ರಾಹುದೆಶೆ ಮತ್ತು ರಾಹು ದೋಷ

ಶುಕ್ರವಾರ, 28 ಫೆಬ್ರವರಿ 2014 (11:03 IST)

 
PR
ಕಂಟಕಶನಿ, ಸಾಡೆ ಸಾಥ್ ,ದಶಾಸಂಧಿ, ರಾಹು ಕೇತು ಇವೇ ಮೊದಲಾದುವುಗಳು ಗ್ರಹ ದೋಷಗಳಲ್ಲಿ ಪ್ರಧಾನವಾಗಿರುವವುಗಳು.ಜಾತಕ ಪ್ರಕಾರ ರಾಹು ದೆಶೆ ಅನುಭವಿಸುವವರು ಮತ್ತು ರಾಹು ಅನಿಷ್ಟ ಸ್ಥಾನದಲ್ಲಿರುವವರಿಗೆ ಕೆಲವು ಅಡಚಣೆಗಳು, ಮನೋವೇದನೆಗಳು ಅನುಭವಕ್ಕೆ ಬರುವುದು. ನವಗ್ರಹಗಳಲ್ಲಿ ರಾಹುವಿಗೆ ಸರ್ಪದ ರೂಪವಿದೆ ಎಂದು ನಂಬಿಕೆ.

ಆದುದರಿಂದಲೇ ಗ್ರಹ ಸ್ಥಾನದಲ್ಲಿ 'ಸ' ಎಂಬ ಅಕ್ಷರವನ್ನು ರಾಹುವಿನ ಸ್ಥಾನವನ್ನು ತೋರಿಸಲು ಬಳಸಲಾಗುತ್ತದೆ. ರಾಹು ಯಾವಾಗಲೂ ಒಂದೂವರೆ ಗಂಟೆಗಳಷ್ಟು ಕಾಲ ವಿಷವನ್ನು ಪಸರಿಸುತ್ತಾನೆ ಎಂಬ ಸಂಕಲ್ಪದಿಂದಾಗಿ ಈ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ.ಆದುದರಿಂದಲೇ ಶುಭ ಕಾರ್ಯನಿಮಿತ್ತ ಮನೆಯಿಂದ ಹೊರಡುವುದಾದರೆ ಈ ಘಳಿಗೆಯ ಮೊದಲು ಅಥವಾ ನಂತರ ಹೊರಡುವುದು ಸೂಕ್ತ.

ರಾಹುಕಾಲದಲ್ಲಿ ಪ್ರತಿದಿನವೂ ಪ್ರಾರ್ಥನೆ, ಬಲಿವಾಡು ಮೊದಲಾದವುಗಳನ್ನು ಕೈಗೊಂಡಲ್ಲಿ ದೋಷ ಪರಿಹಾರವಾಗುವುದು. ಭಾನುವಾರ ಸಂಜೆ 4.30 ರಿಂದ 6 ಗಂಟೆಯ ವರೆಗೆ ರಾಹುವಿಗೆ ಬಲಿವಾಡು ಅರ್ಪಿಸಲು ತಕ್ಕುದಾದ ಸಮಯವಾಗಿದೆ.

ಶಿವನ ಅವತಾರವಾದ ಶರಭೇಶ್ವರನನ್ನು ಪ್ರಾರ್ಥಿಸುವುದರಿಂದ ರಾಹುದೋಷ ಪರಿಹಾರವಾಗುವುದು. ರಾಶಿ ಚಕ್ರದಲ್ಲಿ ರಾಹುವಿನ ಇಷ್ಟ ಸ್ಥಾನವು 3,6,11 ಆಗಿದ್ದು ಮಿಥುನ ರಾಶಿ ಉಚ್ಛವೂ ಧನುರಾಶಿ ನೀಚವೂ ಆಗಿರುವುದು.

ಶನಿಮಂಡಲ ಮತ್ತು ಗುರುಮಂಡಲದ ನಡುವೆ ರಾಹು ಕೇತುಗಳ ಸ್ಥಾನವಿರುವುದು. 18 ವರುಷಗಳನ್ನು ಬಳಸಿ ಅವುಗಳು ಸೂರ್ಯನ ಸುತ್ತ ಒಮ್ಮೆ ಭ್ರಮಣ ನಡೆಸುತ್ತವೆ. ಒಂದೂವರೆ ವರ್ಷಗಳಷ್ಟು ಕಾಲ ರಾಹು ಒಂದು ರಾಶಿಯಲ್ಲಿ ತಂಗುತ್ತದೆ.ಆ ರಾಶಿಯ ಏಳನೇ ರಾಶಿಯಲ್ಲಿ ಅಷ್ಟೇ ಸಮಯದ ವರೆಗೆ ಕೇತುವೂ ಇರುತ್ತದೆ. ಆದರೆ ಕೌತುಕದ ವಿಷಯವೇನೆಂದೆರ ರಾಹು ಕೇತುಗಳು ಹಿಂದಕ್ಕೆ ಚಲಿಸುವವುಗಳಾಗಿವೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...