವರಿಗೆ ತುಂಬ ಪ್ರೀತಿ, ನಂಬಿಕೆ, ಕಕ್ಕುಲತೆಯನ್ನು ತೋರಿದಲ್ಲಿ ಮಾತ್ರ ಅವರು ಅಂಥವರಿಗೆ ಅಂಟಿಕೊಂಡು ಬಿಡಬಹುದು. ಇಲ್ಲವಾದರೆ ಪ್ರೀತಿಯನ್ನು ಬೇರೆಲ್ಲಿಯೋ ಅರಸುತ್ತಾರೆ. ಅಷ್ಟೇ ಅಲ್ಲ, ತನ್ನ ಸಂಗಾತಿಯ ತುಂಬ ಕೆಟ್ಟ ಅಭ್ಯಾಸವನ್ನೂ ಈಗ ಸಹಿಸಿಕೊಂಡ ಮಿಥುನ ರಾಶಿಯ ಸ್ತ್ರೀ, ಇನ್ನೊಂದೆರಡೇ ಗಂಟೆಗಳಲ್ಲಿ ಸಂಗಾತಿಯ ಬದಲಾದ ಹೇರ್‌ಸ್ಟೈಲ್‌ಗೂ ತಗಾದೆ, ಚಿರಿಪಿರಿ ತೆಗೆಯುವ ವ್ಯಕ್ತಿತ್ವ ಹೊಂದಿರುತ್ತಾಳೆ!

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:51 IST)
ಮಿಥುನ ರಾಶಿಯ ಸ್ತ್ರೀಯರು ರೊಮ್ಯಾಂಟಿಕ್ ಅಲ್ಲ. ಆದರೆ ರೊಮ್ಯಾನ್ಸ್ ಮಾಡಲು ಬರೋದಿಲ್ಲ ಅಂತೇನೂ ಇಲ್ಲ. ಅವರಿಗೆ ರೊಮ್ಯಾನ್ಸ್ ಅನ್ನೋದು ಕೇವಲ ಸಂವಹನ ಅಷ್ಟೆ. ಜತೆಗೆ ಇಂತಹ ಸ್ತ್ರೀ ತನ್ನ ಪುರುಷನ ಎಲ್ಲ ಗುಣಗಳನ್ನೂ ಎದೆಗವಚಿಕೊಂಡು ಪ್ರೀತಿಸುವ ಜಾಯಮಾನದವಳಲ್ಲ. ತನ್ನ ಪುರುಷನ ಬುದ್ಧಿಮತ್ತೆಯನ್ನು ಪ್ರೀತಿಸುವ ಆಕೆ, ಅದೇ ಕ್ರಿಯೇಟಿವ್ ಅಲ್ಲ ಎಂದು ತೆಗಳಲೂ ರೆಡಿ.



ಇದರಲ್ಲಿ ಇನ್ನಷ್ಟು ಓದಿ :