Widgets Magazine

2011 ಕ್ರಿಸ್ಟ್‌ಮಸ್: ಯಾವ ರಾಶಿಯವರಿಗೆ ಯಾವ ಉಡುಗೊರೆ?

ನಾಗೇಂದ್ರ ತ್ರಾಸಿ| Last Updated: ಬುಧವಾರ, 30 ಸೆಪ್ಟಂಬರ್ 2015 (16:05 IST)
ಮನೀಷ್ ಕೌಶಿಕ

 
PR
ನಮ್ಮೆಲ್ಲ ಓದುಗರಿಗೆ ಕ್ರಿಸ್ಟ್‌ಮಸ್ ಹಬ್ಬದ ಶುಭಾಶಯಗಳು- ಅಂದ ಹಾಗೆ ಈ ಸುಸಂದರ್ಭದಲ್ಲಿ ಆತ್ಮೀಯರಿಗೆ ನೀವು ಯಾವ ಉಡುಗೊರೆ ನೀಡಲು ಬಯಸುತ್ತೀರಿ? ಇದರಂತೆ ವಿವಿಧ ರಾಶಿಗೆ ಸೇರಿದವರು ಯಾವೆಲ್ಲ ಉಡುಗೊರೆ ನೀಡಿದರೆ ಅತ್ಯುತ್ತಮ ಎಂಬುದನ್ನು ತಿಳಿಯಲು ಬಯಸುವಿರಾ. ಹಾಗಿದ್ದಲ್ಲಿ ಬನ್ನಿ ಕ್ರಿಸ್ಟ್‌ಮಸ್ ನಿಮ್ಮ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಹಾಗೆಯೇ ಯಾವೆಲ್ಲ ಗಿಫ್ಟ್ ನೀಡಿದರೆ ಉತ್ತಮ ಎಂಬುದನ್ನು ತಿಳಿಯಲು ಒಮ್ಮೆ ಕಣ್ಣಾಯಿಸಿ...

ಮೇಷ: ಈ ರಾಶಿಯ ವ್ಯಕ್ತಿಗಳಿಗೆ ಕ್ರಿಸ್ಟ್‌ಮಸ್ ಹೊತಸಾದ ಉಲ್ಲಾಸವನ್ನು ತರಲಿದೆ. ಇತರರಿಗೆ ಮಾದರಿಯಾಗುವ ಸುಸಂದರ್ಭ. ಆತ್ಮೀಯ ಗೆಳೆಯರ ಸಂಪರ್ಕದೊಂದಿಗೆ ತಮಾಷೆ, ಹರಟೆಯಲ್ಲಿ ಭಾಗಿಯಾಗಲಿದ್ದೀರಿ. ನಿಮ್ಮ ಇಷ್ಟದ ಸ್ಥಳಕ್ಕೆ ಅಚ್ಚರಿಯ ಪ್ರಯಾಣ. ವಿಶೇಷ ಔತಣಕೂಟದ ಅವಕಾಶ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಲಿದೆ. ಯುವತಿಯರು ಇಷ್ಟಪಟ್ಟ ವ್ಯಕ್ತಿಯೊಂದಿಗೆ ವಿವಾಹ ಬಂಧನ ನೆರವೇರಲಿದೆ. ಚಿನ್ನಾಭರಣಗಳ ಖರೀದಿ ಸಾಧ್ಯತೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರನ್ನು ಗೌರವಿಸಿದಲ್ಲಿ ನಿಮ್ಮ ಗೌರವಗಳು ಹೆಚ್ಚಾಗಲಿವೆ. ಕೆಂಪು ಬಣ್ಣದ ಟೋಪಿ ಅಥವಾ ಸ್ಕಾರ್ಫ್ ಉಡುಗೊರೆಯಾಗಿ ನೀಡುವುದು ಉತ್ತಮ. ಮಹಿಳೆಯರಿಗೆ ನೀಡುವ ಆಭರಣದಲ್ಲಿ ವಜ್ರವಿದ್ದಲ್ಲಿ ಉತ್ತಮ. ಕ್ರಿಸ್‌ಮಸ್ ಹಬ್ಬಕ್ಕೆ ಸಂಬಂಧಿಸಿದ ಚಿಲನಚಿತ್ರಗಳು ಮತ್ತು ಸಂಗೀತದ ಸಿಡಿಗಳು ಉಡುಗೊರೆಯಾಗಿ ನೀಡಬಹುದು.

