Widgets Magazine

ಸಂಖ್ಯಾಶಾಸ್ತ್ರ: ನಿಮ್ಮ ರಾಶಿಯಲ್ಲಿ 11-11-11ರ ಪ್ರಭಾವ

ರಾಜೇಶ್ ಪಾಟೀಲ್| Last Updated: ಬುಧವಾರ, 30 ಸೆಪ್ಟಂಬರ್ 2015 (16:05 IST)

WD
11-11-11 ದಿನಾಂಕ ಶುಭಯೋಗ, ಅಭಿವೃದ್ಧಿ, ಸಕಾರಾತ್ಮಕ ಬದಲಾವಣೆ, ನೆರೆಹೊರೆಯ ರಾಷ್ಟ್ರಗಳ ಮಧ್ಯೆ ಸೌಹಾರ್ದ ವಾತಾವರಣ, ಜನರಲ್ಲಿರುವ ಭ್ರಷ್ಟಾಚಾರವನ್ನು ಹೊಡೆದೊಡಿಸಿ ಪ್ರಾಮಾಣಿಕರಾಗುವತ್ತ ಪರಿವರ್ತನೆಯನ್ನು ತರುತ್ತದೆ. ದಿನಾಂಕ ಸಮಸಂಖ್ಯೆಗಳಲ್ಲಿ ಬಂದಾಗ ಇಂತಹ ಯೋಗ ಉಂಟಾಗುತ್ತದೆ.

ಜ್ಯೋತಿಷಿ ಪಂಡಿತ ಅಮರ್ ಡಬ್ಬಾವಾಲಾ ಅವರ ಪ್ರಕಾರ 11 ನೇ ತಾರೀಖು 11 ನೇ ತಿಂಗಳು ಮತ್ತು 11ನೇ ವರ್ಷದಿಂದ ಸಂಖ್ಯಾಯೋಗ 33 ಬೆಸಸಂಖ್ಯೆಯಾಗುತ್ತದೆ. ಒಂದು ವೇಳೆ ಇದನ್ನು ಕೂಡಿಸಿದಲ್ಲಿ ಸಂಖ್ಯೆ 6 ಆಗುತ್ತದೆ. ಇದು ಸಮಸಂಖ್ಯೆಯಾಗಿದೆ, ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆ 6 ಬಂದಾಗ ಬುಧ ಮತ್ತು ಶುಕ್ರ ಗ್ರಹದ ಬೆಂಬಲ ದೊರೆಯುತ್ತದೆ.

11 ನವೆಂಬರ್‌ನಂದು ಶನಿದೇವ ಶುಕ್ರನ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ, ಯೋಗ ಸಂಯೋಗದ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯೂ ಬುಧ, ಶುಕ್ರ ಅಥವಾ ಶನಿ ರಾಶಿಗೆ ಸಂಬಂಧಿಸಿದ್ದಾಗಿರುತ್ತದೆ.


WD
ಕೆಲ ಪರಿಣಾಮ ಬೀರುವ ಅಂಶಗಳು

ಆಧುನಿಕತೆ ಅಥವಾ ಅಭಿವೃದ್ಧಿ: ಅಭಿವೃದ್ಧಿ ಕ್ಷೇತ್ರದಲ್ಲಿ ಭಾರಿ ಪರಿವರ್ತನೆಯಾಗುವುದನ್ನು ಕಾಣಬಹುದಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಕಾರ್ಯಗಳು ಅನುಷ್ಠಾನಗೊಳ್ಳುತ್ತವೆ.

ವಿಕ್ಷಾನ ಅಥವಾ ತಂತ್ರಜ್ಞಾನ: ಮುಂದಿನ 11 ವರ್ಷಗಳಲ್ಲಿ ನೂತನ ತಂತ್ರಜ್ಞಾನ, ಆಧುನಿಕತೆ, ಹೊಸ ಹೊಸ ಅವಿಷ್ಕಾರಗಳನ್ನು ಕಾಣಬಹುದಾಗಿದೆ. ವಿಜ್ಞಾನ, ಸಂಚಾರ, ತಂತ್ರಜ್ಞಾನ, ಜೈವಿಕತೆ,ಅನುವಂಶಿಕತೆ, ರಾಸಾಯನಿಕ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ವಿಶೇಷ ಪರಿವರ್ತನೆಗಳನ್ನು ನೋಡಬಹುದಾಗಿದೆ.

ಸಾಮಾಜಿಕ: ಮನುಷ್ಯರಲ್ಲಿ ಶುಭಸಂಗತಿಗಳ ಪ್ರಭಾವ ಹೆಚ್ಚಾಗುತ್ತದೆ. ಉತ್ಸಾಹ ಹೆಚ್ಚಾಗುತ್ತದೆ, ಸಾಮಾಜಿಕ, ನೈತಿಕತೆ ಪುನರ್‌ಸ್ಥಾಪನೆಯಾಗುತ್ತವೆ.

ಆರ್ಥಿಕ: ವಿಶ್ವ ಆರ್ಥಿಕತೆಯಲ್ಲಿ ಶ್ರೇಷ್ಠ ಬದಲಾವಣೆಗಳಾಗಲಿವೆ. ಪರಿವರ್ತನೆಗಳೊಂದಿಗೆ ಭಾರಿ ಪ್ರಮಾಣದ ಅಭಿವೃದ್ಧಿ ಕಂಡುಬರಲಿವೆ.


ಇದರಲ್ಲಿ ಇನ್ನಷ್ಟು ಓದಿ :