ವೃಷಭ: ಈ ರಾಶಿಯವರು ಕೆಲಮಟ್ಟಿಗೆ ನಾಚಿಕೆಪಡುವ, ವಾಸ್ತವತೆಯನ್ನು ಅರಿಯುವ ಸರಳ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಐಷಾರಾಮಿ ಜೀವನ ಬಯಸುವುದಿಲ್ಲ. ಸರಳವಾಗಿ ಯಾರ ಹಂಗಿಲ್ಲದ ಬದುಕನ್ನು ಬಯಸುತ್ತಾರೆ. ದುಂದುವೆಚ್ಚ ಮಾಡುವವರಲ್ಲ. ನಿಸರ್ಗದ ಚೆಲುವಿಗೆ, ಪುಸ್ತಕಗಳಿಗೆ ಮಾರುಹೋಗುವ ಗುಣವನ್ನು ಹೊಂದಿರುತ್ತಾರೆ. ನಿಮ್ಮ ಅಭಿಲಾಷೆಗಳು ಪ್ರಸಕ್ತ ವರ್ಷದಲ್ಲಿ ಈಡೇರಲಿವೆ. ನೀವು ಮೆಚ್ಚಿದ ಯುವಕ ಅಥವಾ ಯುವತಿಯೊಂದಿಗೆ ವಿವಾಹ ನೇರವೇರುತ್ತದೆ. ದೂರದ ಊರಿನಿಂದ ಉದ್ಯೋಗದ ಕರೆ ಬರುವ ನಿರೀಕ್ಷೆಗಳಿವೆ. ಇತರರೊಂದಿಗೆ ಹಣದ ವ್ಯವಹಾರ ನಿಮಗೆ ನಷ್ಟ ತರಲಿದೆ. ಗೆಳೆಯರನ್ನು ನಂಬಿ ಹಣ ನೀಡಬೇಡಿ. ಪತಿ ಮತ್ತು ಪತ್ನಿಯ ಮಧ್ಯೆ ಪ್ರೇಮ ಸಲ್ಲಾಪ ಹೆಚ್ಚಾಗಲಿದೆ. ದುಂದು ವೆಚ್ಚ ನಿಮಗೆ ಸಂಕಷ್ಟ ತರಲಿದೆ ಎನ್ನುವುದು ಮರೆಯಬೇಡಿ. ರೇಷ್ಮೆ ಸ್ಕಾರ್ಫ್ ಮತ್ತು ಅಲಂಕೃತ ಕುಶನ್‌ಗಳು ಅಥವಾ ಇಷ್ಟದ ಕಲಾಕಾರನ ಪೇಟಿಂಗ್ ಚಿತ್ರಗಳು ನೀಡಬಹುದು. ಸುಗಂಧ ದೃವ್ಯಗಳನ್ನು ನೀಡಬಹುದು.

ಮಿಥುನ: ಈ ರಾಶಿಯವರಿಗೆ ಉಡುಗೊರೆ ತುಂಬಾ ಇಷ್ಟವಾಗುತ್ತದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಉಡುಗೊರೆ ಇವರ ಮನವನ್ನು ಸೆಳೆಯುತ್ತದೆ. ನೀವು ಪ್ರೀತಿಸುವ ವ್ಯಕ್ತಿಗಳಿಗೆ ಕ್ರಿಸ್ಟ್‌ಮಸ್ ಕೊಡುಗೆ ತುಂಬಾ ಸ್ಮರಣಿಯವಾಗಿರಲಿದೆ. ನಿಮ್ಮ ಆಸೆಗಳು ಈಡೇರಲಿವೆ. ಬಯಸಿದ ವ್ಯಕ್ತಿಯೊಂದಿಗೆ ನಿಮ್ಮ ಮದುವೆಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನಿಮ್ಮನ್ನು ಪ್ರಿತಿಸುವವರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಬೇಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗುರು ಹಿರಿಯರನ್ನು ಗೌರವಿಸಿ. ಉತ್ತಮ ಆರೋಗ್ಯ ವಿದೇಶ ಪ್ರವಾಸ ಸಾಧ್ಯತೆ.

ಕಟಕ: ಈ ರಾಶಿಯವರಿಗೆ ಕ್ರಿಸ್ಟ್‌ಮಸ್ ಉಡುಗೊರೆಯಾಗಿ ಯಾವ ವಸ್ತುಗಳನ್ನು ನೀಡಿದರೂ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಉಡುಗೊರೆಯ ಮೌಲ್ಯಕ್ಕಿಂತ ಉಡುಗೊರೆ ನೀಡಿದ ವ್ಯಕ್ತಿ ಪ್ರಮುಖವಾಗುತ್ತಾನೆ. ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಎದುರಾಗಲಿವೆ. ವಿವಾಹ ಬಂಧನ ಸಾಧ್ಯತೆ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವಾಗುವ ಸಾಧ್ಯತೆಗಳಿವೆ. ವಿದೇಶಿ ಪ್ರವಾಸದ ಯೋಗವಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರನ್ನು ಗೌರವಿಸುವುದರಿಂದ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ಕ್ಯಾಮರಾ, ಐದು ವರ್ಷಗಳ ಡೈರಿ, ಅಡುಗೆ ಪುಸ್ತಕಗಳು, ಟೆಡ್ಡಿ ಬೇರ್, ಅಲಂಕೃತವಾದ ಗ್ಲಾಸ್‌ಗಳು, ವೈಯಕ್ತಿಕತೆಗೆ ಸ್ಪಂದಿಸುವ ಉಡುಗೊರೆಗಳು ತುಂಬಾ ಇಷ್ಟವಾಗುತ್ತವೆ.

ಸಿಂಹ: ಈ ರಾಶಿಯ ವ್ಯಕ್ತಿಗಳು ವಿಶ್ವಾಸಪಾತ್ರ ವ್ಯಕ್ತಿಗಳಾಗಿರುತ್ತಾರೆ. ಸದಾ ಕೇಂದ್ರಬಿಂದುವಾಗಲು ಬಯಸುತ್ತಾರೆ. ಕೆಲ ಬಾರಿ ಮಕ್ಕಳಂತೆ ಕೂಡಾ ವರ್ತಿಸಿ ತಮಾಷೆಗೆ ಶರಣಾಗುತ್ತಾರೆ. ಆಕರ್ಷಕ ಉಡುಗೊರೆಗಳನ್ನು ನೀಡಿದಲ್ಲಿ ತುಂಬಾ ಸಂತಸದಿಂದ ಸ್ವೀಕರಿಸುತ್ತಾರೆ. ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ಕಳೆಯುವುದು ತುಂಬಾ ಇಷ್ಟವಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ. ನಿಮ್ಮ ಬಾಳಲ್ಲಿ ಹೊಸ ಸಂತಸ ಮೂಡಿಬರಲಿದೆ. ದುಂದುವೆಚ್ಚದಿಂದ ದೂರವಿರಿ. ಗೆಳೆಯರನ್ನು ನಂಬಿ ಹಣಕಾಸಿನ ವೆಚ್ಚ ಬೇಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಡಿಸೈನ್‌ ಬ್ಯಾಗ್‌ಗಳು, ವಾಚ್‌ಗಳು ಪರ್ಸ್‌ ಮತ್ತು ಬಟ್ಟೆಗಳು ಹಾಗೂ ದುಬಾರಿಯಾದ ಸುಗಂಧ ದ್ರವ್ಯಗಳು ಉಡುಗೊರೆಯಾಗಿ ನೀಡುವುದರಿಂದ ಅವರ ಮನಸ್ಸನ್ನು ಗೆಲ್ಲಬಹುದು.

ಕನ್ಯಾ: ಈ ರಾಶಿಯ ವ್ಯಕ್ತಿಗಳು ಇತರರ ಜೀವನೋದ್ಧಾರಕ್ಕಾಗಿ ಶ್ರಮಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ಭಾರಿ ಮೌಲ್ಯದ ಉಡುಗೊರೆಗಳು ಇಷ್ಟವಾಗುತ್ತವೆ. ಶಿಸ್ತುಬದ್ಧ ಜೀವನದಿಂದಾಗಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನೃತ್ಯ, ಪುಸ್ತಕಗಳನ್ನು ತುಂಬಾ ಇಷ್ಟಪಡುತ್ತಾರೆ. ರುಚಿ, ರುಚಿಯಾದ ಅಡುಗೆ ಮಾಡುವುದರಲ್ಲೂ ಪ್ರವೀಣರಾಗಿರುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗೆಳೆಯರೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಇತಿ ಮಿತಿಗಳಿರಲಿ. ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ. ನೀವು ಇಷ್ಟಪಟ್ಟ ವ್ಯಕ್ತಿಗಳೊಂದಿಗೆ ನಿಮ್ಮ ವಿವಾಹವಾಗಲಿದೆ. ದೂರದ ಊರಿನಿಂದ ಉದ್ಯೋಗಕ್ಕಾಗಿ ಕರೆ ಬರುವ ಸಾಧ್ಯತೆಗಳಿವೆ.ಇಷ್ಟವಾದ ಲೇಖಕನ ಪುಸ್ತಕಗಳು, ಅಡುಗೆ ತಯಾರಿಸುವ ವಸ್ತುಗಳು, ಐಸ್‌ಕ್ರೀಮ್ ತಯಾರಿಕೆ ಉಪಕರಣ, ವಿಳಾಸದ ಪುಸ್ತಕಗಳು, ಹ್ಯಾಂಡ್‌ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಬಹುದು.

ತುಲಾ: ಈ ರಾಶಿಯ ವ್ಯಕ್ತಿಗಳಿಗೆ ಸುಂದರವಾದ, ಕಲಾಕೃತಿಯ ಕ್ರಿಸ್ಟ್‌ಮಸ್ ಉಡುಗೊರೆಗಳು ತುಂಬಾ ಇಷ್ಟವಾಗುತ್ತವೆ. ಸುಂದರವಾದ ಹೂವುಗಳು, ಫ್ಯಾಶನ್ ಬಟ್ಟೆಗಳು, ಚಿನ್ನಾಭರಣ ಮತ್ತು ಸುಗಂಧ ದ್ರವ್ಯಗಳು ಇಷ್ಟವಾಗುತ್ತವೆ. ಕ್ರಿಸ್ಟ್‌ಮಸ್ ಸುಸಂದರ್ಭದಲ್ಲಿ ಇಷ್ಟವಾದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವ ಅವಕಾಶಗಳಿವೆ. ನೀವು ಮೆಚ್ಚಿದವರೊಂದಿಗೆ ವಿವಾಹವಾಗಲಿದೆ. ಗೆಳೆಯರನ್ನು ನಂಬಿ ಹಣದ ವಹಿವಾಟು ಮಾಡದಿರುವುದು ಲೇಸು. ದುಂದು ವೆಚ್ಚ ನಿಮಗೆ ನಷ್ಟ ತರಲಿದೆ. ಮನೆಯಲ್ಲಿರುವ ಹಿರಿಯರನ್ನು ಗೌರವಿಸಿದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಶುಭವಾಗಲಿದೆ. ಸಂತಸದ ಕ್ಷಣಗಳು ನಿಮ್ಮದಾಗಲಿವೆ. ಕಥೆಗಳ ಪುಸ್ತಕ, ವಿಡಿಯೋ ಕ್ಯಾಮರಾ, ಸನ್‌ಗ್ಲಾಸ್‌ಗಳು, ಸ್ಕಾರ್ಫ್ ಅಥವಾ ಟೋಪಿ, ವಾಚ್‌ಗಳು, ರೇಷ್ಮೆ ಕುರ್ತಿಸ್‌ಗಳು, ಹ್ಯಾಂಡ್‌ಬ್ಯಾಗ್‌ಗಳು ಉಡುಗೊರೆಯಾಗಿ ನೀಡಬಹುದು.

ವೃಶ್ಚಿಕ: ಈ ರಾಶಿಯವರು ವಿಶೇಷ ಸಂದರ್ಭಗಳಲ್ಲಿ ತುಂಬಾ ತಮಾಷೆಯ ಗುಣವನ್ನು ಹೊಂದಿರುತ್ತಾರೆ. ತಾವು ನಕ್ಕು ಇತರರನ್ನು ನಗಿಸುವ ಸ್ವಭಾವದವರು. ಧಾರ್ಮಿಕ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿರುತ್ತಾರೆ. ಆಕರ್ಷಕ ವಸ್ತುಗಳನ್ನು ಉಡುಗೊರೆಯಾಗಿ ಬಯಸುತ್ತಾರೆ. ಯಾವುದೇ ಉದ್ಯೋಗದಲ್ಲಿರಲಿ ತುಂಬಾ ಬಿಜಿಯಾಗಿರಲು ಬಯಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ಮದುವೆಯಾಗುವ ಸಾಧ್ಯತೆಗಳಿವೆ. ಗುರುಹಿರಿಯರನ್ನು ಗೌರವಿಸಿ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ದುಂದುವೆಚ್ಚ ಮಾಡಿದಲ್ಲಿ ತುಂಬಾ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಚಿನ್ನದ ಉಂಗುರ, ಗಿಫ್ಟ್ ವೋಚರ್, ಸಿಡಿ, ಪೇಟಿಂಗ್ ಚಿತ್ರಗಳು, ಉನ್ನತ ಬ್ರಾಂಡ್‌ನ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡಬಹುದು.

ಧನಸ್ಸು: ಈ ರಾಶಿಯವರು ಐಷಾರಾಮಿ ಬದುಕನ್ನು ಬಯಸುವವರು. ಹೊಸ ವರ್ಷದಲ್ಲಿ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕುತ್ತಾರೆ. ನಾಯಿ ಮತ್ತು ಕುದುರೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಹಿತ್ಯ, ರಾಜಕೀಯ, ಮಾನವತೆ, ಧಾರ್ಮಿಕ ಭಾವನೆಗಳನ್ನು ಹೆಚ್ಚಾಗಿ ಗೌರವಿಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನಿಮ್ಮ ಪ್ರೇಮ ಸಲ್ಲಾಪಗಳು ಮುಂದುವರಿಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ವಿವಾಹವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಯೋಗ ಶೀಘ್ರದಲ್ಲಿ ಕೂಡಿಬರಲಿದೆ. ದಾಂಪತ್ಯ ಜೀವನ ಸುಖಮಯವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ದುಂದು ವೆಚ್ಚ ಬೇಡ. ನೆರೆಹೊರೆಯವರನ್ನು ಮತ್ತು ಗೆಳೆಯರ ಸಲಹೆಗಳಿಗೆ ಸ್ಪಂದಿಸಿ. ಪುಸ್ತಕಗಳು( ವಿಶೇಷವಾಗಿ ಸಾಮಾಜಿಕ, ರಾಜಕೀಯ, ಮಾನವತೆ, ಸ್ವಯಂ ಅಭಿವೃದ್ಧಿ, ಪ್ರವಾಸ, ವಿದೇಶದ ಮಹತ್ವದ ಸ್ಥಳಗಳು), ಕ್ಯಾಮರಾ, ರಾತ್ರಿ ಭೋಜನಕೂಟ, ವಿದೇಶಿ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಬಹುದು.

ಮಕರ: ಈ ರಾಶಿಯವರು ಸುಮಧುರ ಸಂಗೀತ, ನಗೆ ಚಟಾಕಿ, ಕ್ರೀಡಾಪಟುವಿನ ಗುಣಗಳನ್ನು ಹೊಂದಿರುತ್ತಾರೆ. ಉಪಯೋಗಕ್ಕೆ ಬರುವ ಉಡುಗೊರೆಗಳನ್ನು ಮಾತ್ರ ಇಷ್ಟಪಡುತ್ತಾರೆ. ಆಭರಣಗಳು, ಬ್ರೀಫ್‌ಕೇಸ್, ಸಾಹಿತ್ಯ, ಸುಗಂಧ ದ್ರವ್ಯಗಳನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ಕುಟುಂಬದವರ ಇಚ್ಚೆಗೆ ಅನುಸಾರವಾಗಿ ನಡೆದು ಪ್ರೀತಿಗೆ ಪಾತ್ರರಾಗುತ್ತಾರೆ. ಹಿರಿಯರನ್ನು ಗೌರವಿಸಿದಲ್ಲಿ ಕುಟುಂಬದಲ್ಲಿ ನಿಮ್ಮ ಘನತೆ, ಗೌರವಗಳು ಹೆಚ್ಚಾಗುತ್ತವೆ. ವಿದೇಶ ಪ್ರಯಾಣದ ಯೋಗವಿದೆ. ಗೆಳೆಯರನ್ನು ನಂಬಿ ದುಂದು ವೆಚ್ಚ ಮಾಡಿದಲ್ಲಿ ನಷ್ಟ ಎದುರಿಸುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ಕಂಕಣಬಲ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉದ್ಯೋಗದ ಅವಕಾಶಗಳು ದೊರೆಯಲಿವೆ. ಚಿನ್ನಾಭರಣಗಳು, ಬ್ರೀಫ್‌ಕೇಸ್, ಮಾಹಿತಿ ಪೂರ್ಣ ಪುಸ್ತಕಗಳು ಮತ್ತು ವಿಡಿಯೋಗಳು, ಸುಗಂಧ ದ್ರವ್ಯಗಳು, ಸ್ಕಾರ್ಫ್ ಗೃಹಾಲಂಕೃತ ವಸ್ತುಗಳಾದ ಪರದೆಗಳು, ಬೆಡ್‌ಶೀಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು.

ಕುಂಭ: ಈ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವ ಅಳೆಯುವುದು ಸುಲಭವಲ್ಲ. ಕ್ರಿಸ್ಟ್‌ವೆಸ್ ವೇಳೆ ಅವರಿಗೆ ಇಷ್ಟವಾದ ವಸ್ತುಗಳನ್ನು ಗಮನಿಸಿ ಉಡುಗೊರೆ ಕೊಡುವುದು ಉಚಿತ. ಭವಿಷ್ಯದ ಬದಲಾವಣೆಗಳ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ರಾಜಕೀಯ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ಪ್ರೀತಿಸಿದ ವ್ಯಕ್ತಿಯೊಂದಿಗೆ ಸಂಜೆ ವಿಹಾರಕ್ಕೆ ತೆರಳಿ ಮನಬಿಚ್ಚಿ ಮಾತನಾಡಿದಲ್ಲಿ ತುಂಬಾ ಸಂತೋಷವಾಗುತ್ತದೆ. ಏಕಾಂಗಿಯಾಗಿರಲು ಇಷ್ಟಪಡದೆ ಸದಾ ಗುಂಪಿನಲ್ಲಿರಲು ಬಯಸುತ್ತಾರೆ. ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವ ಯೋಗವಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿರಲಿ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು. ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳು, ಬೆಡ್‌ರೂಂಗಾಗಿ ಪೋರ್ಟೇಬಲ್ ಟಿವಿ, ಡಿಜಿಟಲ್ ಕ್ಯಾಮರಾ, ಡಿವಿಡಿ ಪ್ಲೇಯರ್, ಮೊಬೈಲ್ ಫೋನ್, ಚಿನ್ನಾಭರಣಗಳು, ರೇಷ್ಮೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು.

ಮೀನ: ಈ ರಾಶಿಯ ವ್ಯಕ್ತಿಗಳು ಸೂಕ್ಷ್ಮಮತಿಯರಾಗಿರುತ್ತಾರೆ. ಇತರರು ತಮಗೆ ಇಷ್ಟವಾದ ಉಡುಗೊರೆಯನ್ನು ನೀಡಬೇಕು ಎಂದು ಬಯಸುತ್ತಾರೆ. ಕಡಿಮೆ ಮೌಲ್ಯದ ವಸ್ತುಗಳನ್ನು ಬಯಸುವುದರಿಂದ ಇತರರಿಗೆ ತೊಂದರೆಯಾಗುವುದಿಲ್ಲ. ವರ್ಷದ ಆರಂಭದಿಂದ ಅಂತ್ಯದವರೆಗೆ ಶುಭಫಲಗಳು ದೊರೆಯಲಿವೆ. ಗೆಳೆಯರನ್ನು ನಂಬಿ ಮೋಸಹೋಗಬೇಡಿ, ದುಂದು ವೆಚ್ಚ ಸಲ್ಲದು. ಮುಂದಿನ ದಿನಗಳಲ್ಲಿ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ವಿವಾಹಯೋಗವಿದೆ. ನಿರುದ್ಯೋಗಿಗಳಿಗೆ ದೂರದ ಊರಿನಿಂದ ಉದ್ಯೋಗವಕಾಶಗಳು ದೊರೆಯಲಿವೆ. ಶೂಗಳು, ಹೂವುಗಳು, ಕವಿತೆಗಳಿರುವ ಪುಸ್ತಕ, ಸಂಗೀತದ ಉಪಕರಣ, ಆಯಿಲ್ ಪೇಂಟ್, ಟ್ರಾವೆಲ್ ಬ್ಯಾಗ್, ಪಾಸ್‌ಪೋರ್ಟ್ ಕವರ್, ರೋಮಾಂಟಿಕ್ ಕಥೆ ಪುಸ್ತಕ, ಟಾಯ್‌ಗಳನ್ನು ಕೂಡಾ ಉಡುಗೊರೆಯಾಗಿ ನೀಡಬಹುದು.


ಇದರಲ್ಲಿ ಇನ್ನಷ್ಟು ಓದಿ :